ಆಹಾರದ ತಟ್ಟೆಗಾಗಿ ಶಿಕ್ಷಕರ ಹೋರಾಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಶಿಕ್ಷಕರ ಸಭೆ ಕರೆದಿದ್ದ ಪಂಜಾಬ್ ಸರ್ಕಾರ

ಲೂಧಿಯಾನ: ಉಚಿತ ಆಹಾರಕ್ಕಾಗಿ ಶಿಕ್ಷಕರು ಪ್ರಾಂಶುಪಾಲರ ಮಧ್ಯೆ ನೂಕು ನುಗ್ಗಲು ಉಂಟಾದ ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ. ಉಚಿತ ಆಹಾರಕ್ಕಾಗಿ ಶಿಕ್ಷಕರು ಹಾಗೂ ಪ್ರಾಂಶುಪಾಲರು ಪರಸ್ಪರ ನೂಕಾಡುತ್ತಿರುವುದು ಕಂಡು ಬಂದಿದೆ. ಪಂಜಾಬ್‌ನಲ್ಲಿ ಆಡಳಿತದಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯಸ್ಥರು ಮತ್ತುಶಿಕ್ಷಕರ ಸಭೆ ಆಯೋಜಿಸಲಾಗಿತ್ತು. ಇದಾದ ಬಳಿಕ ಸಭೆಯಲ್ಲಿ ಭಾಗವಹಿಸಿದವರಿಗೆ ಉಚಿತ ಊಟವನ್ನು ಆಯೋಜಿಸಲಾಗಿತ್ತು. ಸಭೆ ಮುಗಿದ ನಂತರ ಎಲ್ಲರೂ ಊಟಕ್ಕೆ ಒಮ್ಮೆಗೆ ತೆರಳಿದ್ದು, ಊಟದ ಪ್ಲೇಟ್‌ಗಾಗಿ ಶಿಕ್ಷಕರು ಪರಸ್ಪರ ನೂಕಾಡಿದ ಘಟನೆ ನಡೆಯಿತು.

ಲೂಧಿಯಾನದ ಖ್ಯಾತ ರೆಸಾರ್ಟ್‌ನಲ್ಲಿ ಈ ದೃಶ್ಯಗಳು ಕಂಡುಬಂದಿವೆ. ಶಿಕ್ಷಣ ಇಲಾಖೆಯು ಶಿಕ್ಷಣದ ಗುಣಮಟ್ಟದ ಕುರಿತು ಚರ್ಚಿಸಲು ರಾಜ್ಯದ 2,600 ಕ್ಕೂ ಹೆಚ್ಚು ಶಾಲಾ ಮುಖ್ಯಸ್ಥರು ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳ ಸಭೆಯನ್ನು ಸರ್ಕಾರ ಕರೆದಿತ್ತು. ಸಭೆಯ ನಂತರ, ಮುಖ್ಯಮಂತ್ರಿಯವರು ಜಾರಿಯಲ್ಲಿ ಇಲ್ಲದ (out-of-the-box) ಶೈಕ್ಷಣಿಕ ಸುಧಾರಣೆಗಳನ್ನು ತರಲು ಸಲಹೆಗಳನ್ನು ಪಡೆಯಲು ಆನ್‌ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಮಧ್ಯಾಹ್ನದ ಊಟಕ್ಕೆ ತಟ್ಟೆ ಪಡೆಯಲು ಶಿಕ್ಷಕರು ಹೋರಾಡುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

Scroll to load tweet…

ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕರು ತಟ್ಟೆಗಾಗಿ ಹೊಡೆದಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಇದನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ನೆಟ್ಟಿಗರೊಬ್ಬರು, 'ಪಂಜಾಬ್‌ನ ಲುಧಿಯಾನಾದಲ್ಲಿ ಸಿಎಂ ಭಗವಂತ್ ಮಾನ್ ಮತ್ತು ಶಿಕ್ಷಣ ಸಚಿವರ ಭೇಟಿಯ ನಂತರ ಪ್ರಾಂಶುಪಾಲರು ಮತ್ತು ಶಿಕ್ಷಕರ ಊಟದ ದೃಶ್ಯ. ಅವರು ಅನೇಕ ದಿನಗಳಿಂದ ಹಸಿವಿನಿಂದ ಬಳಲುತ್ತಿರುವಂತೆ ತೋರುತ್ತಿದೆ ಅಥವಾ ಅವರು ಉಚಿತ ಊಟವನ್ನು ಕಳೆದುಕೊಳ್ಳಲು ಬಯಸಲಿಲ್ಲ' ಎಂದು ಬರೆದಿದ್ದಾರೆ. 

ಬದಲಾದ ವ್ಯವಸ್ಥೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳು

ಇನ್ನು ಈ ಶಿಕ್ಷಕರನ್ನು ಕರೆತರಲು ಹಾಗೂ ಅವರ ಪ್ರದೇಶಕ್ಕೆ ಬಿಡಲು ಸರ್ಕಾರವೂ 57 ಹವಾನಿಯಂತ್ರಿತ ಬಸ್‌ಗಳ ವ್ಯವಸ್ಥೆ ಮಾಡಿತ್ತು. ಹೊಸ ನೀತಿಯನ್ನು ರೂಪಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಶಿಕ್ಷಕರ ಸಲಹೆಗಳನ್ನು ಆಲಿಸಲು ಸಭೆ ಕರೆಯಲಾಗಿದೆ ಎಂದು ಶಿಕ್ಷಣ ಸಚಿವ (Education Minister) ಗುರ್ಮೀತ್ ಸಿಂಗ್ ಮೀತ್ ಹಯರ್ (Gurmeet Singh Meet Hayer) ಹೇಳಿದ್ದಾರೆ.

ಸಾಮಾಜಿಕ ಅಂತರ ಮರೆತು ಆಹಾರಕ್ಕಾಗಿ ಮುಗಿಬಿದ್ದ ಕಾರ್ಮಿಕರು..!
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತು ಸರ್ವಕಾಲಕ್ಕೂ ಸತ್ಯ. ತಂದೆ ತಾಯಂದಿರನ್ನು ಹೊರತುಪಡಿಸಿ ವಿದ್ಯಾರ್ಥಿಗಳ ಏಳಿಗೆ ಬಯಸಿ ಕಾಳಜಿವಹಿಸುವವರು ಶಿಕ್ಷಕರು. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದಾಗ, ಗುರಿ ತಲುಪಿದಾಗ ಅತಿಹೆಚ್ಚು ಸಂಭ್ರಮಿಸುವವರು ಶಿಕ್ಷಕರೆ. ಬೆನ್ನುತಟ್ಟಿ ಪ್ರೋತ್ಸಾಹಿಸುವ, ಎಡವಿದಾಗ ತಿದ್ದುವ, ಸರಿದಾರಿಯಲ್ಲಿ ಮುನ್ನಡೆಸುವ ಗುರುವಿಗೆ ಪುರಾಣ ಕಾಲದಿಂದಲೂ ಪೂಜ್ಯ ಸ್ಥಾನ ಕಲ್ಪಿಸಲಾಗಿದೆ.

ಗುರುಕುಲ ಪದ್ಧತಿಯಲ್ಲಿ ಗುರುವು ಅರಳಿ, ಅಶ್ವತ್ಥ ಮರದ ಕಟ್ಟೆಯಲ್ಲಿ ಕುಳಿತು ಶಿಶ್ಯರು ಗುರುವಿಗಿಂತ ಕೆಳಗೆ ಅಂದರೆ ನೆಲದಲ್ಲಿ ಕುಳಿತು ವಿದ್ಯಾರ್ಜನೆ ಮಾಡುತ್ತಿದ್ದರು ಕ್ರಮೇಣ 'ಗುರುಮುಖೇನ' ಪದ್ಧತಿ ಅಳಿದು ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆ ರೂಢಿಗೆ ಬಂತು ಕ್ರಮೇಣ ವಿದ್ಯಾರ್ಥಿಗಳು ಸುಖವಾಗಿ ಕುಳಿತು ಶಿಕ್ಷಕರು ನಿಂತು ಬೋಧನೆ ಮಾಡುವುದು ಪರಿಪಾಠವಾಯಿತು. ಎಷ್ಟೋ ವರ್ಷಗಳಿಂದ ಇದೆ ಪದ್ಧತಿ ಅಭ್ಯಾಸವಾಗಿತ್ತು ಇತ್ತೀಚೆಗೆ ತರಗತಿಗಳಲ್ಲಿನ ಕಲಿಕೆ ಕೊರೋನಾ ಕಾರಣದಿಂದ ಬೇರೊಂದು ರೂಪ ಪಡೆಯಿತು ನಾಲ್ಕು ಗೋಡೆಗಳ ಬದಲಾಗಿ ಶಿಕ್ಷಕರು ವಿವಿಧ ಆ್ಯಪ್‌ ಗಳನ್ನು ಅವಲಂಬಿಸಬೇಕಾಯಿತು. ಈ ಹೊಸ ಯಾಂತ್ರಿಕ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳುವುದು ಶಿಕ್ಷಕರಿಗೂ ಕಷ್ಟವಾಗಿತ್ತು. ತಾವೂ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡು ವಿದ್ಯಾರ್ಥಿಗಳನ್ನೂ ಆನ್ಲೈನ್ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುವುದು ಸವಾಲೇ ಆಗಿತ್ತು.