ಮಂಡಿನೋವು: ಭಾರತ್ ಜೋಡೋ ಕೈಬಿಡಲು ಚಿಂತಿಸಿದ್ದ ರಾಹುಲ್!
ಇತ್ತೀಚೆಗಷ್ಟೇ ದೇಶವ್ಯಾಪಿ ಭಾರತ್ ಜೋಡೋ ಯಾತ್ರೆ ಮುಕ್ತಾಯಗೊಳಿಸಿದ ರಾಹುಲ್ ಗಾಂಧಿ, ಯಾತ್ರೆಯ ಆರಂಭದ ಹಂತದಲ್ಲೇ ಅದನ್ನು ಕೈಬಿಡಲು ಚಿಂತಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ತಿರುವನಂತಪುರ: ಇತ್ತೀಚೆಗಷ್ಟೇ ದೇಶವ್ಯಾಪಿ ಭಾರತ್ ಜೋಡೋ ಯಾತ್ರೆ ಮುಕ್ತಾಯಗೊಳಿಸಿದ ರಾಹುಲ್ ಗಾಂಧಿ, ಯಾತ್ರೆಯ ಆರಂಭದ ಹಂತದಲ್ಲೇ ಅದನ್ನು ಕೈಬಿಡಲು ಚಿಂತಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ರಾಹುಲ್ ಆಪ್ತ ಕೆ.ಸಿ.ವೇಣುಗೋಪಾಲ್, ಯಾತ್ರೆ ಆರಂಭಗೊಂಡು 3ನೇ ದಿನ ಕೇರಳಕ್ಕೆ ಪ್ರವೇಶಿಸಿದ ಹೊತ್ತಿನಲ್ಲೇ ರಾಹುಲ್‌ಗೆ ಮಂಡಿ ನೋವು ಹೆಚ್ಚಾಗಿತ್ತು.
ಹೀಗಾಗಿ ಯಾತ್ರೆಯನ್ನು ತಾವೇ ಮುಂದುವರೆಸಬೇಕಾ? ಅಥವಾ ಪಕ್ಷದ ಇನ್ಯಾವುದೇ ಇತರ ನಾಯಕರಿಗೆ ಅದನ್ನು ವಹಿಸಿ ತಾವು ಹಿಂದೆ ಸರಿಯಬೇಕಾ? ಎಂಬ ಬಗ್ಗೆ ರಾಹುಲ್ ಗೊಂದಲಕ್ಕೆ ಬಿದ್ದಿದ್ದರು. ಒಂದು ದಿನ ರಾತ್ರಿ ನನ್ನನ್ನು ಕರೆದು, ತಮ್ಮ ನೋವಿನ ಬಗ್ಗೆ ವಿವರಿಸಿ, ನನ್ನ ಬದಲು ಬೇರೆ ಯಾರಿಗಾದರೂ ಯಾತ್ರೆ ನೇತೃತ್ವ ವಹಿಸಿ ಎಂದು ಹೇಳಿದ್ದರು. ಪ್ರಿಯಾಂಕಾ ವಾದ್ರಾ ಕೂಡಾ ನನಗೆ ಕರೆ ಮಾಡಿ ಇದೇ ವಿಷಯವನ್ನು ಹೇಳಿದ್ದರು. ಬಳಿಕ ಸ್ವತಃ ರಾಹುಲ್ (Rahul Gandhi) ಸೂಚಿಸಿದ ವೈದ್ಯರೇ ಅವರನ್ನು ಭೇಟಿಯಾಗಿ ಚಿಕಿತ್ಸೆ ನೀಡಿದರು. ಅದೃಷ್ಟವಶಾತ್ ಚಿಕಿತ್ಸೆಯಿಂದ ರಾಹುಲ್ ಮಂಡಿನೋವು ಗುಣವಾಯಿತು. ಅವರು ತಮ್ಮ ಯಾತ್ರೆ ಮುಂದುವರೆಸಿದರು ಎಂದು ವೇಣುಗೋಪಾಲ್ (KC Venugopal) ಹೇಳಿದ್ದಾರೆ.
ಕಾಶ್ಮೀರಕ್ಕೆ ಕಾಲಿಟ್ಟರೆ ಗ್ರೆನೇಡ್ ದಾಳಿಯ ಎಚ್ಚರಿಕೆ ಇತ್ತು; ಆದರೂ ಹೆದರಲಿಲ್ಲ: ರಾಹುಲ್ ಗಾಂಧಿ
ಭಾರತ್ ಜೋಡೋ ಸಮಾರೋಪ: ಕಾಶ್ಮೀರದ ಹಿಮಸೌಂದರ್ಯಕ್ಕೆ ಮಾರುಹೋದ ಡಿ.ಕೆ. ಶಿವಕುಮಾರ್