Asianet Suvarna News Asianet Suvarna News

ರೈಲು ದುರಂತ ಸ್ಥಳದಲ್ಲಿ 3 ರಾತ್ರಿ, 2 ಹಗ​ಲು ಬಿಡುವಿಲ್ಲದೆ ಕಳೆದ ರೈಲ್ವೆ ಸಚಿವ ವೈಷ್ಣವ್‌

ಒಡಿಶಾ ರೈಲು ದುರಂತದ ಬಳಿಕ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಸ್ಥಳದಲ್ಲಿ ಸ್ವತಃ ಮೊಕ್ಕಾಂ ಹೂಡಿ ಅಲ್ಲಿನ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಾ ಮೂರು ನಿದ್ರೆ ಇಲ್ಲದ ರಾತ್ರಿ 2 ಹಗಲುಗಳನ್ನು ಕಳೆದಿದ್ದು, ಅವರ ಶ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗ್ತಿದೆ.

Railway Minister Ashwin Vaishnav spent 3 nights and 2 days without rest at Odisha train accident site akb
Author
First Published Jun 6, 2023, 6:52 AM IST

ಬಾಲಸೋರ್‌ (ಒ​ಡಿ​ಶಾ​): ಇಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ 3 ನಿದ್ರೆಯಿಲ್ಲದ ರಾತ್ರಿಗಳು ಮತ್ತು 2 ವಿಶ್ರಾಂತಿ ಇಲ್ಲದ ಹಗಲುಗಳನ್ನು ಘಟನಾ ಸ್ಥಳದಲ್ಲೇ ಕಳೆದಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಬಳಿಕ ಹೊಸ ಹಳಿಗಳನ್ನು ಜೋಡಿಸಿ, ರೈಲು ಸಂಚಾರ ಆರಂಭವಾಗುವವರೆಗೆ ಶ್ರಮವಹಿಸಿ ಕರ್ತವ್ಯ ಪಾಲನೆ ಮಾಡಿದ್ದಾರೆ. ಒಂದು ಕಡೆ ವಿಪಕ್ಷಗಳು ಸೇರಿ ಹಲ​ವರು ರೈಲ್ವೆ ಸಚಿ​ವರ ರಾಜೀ​ನಾ​ಮೆಗೆ ಒತ್ತಾ​ಯಿ​ಸು​ತ್ತಿ​ದ್ದರೂ, ಇನ್ನೊಂದು ಕಡೆ ವೈಷ್ಣವ್‌ ಅವರ ಈ ಶ್ರಮ ವ್ಯಾಪಕ ಮೆಚ್ಚು​ಗೆಗೆ ಪಾತ್ರ​ವಾ​ಗಿ​ದೆ.

3 ದಿನ ಹಗಲು-ರಾತ್ರಿ ಶ್ರಮ​:

ಗೋವಾ ಮತ್ತು ಮುಂಬೈ ಸಂಪರ್ಕಿಸುವ ವಂದೇ ಭಾರತ್‌ ರೈಲು ಚಾಲನೆ ಸಮಾರಂಭಕ್ಕಾಗಿ ಶುಕ್ರವಾರ ಸಾಯಂಕಾಲ ಸಚಿವ ವೈಷ್ಣವ್‌ ಗೋವಾಗೆ (Goa) ಹೋಗಿ​ದ್ದರು. ಆದರೆ ಅದೇ ವೇಳೆ ರೈಲು ಅಪ​ಘಾ​ತದ ಸುದ್ದಿ ಬಂತು. ವಿಷಯ ತಿಳಿದು ದೆಹಲಿಗೆ ವಿಮಾ​ನ​ದಲ್ಲಿ ಶುಕ್ರವಾರ ರಾತ್ರಿಯೇ ಮರ​ಳಿ​ದರು. ವಿಮಾನ ನಿಲ್ದಾಣದಲ್ಲೇ ಕುಳಿತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಆದ​ರೆ, ಒಡಿಶಾಗೆ (Odisha)ಹೋಗುವ ವಿಮಾನ ಶನಿ​ವಾರ ಬೆಳಗ್ಗೆ 4 ಗಂಟೆಗೆ ಇತ್ತು. ಹೀಗಾಗಿ ಅಲ್ಲಿ​ಯ​ವ​ರೆಗೆ ಕಾಯದೇ ಬೆಳಗ್ಗೆ 3 ಗಂಟೆಗೇ ಬಾಡಿಗೆ ವಿಮಾನ ಮಾಡಿ​ಕೊಂಡು ಒಡಿಶಾ ತಲು​ಪಿ​ದ​ರು. ತಕ್ಷಣವೇ ಘಟನಾ ಸ್ಥಳವನ್ನು ತಲುಪಿ ಮೇಲ್ವಿಚಾರಣೆ ಆರಂಭಿಸಿದರು.

ಬಳಿಕ ಶನಿ​ವಾ​ರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿ​ಗೆ ಘಟನೆಯ ವಿವರಗಳನ್ನು ತಿಳಿಸಿ, ಸ್ಥಳೀಯ ಆಸ್ಪತ್ರೆಗಳಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದರು. ನಿರಂತರವಾಗಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ವಿಳಂಬವಾಗದಂತೆ ಎಚ್ಚರ ವಹಿಸಿದರು. ಬಳಿಕ ಶನಿ​ವಾರ ಇಡೀ ರಾತ್ರಿ ಘಟನೆ ನಡೆದ ಸ್ಥಳದಲ್ಲೇ ಇದ್ದುಕೊಂಡು ರಕ್ಷಣಾ ಕಾರ್ಯಾಚರಣೆಯ ಬಳಿಕ ಹಳಿ ಅಳವಡಿಸುವ ಕಾರ್ಯದ ಮೇಲ್ವಿಚಾರಣೆ ನಡೆಸಿದರು.

ಬದಲಾದ ಬೋಗಿ, ಬದುಕುಳಿಯಿತು ಜೀವ; ಅಪಘಾತ ರೈಲಿನಲ್ಲಿದ್ದ 110 ಕನ್ನಡಿಗರು ಸೇಫ್!

ಇನ್ನು ಭಾನು​ವಾರ ಕೂಡ ಬೆಳಗ್ಗೆ ಕಾರ್ಮಿ​ಕರ ಜತೆಗೇ ನಿಂತು ಹಳಿ ಜೋಡಣೆ ಕಾರ್ಯ ಪೂರ್ಣ ಆಗು​ವಂತೆ ನೋಡಿ​ಕೊಂಡರು. ಭಾನುವಾರ ರಾತ್ರಿ ವೇಳೆಗೆ ಕಾಮಗಾರಿ ಪೂರ್ಣಗೊಂಡು ಮೊದಲ ರೈಲು ಸಂಚಾರ ಆರಂಭಿ​ಸಿ​ದಾಗ, ಕೈಬೀಸಿ ಹಾಗೂ ರೈಲಿ​ನೆ​ದುರೇ ಕೈಮು​ಗಿ​ದು ಕರ್ತವ್ಯ ಪೂರ್ತಿ​ಗೊ​ಳಿ​ಸಿ​ದ​ರು.  ವೈಷ್ಣವ್‌ ಅವರ ಈ ಕಾರ್ಯ​ತ​ತ್ಪ​ರತೆ ವ್ಯಾಪಕ ಮೆಚ್ಚು​ಗೆಗೆ ಪಾತ್ರ​ವಾ​ಗಿ​ದೆ.

Odisha Train Tragedy: ಚಿಕ್ಕಮಗಳೂರಿನ 110 ಜೈನ ಯಾತ್ರಾರ್ಥಿಗಳು ಬದುಕಿರುವುದಕ್ಕೆ ತಿರುವೇ ವಿಶಾಪಟ್ಟಣಂ!

Follow Us:
Download App:
  • android
  • ios