ನವದೆಹಲಿ(ಅ.05): ಜನರ ಪರ ದ್ವನಿ ಎತ್ತೋ ಮೂಲಕ, ಜನರರಿಗಾಗಿ ಹೋರಾಟ ಮಾಡೋ ಮೂಲಕ ರಾಹುಲ್ ಗಾಂಧಿ ಜನರ ವಿಶ್ವಾಸಗಳಿಸಿದ್ದಾರೆ. ಇದು ಫೇಸ್‌ಬುಕ್‌ನಲ್ಲಿ ಜನರ ಎಂಗೇಜ್ಮೆಂಟ್ ಕುರಿತ ವರದಿಯಲ್ಲಿ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಫೇಸ್‌ಬುಕ್ ಇಂಡಿಯಾ ನೀಡಿದ ವರದಿ ಪ್ರಕಾರ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 2 ವರೆಗಿನ ಅಂಕಿ ಅಂಶದಲ್ಲಿ ಪ್ರಧಾನಿ ನರೇಂದ್ರ ಮೋದಿಗಿಂತ, ರಾಹುಲ್ ಗಾಂಧಿ ಫೇಸ್‌ಬುಕ್ ಖಾತೆಯಲ್ಲಿ ಶೇಕಡಾ 40 ರಷ್ಟು ಜನರ ಎಂಗೇಜ್ಮೆಂಟ್ ಹೆಚ್ಚಿದೆ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್‌ ಗೆದ್ದರೆ ಕೃಷಿ ಕಾಯ್ದೆ ರದ್ದು, ಕಸದ ಬುಟ್ಟಿ​ಗೆ ಎಸೆ​ಯು​ವೆ'

ಕಳೆದ ಒಂದು ವಾರದಲ್ಲಿ ರಾಹುಲ್ ಗಾಂಧಿ ಹೋರಾಟವನ್ನು ಹೆಚ್ಚು ಜನರು ಬೆಂಬಲಿಸಿದ್ದಾರೆ. ಕಮೆಂಟ್, ಲೈಕ್ಸ್, ಶೇರ್‌ಗಳಲ್ಲಿ ದಾಖಲೆಯ ಶೇಕಡಾ 40 ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 2 ರವೆರೆಗೆ ರಾಹುಲ್ ಗಾಂಧಿ ಫೇಸ್‌ಬುಕ್ ಖಾತೆಯಲ್ಲಿ 13.9 ಮಿಲಿಯನ್ ಚಟುವಟಿಕೆ ನಡೆದಿದೆ ಎಂದು ಕಾಂಗ್ರೆಸ್ ಹೇಳಿದೆ.

ಹತ್ರಾಸ್ ರೇಪ್ ಕೇಸ್: ಸಂತ್ರಸ್ತೆ ತಾಯಿ ಅಪ್ಪಿಕೊಂಡ ಪ್ರಿಯಾಂಕಾ, ಫೋಟೋ ವೈರಲ್!.

ಸಾಮಾಜಿಕ ಮಾಧ್ಯಮದಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ಐದು ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರಾಗಿದ್ದಾರೆ.  ಮೋದಿ 45.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 3.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.