Asianet Suvarna News Asianet Suvarna News

52 ವರ್ಷ ಆದ್ರೂ ಸಿಂಗಲ್ ಆಗಿರೋದೇಕೆ ಅನ್ನೋದನ್ನ ಬಹಿರಂಗಪಡಿಸಿದ ರಾಹುಲ್ ಗಾಂಧಿ..!

ಮದುವೆಯಾಗುವ ಮತ್ತು ಮಕ್ಕಳನ್ನು ಹೊಂದುವ ಆಲೋಚನೆ ಹಲವು ಬಾರಿ ತನ್ನ ಮನಸ್ಸಿನಲ್ಲಿ ಹಾದು ಹೋಗಿದೆ ಎಂದು ಇಟಲಿ ದಿನಪತ್ರಿಕೆ ಕೊರಿಯರೆ ಡೆಲ್ಲಾ ಸೆರಾದೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

rahul gandhi reveals why is he still single at 52 also tells would love to have kids ash
Author
First Published Feb 23, 2023, 2:30 PM IST

ನವದೆಹಲಿ (ಫೆಬ್ರವರಿ 23, 2023): ತನ್ನ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಅವರ ಗುಣಗಳನ್ನು ಹೊಂದಿರುವ ಯಾರೊಂದಿಗಾದರೂ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದರು ರಾಹುಲ್‌ ಗಾಂಧಿ. ಈಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈಗ ಮಕ್ಕಳನ್ನು ಹೊಂದುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇಟಲಿಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕಾಂಗ್ರೆಸ್‌ ಮುಖಂಡ ಹಾಗೂ ವಯನಾಡಿನ ಸಂಸದ ರಾಹುಲ್‌ ಗಾಂಧಿ, ತಾನು ಮಕ್ಕಳನ್ನು ಹೊಂದಲು ಇಷ್ಟಪಡುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ.

ಮದುವೆಯಾಗುವ (Marriage) ಮತ್ತು ಮಕ್ಕಳನ್ನು (Children) ಹೊಂದುವ ಆಲೋಚನೆ ಹಲವು ಬಾರಿ ತನ್ನ ಮನಸ್ಸಿನಲ್ಲಿ ಹಾದು ಹೋಗಿದೆ ಎಂದು ಇಟಲಿ ದಿನಪತ್ರಿಕೆ ಕೊರಿಯರೆ ಡೆಲ್ಲಾ ಸೆರಾದೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ (Rahul Gandhi) ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಆದರೂ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಎಂದೂ ಹೇಳಿದ್ದಾರೆ. ಇನ್ನು, 52ರ ಹರೆಯದಲ್ಲೂ ಏಕೆ ಒಂಟಿಯಾಗಿದ್ದೀರಿ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಅವರು ಈ ಬಗ್ಗೆ ಖಚಿತವಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾದ ಬಿಜೆಪಿ ಸಂಸದ

ಈ ಸಂದರ್ಶನದ ಸಮಯದಲ್ಲಿ, ರಾಹುಲ್‌ ಗಾಂಧಿ ಇತ್ತೀಚೆಗೆ ಮುಕ್ತಾಯಗೊಂಡ 'ಭಾರತ್ ಜೋಡೋ ಯಾತ್ರೆ'ಯ (Bharat Jodo Yatra) ಸಂದರ್ಭದಲ್ಲಿನ ತಮ್ಮ ಅನುಭವವನ್ನು ಸಹ ಹಂಚಿಕೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆಯು ತಪಸ್ಸು ಇದ್ದಂತೆ, ಇದು ಭಾರತೀಯರ ಅಸಾಧಾರಣ ಸ್ಥಿತಿಸ್ಥಾಪಕತ್ವವನ್ನು ಕಲಿಸಿದೆ ಎಂದು ಗಾಂಧಿ ಕುಟುಂಬದ ವಂಶಸ್ಥ ಹೇಳಿದರು. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಬೆಳೆಯುತ್ತಿರುವ ಧ್ರುವೀಕರಣದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್‌ ಗಾಂಧಿ, ಅದು ಅಸ್ತಿತ್ವದಲ್ಲಿದೆ ಎಂದು ಒಪ್ಪಿಕೊಂಡರೂ, ಬಡತನ ಮತ್ತು ಹಣದುಬ್ಬರದಂತಹ ಹೆಚ್ಚು ಒತ್ತುವ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯುವ ಸಾಧನವಾಗಿ ಇದನ್ನು ಬಳಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. 

ಇನ್ನು, ಭಾರತದ ರಾಜಕೀಯ ಭೂದೃಶ್ಯದ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಫ್ಯಾಸಿಸಮ್‌ ಈಗಾಗಲೇ ಅಸ್ತಿತ್ವದಲ್ಲಿದೆ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳು ಕುಸಿಯುತ್ತಿವೆ ಎಂದು ಹೇಳಿದರು. ಹಾಗೂ, ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಲು ಪ್ರತಿಪಕ್ಷಗಳು ಒಂದಾಗುವ ಅಗತ್ಯದ ಪ್ರಾಮುಖ್ಯತೆಯ ಬಗ್ಗೆಯೂ ಹೇಳಿದರು. ಹಾಗೆ, ಪ್ರತಿಪಕ್ಷಗಳು ಜನರಿಗೆ ಉತ್ತಮ ಪರ್ಯಾಯವನ್ನು ನೀಡಿದರೆ ಮತ್ತು ಅಭಿವೃದ್ಧಿ, ಶಾಂತಿ ಹಾಗೂ ಏಕತೆಯ ಗಟ್ಟಿಯಾದ ಮಾರ್ಗಸೂಚಿ ನೀಡಿದರೆ ಆಡಳಿತ ಪಕ್ಷವನ್ನು ಹೊರಹಾಕುವ ಕೆಲಸವನ್ನು ಸಾಧಿಸಬಹುದು ಎಂದೂ ಕಾಂಗ್ರೆಸ್ ನಾಯಕ ವಿಶ್ವಾಸ ವ್ಯಕ್ತಪಡಿದ್ದಾರೆ. 

ಇದನ್ನೂ ಓದಿ: ಮಂಡಿನೋವು: ಭಾರತ್‌ ಜೋಡೋ ಕೈಬಿಡಲು ಚಿಂತಿಸಿದ್ದ ರಾಹುಲ್‌!

ತಮ್ಮ ದಿವಂಗತ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಮಾತನಾಡಿದ ರಾಹುಲ್, ಅವರ ಸಾವಿನ ಬಗ್ಗೆ ಮಾಜಿ ಪ್ರಧಾನಿಗೆ ಮುನ್ಸೂಚನೆ ಇತ್ತು. ಆದರೆ, ಅವರು ಯಾರಿಗೂ ಹೆದರುತ್ತಿರಲಿಲ್ಲ ಅಥವಾ ಅವರ ಸುರಕ್ಷತೆಯ ಬಗ್ಗೆ ಚಿಂತಿಸುತ್ತಿರಲಿಲ್ಲ ಎಂದೂ ರಾಹುಲ್‌ ಗಾಂಧಿ ಹೇಳಿದರು.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ತಮ್ಮ ಅಜ್ಜಿ ಇಂದಿರಾ ಗಾಂಧಿಯಂತಹ ಗುಣಗಳನ್ನು ಹೊಂದಿರುವ ಬುದ್ಧಿವಂತೆ ಮತ್ತು ಪ್ರೀತಿಯ ವ್ಯಕ್ತಿಯೊಂದಿಗೆ ನೆಲೆಸಲು ಬಯಸುತ್ತೇನೆ ಎಂದೂ ಹಂಚಿಕೊಂಡಿದ್ದರು. ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿಯನ್ನು ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ ಎಂದು ಕರೆದಿದ್ದರು. ಹಾಗೂ, ನನ್ನ ತಾಯಿ ಮತ್ತು ಅಜ್ಜಿಯ ಗುಣಗಳ ನಡುವಿನ ಮಿಶ್ರಣದ ಗುಣ ಹೊಂದಿರುವ ಮಹಿಳೆ ಸಿಕ್ಕರೆ ಮದುವೆಯಾಗುತ್ತೇನೆ ಎಂದೂ ರಾಹುಲ್‌ ಗಾಂಧಿ ಹೇಳಿದರು.

ಇದನ್ನೂ ಓದಿ: ಕಾಶ್ಮೀರಕ್ಕೆ ಕಾಲಿಟ್ಟರೆ ಗ್ರೆನೇಡ್ ದಾಳಿಯ ಎಚ್ಚರಿಕೆ ಇತ್ತು; ಆದರೂ ಹೆದರಲಿಲ್ಲ: ರಾಹುಲ್ ಗಾಂಧಿ

ಮೋಟಾರ್‌ಸೈಕಲ್‌ಗಳು ಮತ್ತು ಸೈಕಲ್‌ಗಳನ್ನು ಓಡಿಸುವ ಬಗ್ಗೆ ತಮ್ಮ ಪ್ರೀತಿಯ ಬಗ್ಗೆಯೂ ಕಾಂಗ್ರೆಸ್‌ ಮಾಜಿ ಮುಖ್ಯಸ್ಥ ಮಾತನಾಡಿದ್ದು, ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬೈಸಿಕಲ್‌ ಮತ್ತು ಮೌಂಟೆನ್‌ ಬೈಕುಗಳನ್ನು ತಯಾರಿಸುವ ಚೀನಾದ ಎಲೆಕ್ಟ್ರಿಕ್ ಕಂಪನಿಯನ್ನು ಉಲ್ಲೇಖಿಸಿದ್ದಾರೆ. ಈ ಸಂದರ್ಶನವನ್ನು ಅವರು ತಮ್ಮ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆ, ತಾನು ಸ್ವಂತ ಕಾರನ್ನು ಹೊಂದಿಲ್ಲ ಮತ್ತು ತಮ್ಮ ತಾಯಿಯ ಸಿಆರ್-ವಿ ಕಾರು ಹೊಂದಿದ್ದೇನೆ ಎಂದೂ ಹೇಳಿದರು. 


ಇದನ್ನೂ ಓದಿ: 'ಸರಿಯಾದ ಹುಡುಗಿ ಸಿಕ್ಕರೆ ಮದುವೆ ಆಗ್ತೇನೆ..' ಸಂದರ್ಶನದಲ್ಲಿ ರಾಹುಲ್‌ ಗಾಂಧಿ ಮಾತು..!

Follow Us:
Download App:
  • android
  • ios