ಅಕ್ರಮ ಆಸ್ತಿಗಳಿಗೆ ಪ್ರಕರಣದಡಿ ಕಾಂಗ್ರೆಸ್ ಪ್ರಮುಖ ನಾಯಕ, ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ ಓಂ ಪ್ರಕಾಶ್ ಸೋನಿ ಅರೆಸ್ಟ್ ಆಗಿದ್ದಾರೆ. ಪಂಜಾಬ್ ವಿಜಿಲೆನ್ಸ್ ಬ್ಯೂರೋ ಅರೆಸ್ಟ್ ಮಾಡಿದ್ದು, ನಾಳೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. 

ಚಂಢೀಘಡ(ಜು.09) ಕಾಂಗ್ರೆಸ್ ಮತ್ತೊಂದು ಶಾಕ್ ಎದುರಾಗಿದೆ. ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಓಂ ಪ್ರಕಾಶ್ ಸೋನಿ ಅರೆಸ್ಟ್ ಆಗಿದ್ದಾರೆ. ಅಕ್ರಮ ಆಸ್ತಿಗಳಿಗೆ ಪ್ರಕರಣದಡಿ ಪಂಜಾಬ್ ವಿಜಿಲೆನ್ಸ್ ಬ್ಯೂರೋ ಸೋನಿಯವರನ್ನು ಬಂಧಿಸಿದೆ. 2016ರಿಂದ 2022ರ ಅವಧಿಯಲ್ಲಿ ಓಂ ಪ್ರಕಾಶ್ ಸೋನಿ ಅಕ್ರಮವಾಗಿ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭ್ರಷ್ಟಾಚಾರ ವಿರುದ್ದ ಆಂದೋಲನ ಆರಂಭಿಸಿದ ಬೆನ್ನಲ್ಲೇ ಓಂ ಪ್ರಕಾಶ್ ಸೋನಿ ಬಂಧನವಾಗಿದೆ. ಇದು ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ನಡುವಿನ ರಾಜಕೀಯ ಗುದ್ದಾಟಕ್ಕೂ ಕಾರಣವಾಗಿದೆ.

ಓಂ ಪ್ರಕಾಶ್ ಸೋನಿಯನ್ನು ನಾಳೆ ಅಮೃತಸರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. 2022ರಲ್ಲಿ ಅಮೃತಸರ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಸೆಕ್ಷನ್ 13 (1) (b) ಹಾಗೂ 13 (2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ಟೋಬರ್ 10, 2022ರಲ್ಲಿ ತನಿಖೆಗೆ ಆದೇಶಿಸಲಾಗಿತ್ತು. 

ಭಾರತದ ಸೇಡು..ರಸ್ತೆ ಅಪಘಾತದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಸಾವು?

ಆದಾಯಕ್ಕಿಂತ ಹೆಚ್ತಿನ ಆಸ್ತಿಗಳಿಸಿದ್ದಾರೆ ಅನ್ನೋ ಆರೋಪಡಿ ಪಂಜಾಬ್ ವಿಜಿಲೆನ್ಸ್ ಬ್ಯೂರೋ ತನಿಖೆ ನಡೆಸಿತ್ತು. ಈ ವೇಳೆ ಎಪ್ರಿಲ್ 1, 2026 ರಿಂದ ಮಾರ್ಚ್ 31, 2022ರ ವರೆಗೆ ಓಂ ಪ್ರಕಾಶ್ ಸೋನಿ 4.52 ಕೋಟಿ ರೂಪಾಯಿ ಆದಾಯ ಪಡೆದಿದ್ದಾರೆ. ಆದರೆ ಸೋನಿ 12.48 ಕೋಟಿ ರೂಪಾಯಿಯನ್ನು ಹೂಡಿಕೆ ಸೇರಿದಂತೆ ಇತರೆಡೆಗಳಲ್ಲಿ ಖರ್ಚು ಮಾಡಿದ್ದಾರೆ.ಹಲವೆಡೆ ಆಸ್ತಿ ಖರೀದಿಸಿದ್ದಾರೆ. ಆದಾಯಕ್ಕಿಂತ ಸೋನಿ ಅವರ ಖರ್ಚು ವೆಚ್ಚ ಶೇಕಡಾ 176.08%ರಷ್ಟು ಹೆಚ್ಚಿದೆ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿತ್ತು.

ಓಂ ಪ್ರಕಾಶ್ ಸೋನಿ ತಮ್ಮ ಪತ್ನಿ ಸುಮನ್ ಸೋನಿ, ಪುತ್ರ ರಾಘವ್ ಸೋನಿ ಹೆಸರಲ್ಲಿ ಆಸ್ತಿ ಖರೀದಿಸಿದ್ದಾರೆ. ಹೀಗಾಗಿ ಹೆಚ್ಚಿನ ತನಿಖೆಯ ಅಗತ್ಯವಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗುತ್ತಿರುವ ಪಂಜಾಬ್‌ನ ನಾಲ್ಕನೇ ಕಾಂಗ್ರೆಸ್ ಮಾಜಿ ಸಚಿವರಾಗಿದ್ದಾರೆ. ಇದಕ್ಕೂ ಮೊದಲು ಭಾರತ್ ಭೂಷಣ್ ಅಶು, ಸಾಧು ಸಿಂಗ್ ಧರ್ಮಾಸೋತ್ ಹಾಗೂ ಸುಂದರ್ ಶ್ಯಾಮ್ ಆರೋರ ಬಂಧನವಾಗಿದ್ದಾರೆ. ಇದೀಗ ನಾಲ್ಕು ಮಾಜಿ ಸಚಿವರು ಪಂಜಾಬ್‌ನ ಆಮ್ ಆದ್ಮಿ ಸರ್ಕಾರದ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. 

ಕರ್ನಾಟಕ ಬಿಜೆಪಿಗೆ ಮಹಿಳಾ ಸಾರಥ್ಯ? ಉಳಿದ ನಾಲ್ಕು ರಾಜ್ಯಗಳಿಗೆ ಅಧ್ಯಕ್ಷರ ಘೋಷಣೆ!

ಓಂ ಪ್ರಕಾಶ್ ಸೋನಿ ಸೆಪ್ಟೆಂಬರ್ 20, 2021ರಿಂದ ಮಾರ್ಚ್ 11, 2022ರ ವರೆಗೆ ಪಂಜಾಬ್‌ನ ಉಪ ಮುಖ್ಯಮಂತ್ರಿಯಾಗಿದ್ದರು. ಚರಣಜಿತ್ ಸಿಂಗ್ ಚನ್ನಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸೋನಿ, ಪಂಜಾಬ್‌ನ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತಗೊಂಡಿದ್ದರು. 1997ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸೋನಿ, ಅಮೃತಸರ ಪೂರ್ವದಿಂದ ಪಂಜಾಬ್ ವಿಧಾನಸಭೆಗೆ ಆರಿಸಿಬಂದಿದ್ದರು. 2002ರಲ್ಲಿ ಮತ್ತೆ ಅಭೂತಪೂರ್ವ ಗೆಲುವು ಸಾಧಿಸಿದ್ದರು. 2007ರಲ್ಲಿ ಓಂ ಪ್ರಕಾಶ್ ಸೋನಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2012ರಲ್ಲಿ ಅಮೃತರ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು.