ಭಾರತ್‌ ಜೋಡೋ ಯಾತ್ರೆ ಬಳಿಕ ರಾಹುಲ್‌ ಗಾಂಧಿಗೆ ಮಂಡಿನೋವು: ಕೇರಳದಲ್ಲಿ ಆಯುರ್ವೇದಿಕ್‌ ಚಿಕಿತ್ಸೆ

ಮಂಡಿನೋವಿನ ಸಮಸ್ಯೆಯಿಂದಾಗಿ ಜುಲೈ 21ರಂದು ರಾಹುಲ್‌ ಕೊಟ್ಟೈಕಲ್‌ ಆರ್ಯ ವೈದ್ಯ ಶಾಲೆಗೆ ದಾಖಲಾಗಿದ್ದರು. ಭಾರತ್‌ ಜೋಡೋ ಯಾತ್ರೆಯ ಬಳಿಕ ರಾಹುಲ್‌ ಮಂಡಿನೋವು ಸಮಸ್ಯೆ ಎದುರಿಸುತ್ತಿದ್ದಾರೆ.

rahul gandhi undergoing treatment in kerala likely to be discharged on july 30 ash

ಕಲ್ಲಿಕೋಟೆ (ಜುಲೈ 29, 2023): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಡಿನೋವಿನ ಸಮಸ್ಯೆಗೆ ಒಳಗಾಗಿದ್ದು, ಕೇರಳದಲ್ಲಿ ಆಯುರ್ವೇದಿಕ್‌ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರು ಜುಲೈ 30ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಮಂಡಿನೋವಿನ ಸಮಸ್ಯೆಯಿಂದಾಗಿ ಜುಲೈ 21ರಂದು ರಾಹುಲ್‌ ಕೊಟ್ಟೈಕಲ್‌ ಆರ್ಯ ವೈದ್ಯ ಶಾಲೆಗೆ ದಾಖಲಾಗಿದ್ದರು. ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹಾಗೂ ಶಾಸಕ ಎ.ಪಿ.ಅನಿಲ್‌ ಕುಮಾರ್‌ ರಾಹುಲ್‌ ಅವರನ್ನು ಸ್ವಾಗತಿಸಿದ್ದರು. ರಾಹುಲ್‌ ಅವರಿಗಾಗಿ ಆಸ್ಪತ್ರೆಯಲ್ಲಿ ಪಿಎಸ್‌ವಿ ನಾಟ್ಯ ಸಂಘದಿಂದ ಕಥಕ್ಕಳಿ ಆಧಾರದ ದಕ್ಷಯಜ್ಞ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅಲ್ಲದೇ ಈ ವೇಳೆ ಅವರು ಮಲಯಾಳಂ ಕವಿ ವಾಸುದೇವನ್‌ ನಾಯರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಾರತ್‌ ಜೋಡೋ ಯಾತ್ರೆಯ ಬಳಿಕ ರಾಹುಲ್‌ ಮಂಡಿನೋವು ಸಮಸ್ಯೆ ಎದುರಿಸುತ್ತಿದ್ದಾರೆ.

ಇದನ್ನು ಓದಿ: ರಾಜಸ್ಥಾನದಲ್ಲಿ ರೆಡ್‌ ಡೈರಿ ಪ್ರಸ್ತಾಪಿಸಿದ ಮೋದಿ: ಕಾಂಗ್ರೆಸ್‌ನದು ಲೂಟಿ ಮತ್ತು ಸುಳ್ಳಿನ ಅಂಗಡಿ ಎಂದು ಪ್ರಧಾನಿ ವ್ಯಂಗ್ಯ

ಅಧಿಕಾರಕ್ಕಾಗಿ ಸ್ತ್ರೀ ಸ್ವಾಭಿಮಾನದ ಜತೆ ಬಿಜೆಪಿ ಆಟ: ರಾಹುಲ್‌ ಟೀಕೆ; ಬ್ರಿಜ್‌ಭೂಷಣ್‌, ನಗ್ನ ಪರೇಡ್‌ ಘಟನೆ ಉಲ್ಲೇಖ
ನವದೆಹಲಿ: ಅಧಿಕಾರದ ದುರಾಸೆಯಿಂದ ‘ಮಹಿಳೆಯರ ಗೌರವ’ ಹಾಗೂ ದೇಶದ ಸ್ವಾಭಿಮಾನದ ಜತೆ ಬಿಜೆಪಿ ಆಟವಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ ಪೋಸ್ಟ್‌ ಮಾಡಿರುವ ಅವರು, ಇತ್ತೀಚೆಗೆ ವರದಿಯಾದ ಒಲಿಂಪಿಕ್‌ ಸಮಿತಿ ಮುಖ್ಯಸ್ಥ ಬ್ರಿಜ್‌ಭೂಷಣ್‌ ಪ್ರಕರಣ, ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಸೇರಿದಂತೆ ಹಲವು ಲೈಂಗಿಕ ದೌರ್ಜನ್ಯಗಳ ಘಟನೆಗಳ ವಿಡಿಯೋ ಮಾಂಟೇಜ್‌ ಅನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರೈತರನ್ನು ನಾವು ಅರ್ಥ ಮಾಡಿಕೊಂಡ್ರೆ ದೇಶದ ಸಮಸ್ಯೆಗೆ ಪರಿಹಾರ: ರಾಹುಲ್‌ ಗಾಂಧಿ

‘ಮಹಿಳೆಯರನ್ನು ಗೌರವಿಸದ ದೇಶವು ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ. ಅಧಿಕಾರದ ದುರಾಸೆಯಿಂದ ಬಿಜೆಪಿಯು ಮಹಿಳೆಯರ ಗೌರವ ಮತ್ತು ದೇಶದ ಸ್ವಾಭಿಮಾನ - ಎರಡರಲ್ಲೂ ಆಟವಾಡುತ್ತಿದೆ’ ಎಂದು ರಾಹುಲ್‌ ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. ಬಿಲ್ಕಿಸ್‌ ಬಾನೊ ಸಾಮೂಹಿಕ ಅತ್ಯಾಚಾರ ದೋಷಿಗಳ ಬಿಡುಗಡೆ ಬಗ್ಗೆ ಕೂಡ ವಿಡಿಯೋದಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ಮಳೆ ನಡುವೆಯೂ ಭತ್ತ ನಾಟಿ ಮಾಡಿ, ಟ್ರ್ಯಾಕ್ಟರ್‌ ಓಡಿಸಿದ ರಾಹುಲ್‌ ಗಾಂಧಿ

Latest Videos
Follow Us:
Download App:
  • android
  • ios