4 ತಿಂಗಳ ನಂತರ ಮತ್ತೆ ಸಂಸತ್‌ ಭವನಕ್ಕೆ ಕಾಲಿಟ್ಟ ರಾಹುಲ್‌ ಗಾಂಧಿ: ಅವಿಶ್ವಾಸ ನಿರ್ಣಯಕ್ಕೂ ಮುನ್ನ ಕಾಂಗ್ರೆಸ್‌ಗೆ ಮತ್ತಷ್ಟು ಬಲ!

ಲೋಕಸಭೆಯ ಸೆಕ್ರೆಟರಿಯೇಟ್‌ ರಾಹುಲ್‌ ಗಾಂಧಿಗೆ ಮತ್ತೆ ಸಂಸತ್‌ ಸ್ಥಾನ ಮರಳಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆ, ‘INDIA’ ಮೈತ್ರಿಕೂಟದ ನಾಯಕರು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದೆ. ಇನ್ನು, ಕಾಂಗ್ರೆಸ್ ಇದನ್ನು "ದ್ವೇಷದ ವಿರುದ್ಧ ಪ್ರೀತಿಯ ವಿಜಯ" ಎಂದು ಟ್ವೀಟ್ ಮಾಡಿದೆ. 

rahul gandhi back as mp after 4 months days before no trust vote ash

ನವದೆಹಲಿ (ಆಗಸ್ಟ್‌ 7, 2023): 'ಮೋದಿ ಸರ್‌ನೇಮ್‌' ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ನೀಡಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಮೊದಲ ಬಾರಿಗೆ ಸಂಸತ್ತಿಗೆ ಹಾಜರಾಗಿದ್ದಾರೆ. ಲೋಕಸಭೆಯ ಸೆಕ್ರೆಟರಿಯೇಟ್‌ ಅನರ್ಹತೆಯನ್ನು ತೆಗೆದ ಬಳಿಕ ರಾಹುಲ್‌ ಗಾಂಧಿ ಮತ್ತೆ ವಯನಾಡು ಸಂಸದರಾಗಿ ಮರಳಿದ್ದಾರೆ. ಇನ್ನು, ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೂ ಮುನ್ನ ರಾಹುಲ್‌ ಗಾಂಧಿ ಸಂಸದರಾಗಿ ಮರಳಿರೋದು ಕಾಂಗ್ರೆಸ್‌ಗೆ ಹಾಗೂ ವಿಪಕ್ಷಗಳ ಒಕ್ಕೂಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ಮಣಿಪುರದಲ್ಲಿ ಹಿಂಸಾಚಾರದ ಬಗ್ಗೆ ವಿಸ್ತೃತ ಚರ್ಚೆಗೆ ಹಾಗೂ ಮೋದಿ ಹೇಳಿಕೆಗೆ ‘INDIA’ ಬೇಡಿಕೆಯ ಬಗ್ಗೆ ಸಂಸತ್ತಿನಲ್ಲಿ ಪದೇ ಪದೇ ಅಡ್ಡಿಯುಂಟಾಗುತ್ತಿರುವ ಸಮಯದಲ್ಲಿ ರಾಹುಲ್‌ ಗಾಂಧಿ ಸಂಸದರಾಗಿ ಮರಳಿದ್ದು, ಇಂದು ಸಂಸತ್‌ ಭವನಕ್ಕೆ ಕಾಲಿಟ್ಟಿದ್ದಾರೆ. ಸಂಸತ್‌ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ, ಲೋಕಸಭೆಯಲ್ಲಿ ಮಂಗಳವಾರ ನಡೆಯಲಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಅವರು ಪ್ರಮುಖ ಸ್ಪೀಕರ್ ಆಗಬೇಕೆಂದು ಕಾಂಗ್ರೆಸ್ ಹೇಳಿದೆ. ಅಲ್ಲದೆ, ಅವರು ಮಣಿಪುರಕ್ಕೆ ಭೇಟಿ ನೀಡಿರುವುದರಿಂದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಬೇಕೆಂದು ಪಕ್ಷವು ಬಯಸುತ್ತದೆ ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್‌ ಹೇಳಿದ್ದಾರೆ.ಮಣಿಪುರಕ್ಕೆ ಸಂಬಂಧಿಸಿದ ಸಂಗತಿಗಳನ್ನು ಅವರು ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ ಎಂದೂ ಅವರು ಹೇಳಿದರು.

ಇದನ್ನು ಓದಿ: ಸುಪ್ರೀಂನಿಂದ ಬಿಗ್ ರಿಲೀಫ್‌: ರಾಹುಲ್‌ ಗಾಂಧಿಗೆ ಭರ್ಜರಿ ಬಾಡೂಟ ಮಾಡಿ ಬಡಿಸಿದ ಲಾಲೂ ಪ್ರಸಾದ್

ಗುಜರಾತ್ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯನ್ನು  ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬಳಿಕ ಮಾರ್ಚ್ 23 ರಿಂದ ಜಾರಿಗೆ ಬರುವಂತೆ ಮಾರ್ಚ್ 24 ರಂದು ಲೋಕಸಭಾ ಸದಸ್ಯರಾಗಿ ಅನರ್ಹಗೊಳಿಸಲಾಯಿತು. ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷೆಯು ಜನಪ್ರತಿನಿಧಿಗಳನ್ನು ಸ್ವಯಂಚಾಲಿತವಾಗಿ ಅನರ್ಹಗೊಳಿಸುತ್ತದೆ.

ಲೋಕಸಭೆಯ ಸೆಕ್ರೆಟರಿಯೇಟ್‌ ರಾಹುಲ್‌ ಗಾಂಧಿಗೆ ಮತ್ತೆ ಸಂಸತ್‌ ಸ್ಥಾನ ಮರಳಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದ ನಂತರ ‘INDIA’ ಮೈತ್ರಿಕೂಟದ ನಾಯಕರು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದೆ. ಇನ್ನು, ಕಾಂಗ್ರೆಸ್ ಇದನ್ನು "ದ್ವೇಷದ ವಿರುದ್ಧ ಪ್ರೀತಿಯ ವಿಜಯ" ಎಂದು ಟ್ವೀಟ್ ಮಾಡಿದೆ. 

ಇದನ್ನೂ ಓದಿ: Breaking: ಮೋದಿ ಸರ್‌ನೇಮ್‌ ಕೇಸ್‌: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌; ಜೈಲು ಶಿಕ್ಷೆ, ಅನರ್ಹತೆಗೆ ಸುಪ್ರೀಂಕೋರ್ಟ್‌ ತಡೆ

ಶುಕ್ರವಾರ, ಸುಪ್ರೀಂ ಕೋರ್ಟ್, ರಾಹುಲ್ ಗಾಂಧಿ ಅವರ ದೋಷಾರೋಪಣೆಗೆ ತಡೆಯಾಜ್ಞೆ ನೀಡುವಾಗ, ಅವರ ಹೇಳಿಕೆಗಳು ಉತ್ತಮ ಅಭಿರುಚಿಯಿಲ್ಲದಿದ್ದರೂ, ಸಂಸತ್ತಿನಿಂದ ಅವರ ಅನರ್ಹತೆಯು ಅವರ ಮತದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟಿತ್ತು. ವಿಚಾರಣಾ ನ್ಯಾಯಾಧೀಶರು ಪ್ರಕರಣದಲ್ಲಿ ಗರಿಷ್ಠ ಎರಡು ವರ್ಷಗಳ ಶಿಕ್ಷೆಯನ್ನು ನೀಡಿದ್ದರು, ಶಿಕ್ಷೆಯ ಪ್ರಮಾಣವು ಒಂದು ದಿನ ಕಡಿಮೆಯಿದ್ದರೂ ಅದು ಸಂಸದ ಸ್ಥಾನದಿಂದ ಅನರ್ಹತೆಯನ್ನು ಆಕರ್ಷಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. 

2019 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ ನಡೆದ ರ‍್ಯಾಲಿಯಲ್ಲಿ, ಪ್ರಧಾನಿ ಮೋದಿಯವರನ್ನು ಕೆಣಕುವ ಮೂಲಕ, "ಎಲ್ಲಾ ಕಳ್ಳರಿಗೆ ಮೋದಿ ಸಾಮಾನ್ಯ ಉಪನಾಮವಾಗಿ ಹೇಗೆ ಬರುತ್ತದೆ?" ಎಂದಿದ್ದರು. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ರಾಹುಲ್ ಗಾಂಧಿ ಈ ಅಪರಾಧದಲ್ಲಿ ತಪ್ಪಿತಸ್ಥರಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಮತ್ತು ಅವರು ಕ್ಷಮೆಯಾಚಿಸಬೇಕಾದರೆ ಬಹಳ ಮುಂಚೆಯೇ "ಅದನ್ನು ಮಾಡುತ್ತಿದ್ದೆ" ಎಂದು ಹೇಳಿದ್ದಾರೆ. 

ಇದನ್ನೂ ಓದಿ: ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ

ಈ ಮಧ್ಯೆ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಹಾಕಿದ್ದು, ವಿಚಾರಣೆ ನಡೆಯಬೇಕಿದೆ. 

ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ಬಳಿಕ ರಾಹುಲ್‌ ಗಾಂಧಿಗೆ ಮಂಡಿನೋವು: ಕೇರಳದಲ್ಲಿ ಆಯುರ್ವೇದಿಕ್‌ ಚಿಕಿತ್ಸೆ

Latest Videos
Follow Us:
Download App:
  • android
  • ios