Asianet Suvarna News Asianet Suvarna News

ಈ ರಾಜ್ಯದಲ್ಲಿ 450 ರೂ. ಗೆ ಸಿಗುತ್ತೆ ಗ್ಯಾಸ್‌ ಸಿಲಿಂಡರ್‌: ಬಿಜೆಪಿ ಘೋಷಣೆ

ಮಧ್ಯ ಪ್ರದೇಶ ರಾಜ್ಯದಲ್ಲಿನ 'ಲಾಡ್ಲಿ ಬಹನಾ' ಮತ್ತು 'ಪ್ರಧಾನಿ ಉಜ್ವಲ' ಯೋಜನೆಗಳ ಫಲಾನುಭವಿಗಳಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು 450 ರೂ. ಗೆ ಮಾರಾಟ ಮಾಡಲಾಗುವುದು ಎಂದು ಬಿಜೆಪಿ ಹೇಳಿದೆ.

free education to girls from poor families gas cylinders at 450 rs for select bjp releases manifesto for mp poll ash
Author
First Published Nov 12, 2023, 3:21 PM IST

ಭೋಪಾಲ್‌ (ನವೆಂಬರ್ 12, 2023): ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಶನಿವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಡ ಕುಟುಂಬದ ಹೆಣ್ಣುಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ನೀಡುವುದಾಗಿಯೂ ಪಕ್ಷ ಭರವಸೆ ನೀಡಿದೆ. ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ರಾಜಕೀಯ ಪಕ್ಷಗಳ ನಡುವೆ ಕಾವು, ಸ್ಪರ್ಧೆ ಹೆಚ್ಚಾಗಿದೆ.

ಅಲ್ಲದೆ, ಮಧ್ಯ ಪ್ರದೇಶ ರಾಜ್ಯದಲ್ಲಿನ 'ಲಾಡ್ಲಿ ಬಹನಾ' ಮತ್ತು 'ಪ್ರಧಾನಿ ಉಜ್ವಲ' ಯೋಜನೆಗಳ ಫಲಾನುಭವಿಗಳಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು 450 ರೂ. ಗೆ ಮಾರಾಟ ಮಾಡಲಾಗುವುದು ಎಂದೂ ಬಿಜೆಪಿ ಹೇಳಿದೆ. ಹಾಗೂ, ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಂದ ಕ್ವಿಂಟಲ್‌ಗೆ 2,700 ರೂ. ಗೆ ಗೋಧಿ ಮತ್ತು 3,100 ರೂ. ಗೆ ಭತ್ತ ಖರೀದಿಸುವುದಾಗಿಯೂ ಭರವಸೆ ನೀಡಿದೆ.

ಇದನ್ನು ಓದಿ: ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್‌: ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ 100 ರೂ. ಏರಿಕೆ

ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಪಕ್ಷದ ರಾಜ್ಯ ಮುಖ್ಯಸ್ಥ ವಿ.ಡಿ ಶರ್ಮಾ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಅಲ್ಲದೆ, ಈ ವೇಳೆ ಮಾತನಾಡಿದ ನಡ್ಡಾ, ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮೊದಲು ಜನರನ್ನು ಆಕರ್ಷಿಸಿ ನಂತರ ಮರೆತು ಬಿಡುತ್ತವೆ ಎಂದು ಹೇಳಿದರು. ಅದರೆ, ಬಿಜೆಪಿ ಮಾತ್ರ ಪ್ರಣಾಳಿಕೆಯನ್ನು ಅಕ್ಷರ ಮತ್ತು ಉತ್ಸಾಹದಲ್ಲಿ ಜಾರಿಗೆ ತಂದಿದೆ ಎಂದೂ ಹೇಳಿಕೊಂಡರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಸಾಧನೆಯನ್ನೂ ನಡ್ಡಾ ಎತ್ತಿ ತೋರಿಸಿದರು. ಮಧ್ಯಪ್ರದೇಶದ ಬಜೆಟ್ 14 ಪಟ್ಟು ಹೆಚ್ಚಾಗಿದೆ.  ಒಟ್ಟು ರಾಜ್ಯದ ಆಂತರಿಕ ಉತ್ಪನ್ನವು 19 ಪಟ್ಟು ಹೆಚ್ಚಾಗಿದೆ.ನಾವು ರಿಪೋರ್ಟ್ ಕಾರ್ಡ್‌ ರಾಜಕೀಯವನ್ನು ನಂಬುತ್ತೇವೆ. ನಾವು ಕೊನೆಯ ಮೈಲಿಗೂ ವಿತರಣೆಗೆ ಗಮನ ಹರಿಸಿದ್ದೇವೆ. ನಾವು ಹೇಳಿದ್ದನ್ನು ಮಾಡಿದ್ದೇವೆ ಎಂದೂ ಜೆ.ಪಿ. ನಡ್ಡಾ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ಮತ್ತೊಂದು ಬಂಪರ್‌: ಎಲ್‌ಪಿಜಿ ಆಯ್ತು.. ಶೀಘ್ರದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲೂ ಭಾರಿ ಕಡಿತ!

ಮಧ್ಯಪ್ರದೇಶದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರವು ಈ ಪ್ರಣಾಳಿಕೆಯನ್ನು ತನ್ನ ಮಾರ್ಗಸೂಚಿಯನ್ನಾಗಿ ಮಾಡುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಶಿವರಾಜ್‌ ಸಿಂಗ್ ಚೌಹಾಣ್ ಹೇಳಿದರು.ಅದನ್ನು ಹೇಳಿದಾಗ ನನಗೆ ತೃಪ್ತಿಯ ಭಾವನೆ ಇದೆ, ನಾವು ಏನು ಯೋಚಿಸಿದ್ದೇವೆ ಮತ್ತು ಹೇಳಿದ್ದೇವೆ, ನಾವು ಅದನ್ನು ಪೂರೈಸಲು ಪ್ರಯತ್ನಿಸಿದ್ದೇವೆ. ನಾವು ಗರ್ಭದಲ್ಲಿ ಹೆಣ್ಣುಮಕ್ಕಳನ್ನು ಕೊಲ್ಲುವುದನ್ನು ಗಮನಿಸಿದಾಗ ನಾವು ಲಾಡ್ಲಿ ಲಕ್ಷ್ಮಿ ಯೋಜನೆಯಂತೆ ನೀತಿಯನ್ನು ಮಾಡಿದ್ದೇವೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಬಿಜೆಪಿ ನಾಯಕತ್ವದಲ್ಲಿ ರಾಜ್ಯವು 'ಬಿಮಾರು' ನಿಂದ 'ಬೆಮಿಸಲ್' ರಾಜ್ಯಕ್ಕೆ ಬದಲಾಗಿದೆ ಎಂದು ಹೇಳಿದ್ದಾರೆ. ನಾವು ಈ ಪ್ರಯಾಣವನ್ನು ಮುಂದುವರಿಸುತ್ತೇವೆ, ನಾವು ಆರೋಗ್ಯ ಕ್ಷೇತ್ರದಲ್ಲಿ 20,000 ಕೋಟಿ ರೂ., ಆದಿವಾಸಿಗಳಿಗೆ 3,000 ಕೋಟಿ ರೂ. ಹೂಡಿಕೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಬಿಜೆಪಿ ಮಧ್ಯಪ್ರದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಭರವಸೆ ನೀಡಿದ್ದೇವೆ" ಎಂದೂ ಹೇಳಿದರು.

ಇದನ್ನೂ ಓದಿ: ಬಂಪರ್‌ ಆಫರ್‌: ಈ ರಾಜ್ಯದಲ್ಲಿ 428 ರೂ. ಗೆ ಸಿಗುತ್ತೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್!

Follow Us:
Download App:
  • android
  • ios