ಸುಪ್ರೀಂನಿಂದ ಬಿಗ್ ರಿಲೀಫ್‌: ರಾಹುಲ್‌ ಗಾಂಧಿಗೆ ಭರ್ಜರಿ ಬಾಡೂಟ ಮಾಡಿ ಬಡಿಸಿದ ಲಾಲೂ ಪ್ರಸಾದ್

ರಾಹುಲ್‌ ಗಾಂಧಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್ ಅವರು ಭೋಜನಕೂಟದಲ್ಲಿ ಭೇಟಿಯಾದರು. ರಾಹುಲ್‌ ಗಾಂಧಿಗೆ ಸ್ವತ: ಮಟನ್‌ ಊಟ ತಯಾರಿಸಿದ್ದಾರೆ ಲಾಲೂ ಪ್ರಸಾದ್‌.

mutton by chef lalu prasad yadav on menu for dinner with rahul gandhi ash

ಹೊಸದಿಲ್ಲಿ (ಆಗಸ್ಟ್ 5, 2023): ಮೋದಿ ಉಪನಾಮ ಮಾನನಷ್ಟ ಮೊಕದ್ದಮೆ ಕೇಸ್‌ನಲ್ಲಿ ರಾಹುಲ್‌ ಗಾಂಧಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ತೀರ್ಪಿನ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರು ಭೋಜನಕೂಟದಲ್ಲಿ ಭೇಟಿಯಾದರು. ರಾಹುಲ್‌ ಗಾಂಧಿಗೆ ಸಂಸದರಾಗಿಮತ್ತೆ ಮರಳುವ ಹಿನ್ನೆಲೆ ನೀಲಿಬಣ್ಣದ ಹೂವುಗಳ ಪುಷ್ಪಗುಚ್ಛವನ್ನು ನೀಡಿ ಆರ್‌ಜೆಡಿ ಮುಖ್ಯಸ್ಥರು ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೆ, ಮಟನ್ ಊಟವನ್ನು ಸ್ವತ: ಲಾಲೂ ಪ್ರಸಾದ್‌ ತಯಾರಿಸಿದ್ದು, ಇಬ್ಬರೂ ಔತಣಕೂಟದಲ್ಲಿ ಭಾಗಿಯಾಗಿದ್ದರು ಎಂದೂ ತಿಳಿದುಬಂದಿದೆ.

ಸಾರ್ವಜನಿಕ ಫೋಟೋ ಸೆಷನ್ ನಂತರ, ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥರು ರಾಹುಲ್‌ ಗಾಂಧಿಗೆ ನೀಲಿ ಬಣ್ಣದ ಹೂವುಗಳ ಪುಷ್ಪಗುಚ್ಛವನ್ನು ನೀಡಿದ್ದು, ಬಳಿಕ ಆರ್‌ಜೆಡಿ ಮುಖ್ಯಸ್ಥರೇ ತಯಾರಿಸಿದ ಮಟನ್‌ ಊಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರ್‌ಜೆಡಿ ಸಂಸದೆ ಮೀಸಾ ಭಾರ್ತಿ ಅವರ ದೆಹಲಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಸಹ ಪಾಲ್ಗೊಂಡಿದ್ದರು. ಈ ತಿಂಗಳ ಕೊನೆಯಲ್ಲಿ ಮುಂಬೈನಲ್ಲಿ ವಿಪಕ್ಷಗಳ ಮೈತ್ರಿಕೂಟ I.N.D.I.A’ ಸಭೆ ಸೇರಲಿದ್ದು, ಈ ಹಿನ್ನೆಲೆ ಅದಕ್ಕೂ ಮುನ್ನ ನಡೆದ ಈ ಸಭೆ ಸಹ ಪ್ರಮುಖ ಎನಿಸಿದೆ. 

ಇದನ್ನು ಓದಿ: Breaking: ಮೋದಿ ಸರ್‌ನೇಮ್‌ ಕೇಸ್‌: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌; ಜೈಲು ಶಿಕ್ಷೆ, ಅನರ್ಹತೆಗೆ ಸುಪ್ರೀಂಕೋರ್ಟ್‌ ತಡೆ

ರಾಹುಲ್ ಗಾಂಧಿ ಮತ್ತು ಲಾಲೂ ಯಾದವ್ ರಾಜಕೀಯದ ಬಗ್ಗೆ ಹೆಚ್ಚು ಚರ್ಚೆ ನಡೆಸಿದ್ರೂ, ಇಬ್ಬರೂ ಸಣ್ಣ-ಪುಟ್ಟ ಮಾತುಕತೆಯಲ್ಲಿ ಸ್ವಲ್ಪ ಸಮಯ ಕಳೆದರು ಮತ್ತು ತಮ್ಮ ಊಟವನ್ನು ಆನಂದಿಸಿದರು ಎಂದೂ ಮೂಲಗಳು ಹೇಳಿವೆ. ಲಾಲೂ ಪ್ರಸಾದ್‌ ಯಾದವ್ ಅವರು ಬಿಹಾರದಿಂದ ದೇಸಿ ಮಟನ್ ಮತ್ತು ಮಸಾಲೆಗಳನ್ನು ತರಲು ವ್ಯವಸ್ಥೆ ಮಾಡಿದರು ಹಾಗೂ ಬಿಹಾರದ ವಿಶೇಷ ಶೈಲಿಯಲ್ಲಿ ಮಟನ್ ಅನ್ನು ಹೇಗೆ ಬೇಯಿಸುತ್ತಾರೆ ಎಂಬುದನ್ನು ಕಾಂಗ್ರೆಸ್ ನಾಯಕರಿಗೆ ತೋರಿಸಿದರು ಎಂದು ಮೂಲಗಳು ತಿಳಿಸಿವೆ. 

ಬಿಹಾರದ ಚಂಪಾರಣ್ ಮಟನ್ ತನ್ನ ವಿಶಿಷ್ಟವಾದ ಅಡುಗೆ ಶೈಲಿ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಇನ್ನೊಂದೆಡೆ, ರಾಹುಲ್‌ ಗಾಂಧಿ ಆರ್‌ಜೆಡಿ ಮುಖ್ಯಸ್ಥರ ಆರೋಗ್ಯವನ್ನೂ ವಿಚಾರಿಸಿದ್ದಾರೆ. ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೀಡಿದ ಬಿಗ್ ರಿಲೀಫ್ ಸಂಸತ್ತಿಗೆ ಮರು ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ. ಆದರೆ, ಲೋಕಸಭೆಯ ಸೆಕ್ರೆಟರಿಯೇಟ್ ಅವರ ಸದಸ್ಯತ್ವವನ್ನು ಮರುಸ್ಥಾಪಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಮಂಗಳವಾರದಿಂದ ಪ್ರಾರಂಭವಾಗಲಿರುವ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಅವರು ಭಾಗವಹಿಸಲು ಸಾಧ್ಯವಾಗುತ್ತದೆಯೇ ಎಂಬುದು ಈಗ ದೊಡ್ಡ ಪ್ರಶ್ನೆಗಳಾಗಿವೆ.

ಇದನ್ನೂ ಓದಿ: ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ

ಕಾನೂನಾತ್ಮಕವಾಗಿ, ಕಾಂಗ್ರೆಸ್ ನಾಯಕ 2019 ರ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಅನರ್ಹತೆಗೆ ಕಾರಣವಾದ ಸೂರತ್ ವಿಚಾರಣಾ ನ್ಯಾಯಾಲಯದ ಮಾರ್ಚ್ ಆದೇಶವನ್ನು ಪ್ರಶ್ನಿಸಿದ್ದರು. ಇನ್ನು, ಸೂರತ್‌ನ ಸೆಷನ್ಸ್ ನ್ಯಾಯಾಲಯವು ಆಗಸ್ಟ್ 21 ರಂದು ಅವರನ್ನು ಅಪರಾಧಿ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ತೀರ್ಪಿನ ವಿರುದ್ಧದ ಅವರ ಮೇಲ್ಮನವಿಯನ್ನು ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ಬಳಿಕ ರಾಹುಲ್‌ ಗಾಂಧಿಗೆ ಮಂಡಿನೋವು: ಕೇರಳದಲ್ಲಿ ಆಯುರ್ವೇದಿಕ್‌ ಚಿಕಿತ್ಸೆ

Latest Videos
Follow Us:
Download App:
  • android
  • ios