ಕರ್ನಾಟಕ ಬಿಜೆಪಿಗೆ ಮಹಿಳಾ ಸಾರಥ್ಯ? ಉಳಿದ ನಾಲ್ಕು ರಾಜ್ಯಗಳಿಗೆ ಅಧ್ಯಕ್ಷರ ಘೋಷಣೆ!
ಪಂಜಾಬ್, ತೆಲಂಗಾಣ, ಆಂಧ್ರ ಪ್ರದೇಶ, ಜಾರ್ಖಂಡ್‌ಗೆ ನೂತನ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಬಳಿಕ ರಾಜ್ಯಧ್ಯಕ್ಷರ ನೇಮಕ ಮಾಡಲು ನಿರ್ಧರಿಸಲಾಗಿದೆ.
ನವದೆಹಲಿ(ಜು.04): ಕಳೆದ ಕೆಲ ದಿನಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಬಿಜೆಪಿ ರಾಜ್ಯಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇದೀಗ ಅಂತ್ಯಗೊಂಡಿದೆ. ತೆಲಂಗಾಣ, ಪಂಜಾಬ್ ಸೇರಿದಂತೆ 5 ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನು ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಬಳಿಕ ರಾಜ್ಯಧ್ಯಕ್ಷರ ಆಯ್ಕೆ ನಡೆಯಲಿದೆ. ಬಿಜೆಪಿಯ ತೆಲಂಗಾಣ ನೂತನ ರಾಜ್ಯಾಧ್ಯಕ್ಷರಾಗಿ ಜಿ ಕಿಶನ್ ರೆಡ್ಡಿ ಆಯ್ಕೆಯಾಗಿದ್ದಾರೆ. ಇತ್ತ ಆಂಧ್ರ ಪ್ರದೇಶಕ್ಕೆ ಪುರಂದೇಶ್ವರಿ ಆಯ್ಕೆಯಾಗಿದ್ದರೆ, ಪಂಡಾಬ್‌ನಲ್ಲಿ ಬಿಜೆಪಿ ಸಾರಥ್ಯ ಸುನಿಲ್ ಜಖಾರ್ ಹೆಗಲೇರಿದೆ. ಇನ್ನು ಜಾರ್ಖಂಡ್‌ನಲ್ಲಿ ಬಬುಲಾ ಮರಂಡಿ ನೂತನ ಬಿಜೆಪಿ ರಾಜ್ಯಾಧ್ಕ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಾಲ್ಕು ರಾಜ್ಯಗಳ ನೂತನ ಬಿಜೆಪಿ ರಾಜ್ಯಾಧ್ಯಕ್ಷರು:
ಪಂಜಾಬ್: ಸುನಿಲ್ ಜಖಾರ್
ತೆಲಂಗಾಣ: ಕಿಶನ್ ರೆಡ್ಡಿ
ಆಂಧ್ರ ಪ್ರದೇಶ:ಪುರಂದೇಶ್ವರಿ
ಜಾರ್ಖಂಡ್: ಬಬುಲಾ ಮರಂಡಿ
ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಇಂದು ?
ಕೇಂದ್ರ ಸಚಿವರಾಗಿದ್ದ ಜಿ ಕಿಶನ್ ರೆಡ್ಡಿಯನ್ನು ಮುಂಬರುವ ಚುನಾವಣೆ ದೃಷ್ಟಿಯಿಂದ ಪಕ್ಷದ ಕೆಲಸಕ್ಕೆ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಹೀಗಾಗಿ ಜಿ ಕಿಶನ್ ರೆಡ್ಡಿಗೆ ತೆಲಂಗಾಣ ಬಿಜೆಪಿ ಸಾರಥ್ಯ ನೀಡಲಾಗಿದೆ. ಇನ್ನು ಕಾಂಗ್ರೆಸ್ ಅಧ್ಯಕ್ಷರಾಗಿದ್ ಸುನಿಲ್ ಜಖಾರ್, ನವಜೋತ್ ಸಿಂಗ್ ಸಿಧುಗಾಗಿ ಪಟ್ಟ ತ್ಯಾಗ ಮಾಡಬೇಕಾಯಿತು. ಇಷ್ಟೇ ಅಲ್ಲ ಸತತ ಅಪಮಾನಗಳಿಂದ ಬೇಸತ್ತ ಸುನಿಲ್ ಜಖಾರ್ ಬಿಜೆಪಿ ಸೇರಿಕೊಂಡಿದ್ದರು. ಇದೀಗ ಸುನಿಲ್ ಜಖಾರ್‌ಗೆ ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನ ನೀಡಲಾಗಿದೆ. ಈ ಮೂಲಕ ಪಂಜಾಬ್‌ನಲ್ಲಿ ಪಕ್ಷವನ್ನು ಬಲಪಡಿಸಲು ಹೈಕಮಾಂಡ್ ನಿರ್ಧರಿಸಿದೆ.
ಆಂಧ್ರ ಪ್ರದೇಶದ ಬಿಜೆಪಿ ನಾಯಕಿ ಪುರಂದೇಶ್ವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದಿದೆ. ಮಾಜಿ ಕೇಂದ್ರ ಸಚಿವೆಯಾಗಿ ಸೇವೆ ಸಲ್ಲಿಸಿರುವ ಪುರಂದೇಶ್ವರಿ ಇದೀಗ ಆಂಧ್ರದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಜಾರ್ಖಂಡ್ ವಿರೋಧ ಪಕ್ಷದ ನಾಯಕ ಬಬುಲಾ ಮರಂಡಿಗೆ ರಾಜ್ಯಧ್ಯಕ್ಷ ಸ್ಥಾನ ನೀಡಲಾಗಿದೆ. ಜಾರ್ಖಂಡ್‌ನಲ್ಲಿ ವಿಪಕ್ಷ ನಾಯಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಬಬುಲಾ ಮರಂಡಿಗೆ ಇದೀಗ ಪಕ್ಷ ಬಲಪಡಿಸಲು ಮಹತ್ತರ ಜವಾಬ್ದಾರಿ ನೀಡಲಾಗಿದೆ.
ಕಾಂಗ್ರೆಸ್ ಸರ್ಕಾರ ಕಟ್ಟಿಹಾಕಲು ಬಿಜೆಪಿ ಕಸರತ್ತು: ಸದನದ ಹೊರಗೆ, ಒಳಗೆ ಕೇಸರಿ ಪಡೆ ಪ್ರತಿಭಟನೆ
ಕರ್ನಾಟಕದ ಹಾಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವಧಿ ಅಂತ್ಯಗೊಂಡಿದೆ. ಇದೀಗ ನೂತನ ರಾಜ್ಯಧ್ಯಕ್ಷರ ಆಯ್ಕೆ ಕಸರತ್ತು ನಡೆಯುತ್ತಿದೆ. ಇತ್ತ ಕೆಲ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ. ರೇಸ್‌ನಲ್ಲಿ ಅಶ್ವತ್ಥ್ ನಾರಾಯಣ್, ಶೋಭ ಕರಂದ್ಲಾಜೆ, ಅರಗ ಜ್ಞಾನೇಂದ್ರ ಸೇರಿದಂತೆ ಕಲೆ ಹೆಸರುಗಳು ಕೇಳಿಬರುತ್ತಿದೆ. ಇದರಲ್ಲಿ ಕೇಂದ್ರದ ರಾಜ್ಯ ಖಾತೆ ಸಚಿವರಾಗಿರುವ ಶೋಭಾ ಕರಂದ್ಲಾಜೆ ನೂತನ ರಾಜ್ಯಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಈ ಕುರಿತು ಮಾಜಿ ಸಚಿವೆ, ಬಿಜೆಪಿ ನಾಯಕಿ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆಯರು ಯಾಕೆ ರಾಜ್ಯಾಧ್ಯಕ್ಷರಾಗಬಾರದು ಎಂದು ಪ್ರಶ್ನಿಸಿದ್ದಾರೆ. ಎಲ್ಲಾ ಕಡೆಯಲ್ಲೂ ಮಹಿಳೆಯರು ಇರಬೇಕು. ಯಾರೇ ರಾಜ್ಯಧ್ಯಕ್ಷರಾದರೂ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ಜೊಲ್ಲೆ ಹೇಳಿದ್ದಾರೆ. ರಾಜ್ಯಧ್ಯಕ್ಷರ ಆಯ್ಕೆನ್ನು ಹೈಕಮಾಂಡ್ ಮಾಡಲಿದೆ. ಆಯ್ಕೆ ಪ್ರಕ್ರಿಯೆಗಳು ನಡೆಯತ್ತಿದೆ ಎಂದು ಜೊಲ್ಲೆ ಹೇಳಿದ್ದಾರೆ.