Asianet Suvarna News Asianet Suvarna News

ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ: ಖರ್ಗೆ ಹೇಳಿಕೆ ವೈರಲ್‌; ಬಿಜೆಪಿ ಲೇವಡಿ

ರಾಜಸ್ಥಾನದ ಅನುಪಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ರಾಷ್ಟ್ರದ ಏಕತೆಗಾಗಿ ರಾಹುಲ್ ಗಾಂಧಿಯಂತಹ ನಾಯಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ.

rahul gandhi died for country bjp mocks mallikarjun kharge s faux pas during poll speech in rajasthan ash
Author
First Published Nov 21, 2023, 9:59 AM IST

ಜೈಪುರ (ನವೆಂಬರ್ 21, 2023):  ರಾಜಸ್ಥಾನದ ಅನುಪಗಢದಲ್ಲಿ ಚುನಾವಣಾ ರ‍್ಯಾಲಿಯ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯೊಂದು ವೈರಲ್‌ ಆಗಿದೆ. ಇದನ್ನು ಬಿಜೆಪಿ ಲೇವಡಿ ಮಾಡಿದೆ. ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಉಲ್ಲೇಖಿಸುವಾಗ ರಾಹುಲ್ ಗಾಂಧಿ ಎಂದು ತಪ್ಪಾಗಿ ಹೆಸರಿಸಿದ್ದಾರೆ ಎಂದು ತಿಳಿದುಬಂದಿದ್ದು, ಬಿಜೆಪಿ ಟ್ವೀಟ್‌ ಮೂಲಕ ಸೋಮವಾರ ಇದನ್ನು ಲೇವಡಿ ಮಾಡಿದೆ.

ರಾಜಸ್ಥಾನದ ಅನುಪಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ರಾಷ್ಟ್ರದ ಏಕತೆಗಾಗಿ ರಾಹುಲ್ ಗಾಂಧಿಯಂತಹ ನಾಯಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ. ಬಳಿಕ ವೇದಿಕೆಯಲ್ಲಿದ್ದವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಚ್ಚರಿಸಿದ್ದಾರೆ.

ಇದನ್ನು ಓದಿ: ಟೈಲರ್ ಕನ್ಹಯ್ಯ ಲಾಲ್‌ ಹಂತಕರಿಗೆ ಬಿಜೆಪಿ ನಂಟು: ಅಶೋಕ್ ಗೆಹ್ಲೋಟ್ ಸ್ಫೋಟಕ ಆರೋಪ

ನಂತರ, ತಾನು ರಾಜೀವ್ ಗಾಂಧಿ ಬಗ್ಗೆ ಹೇಳುತ್ತಿದ್ದೆ ಎಂದು ಹೇಳಿ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದು, ಅಲ್ಲದೆ, ಕ್ಷಮೆಯಾಚನೆಯನ್ನೂ ಮಾಡಿದ್ದಾರೆ. ನಾನು ಕ್ಷಮೆಯಾಚಿಸುತ್ತೇನೆ. ನಾನು ರಾಹುಲ್ ಗಾಂಧಿ ಎಂದು ತಪ್ಪಾಗಿ ಹೇಳಿದ್ದೇನೆ. ರಾಷ್ಟ್ರದ ಏಕತೆಗಾಗಿ ರಾಜೀವ್ ಗಾಂಧಿ ಪ್ರಾಣ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ ನಾಯಕರಿದ್ದರೆ, ಬಿಜೆಪಿಯಲ್ಲಿ ಪ್ರಾಣ ತೆಗೆಯುವ ನಾಯಕರಿದ್ದಾರೆ ಎಂದು ಕೇಂದ್ರದ ಆಡಳಿತಾರೂಢ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆದರೂ, ಬಿಜೆಪಿಯು ಕಾಂಗ್ರೆಸ್ ಅಧ್ಯಕ್ಷರ ತಪ್ಪನ್ನು ಗಮನಿಸಿದ್ದು, ಅದನ್ನು ಬಿಜೆಪಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.  ಖರ್ಗೆ ವಿಡಿಯೋ ಕ್ಲಿಪ್‌ ಅನ್ನು ಹಾಕಿ  "ಇದು ಯಾವಾಗ ಸಂಭವಿಸಿತು?" ಎಂದಿದ್ದಾರೆ.

ಇದನ್ನು ಓದಿ: ಈ ರಾಜ್ಯದಲ್ಲಿ 450 ರೂ. ಗೆ ಸಿಗುತ್ತೆ ಗ್ಯಾಸ್‌ ಸಿಲಿಂಡರ್‌: ಬಿಜೆಪಿ ಘೋಷಣೆ

ರಾಜಸ್ಥಾನದ 200 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 25 ರಂದು ಚುನಾವಣೆ ನಿಗದಿಯಾಗಿದೆ. ನಂತರ, ಈ ಕಾಂಗ್ರೆಸ್‌ ಆಡಳಿತದ ಈ ರಾಜ್ಯ ಸೇರಿ ಪಂಚರಾಜ್ಯಗಳ ಚುನಾವಣೆಯ ಎಲ್ಲ ರಾಜ್ಯಗಳಿಗೂ ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಇದನ್ನು ಓದಿ: ಪ್ರಧಾನಿ ಮೋದಿ ಕುರಿತು ಪಿಎಚ್‌ಡಿ ಮಾಡಿದ ಮೊದಲ ಮುಸ್ಲಿಂ ಮಹಿಳೆ!

ಇದನ್ನು ಓದಿ: ಪ್ರಿಯಾಂಕಾ ಗಾಂಧಿಗೆ ಕೊಟ್ಟ ಬೊಕ್ಕೆಯಲ್ಲಿ ಹೂವೇ ನಾಪತ್ತೆ: ಇಲ್ಲೂ ಕಾಂಗ್ರೆಸ್‌ ಹಗರಣವೆಂದು ಕಾಲೆಳೆದ ಬಿಜೆಪಿ!

Follow Us:
Download App:
  • android
  • ios