ನವದೆಹಲಿ(ಡಿ.17): ದೆಹಲಿ-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪಂಜಾಬ್‌ನ ರೈತ ಮೃತಪಟ್ಟಿದ್ದಾರೆ. ದೆಹಲಿಯ ಡಿಸೆಂಬರ್‌ ಅತಿ ಚಳಿಗೆ ರೈತ ಮೃತಪಟ್ಟಿರುವುದಾಗಿ ಹೇಳಲಾಗಿದೆ.

ಕೆಂದ್ರ ಸರ್ಕಾರದ ಕೃಷಿ ನೀತಿಗೆದುರಾಗಿ 22 ದಿನಗಳಿಂದ ಪ್ರತಿಭಟಿಸುತ್ತಿದ್ದ ಮೂರು ಮಕ್ಕಳ ತಂದೆ ನಿಧನರಾಗಿದ್ದಾರೆ. 10, 12, 14 ವರ್ಷದ ಮಕ್ಕಳನ್ನು ಅಗಲಿದ ರೈತ ದೆಹಲಿಯ ವಿಪರೀತ ಚಳಿಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಯೋಧ್ಯೆ ಮಸೀದಿಗೆ ಶಂಕುಸ್ಥಾಪನೆಗೆ ಡೇಟ್ ಫಿಕ್ಸ್, ಇದು ಬಾಬ್ರಿ ಮಸೀದಿಗಿಂತಲೂ ದೊಡ್ಡದು

ದೆಹಲಿ-ಹರಿಯಾಣ ಗಡಿಯಲ್ಲಿ ನಡೆದ ಪ್ರತಿಭಟನೆಯ ಕೇಂದ್ರ ಸ್ಥಳದಲ್ಲಿ ಸಿಖ್ ಪಾದ್ರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳ ನಂತರ ಈ ಸಾವಿನ ವರದಿಗಳು ಹೊರಬಿದ್ದಿದೆ.

ಹರಿಯಾಣದ ಗುರುದ್ವಾರದ ಅರ್ಚಕ ಬಾಬಾ ರಾಮ್ ಸಿಂಗ್ ಅವರು ಪ್ರತಿಭಟನೆಯನ್ನು ಬಲವಾಗಿ ಬೆಂಬಲಿಸಿದ್ದರು ಮತ್ತು ಸರ್ಕಾರದ ಅನ್ಯಾಯದ ಬಗ್ಗೆ ಕೋಪ ಮತ್ತು ನೋವು ಅನುಭವಿಸಿದ್ದೇನೆ ಎಂದು ಬರೆದಿದ್ದರು.

ಶಾಂತಗೊಂಡ ಫ್ರಾನ್ಸ್‌ನಲ್ಲಿ ಮತ್ತೆ ಆತಂಕ; ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್‌ಗೆ ಕೊರೋನಾ!

ನವೆಂಬರ್ ಅಂತ್ಯದಲ್ಲಿ ಆಂದೋಲನ ಪ್ರಾರಂಭವಾದಾಗಿನಿಂದ 20 ಕ್ಕೂ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂದು ರೈತ ಗುಂಪುಗಳು ಹೇಳಿಕೊಂಡಿವೆ. ದೆಹಲಿ ಬಳಿಯ ಹೆದ್ದಾರಿಗಳಲ್ಲಿ ವಿವಿಧ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ರೈತರು ಹಲವಾರು ಹೊದಿಕೆಗಳು ಕಂಬಳಿಯೊಂದಿಗೆ ಭೇಟಿ ನೀಡುತ್ತಿದ್ದಾರೆ. ಪ್ರತಿಭಟನಾಕಾರರು ಬೆಚ್ಚಗಿರಲು ಬೆಂಕಿಯನ್ನು ಉರಿಸಿ ಚಳಿ ಕಾಯಿಸಿಕೊಳ್ಳುತ್ತಿರುವುದನ್ನೂ ಕಾಣಬಹುದು.