ಅಯೋಧ್ಯ(ಡಿ.17): ಅಯೋಧ್ಯೆಯ ಬಾಬ್ರಿ ಮಸೀದಿ ಬದಲಾಗಿ ನಿರ್ಮಿಸುತ್ತಿರುವ ಅಯೋಧ್ಯೆ ಮಸೀದಿಯ ಬ್ಲೂಪ್ರಿಂಟ್ ಶನಿವಾರ ಬಿಡುಗಡೆಯಾಗಲಿದೆ. ಗಣರಾಜ್ಯೋತ್ಸವದ ದಿನ ಮಸೀದಿಯ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಲಿದೆ. ಅಯೋಧ್ಯೆಯಲ್ಲಿ ಮಸೀದಿಗಾಗಿ ಖಾಲಿ ಬಿಟ್ಟ ಜಾಗದಲ್ಲಿ ಶಂಕು ಸ್ಥಾಪನೆ ನೆರವೇರಲಿದೆ.

ಏಳು ದಶಕಗಳ ಹಿಂದೆ ನಮ್ಮ ಸಂವಿಧಾನವು ಜಾರಿಗೆ ಬಂದ ದಿನ ಅಯೋಧ್ಯೆ ಮಸೀದಿಗೆ ಅಡಿಪಾಯ ಹಾಕಲು ಟ್ರಸ್ಟ್ ಜನವರಿ ನಿರ್ಧರಿಸಿದೆ. ನಮ್ಮ ಸಂವಿಧಾನವು ಬಹುತ್ವವನ್ನು ಆಧರಿಸಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ಕಾರ್ಯದರ್ಶಿ ಅತರ್ ಹುಸೈನ್ ತಿಳಿಸಿದ್ದಾರೆ. ಈ ಮಂಡಳಿಯನ್ನು ಮಸೀದಿ ನಿರ್ಮಾಣಕ್ಕಾಗಿ 6 ತಿಂಗಳ ಹಿಂದೆ ರಚಿಸಲಾಗಿದೆ.

ಕಮಲನಾಥ್ ಸರ್ಕಾರ ಬೀಳಿಸುವಲ್ಲಿ ಮೋದಿ ಪ್ರಮುಖ ಪಾತ್ರ: ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಅಡಿಗೆಮನೆ ಮತ್ತು ಗ್ರಂಥಾಲಯವನ್ನು ಒಳಗೊಂಡಿರುವ ಮಸೀದಿ ಸಂಕೀರ್ಣದ ನೀಲನಕ್ಷೆಯನ್ನು ಐಐಸಿಎಫ್ ಡಿಸೆಂಬರ್ 19 ರಂದು ಅನಾವರಣಗೊಳಿಸಲಿದೆ. ಈ ಯೋಜನೆಯ ನಕ್ಷೆಯನ್ನು ಮುಖ್ಯ ಶಿಲ್ಪಿ ಪ್ರೊಫೆಸರ್ ಎಸ್.ಎಂ. ಅಖ್ತರ್ ಮಾಡಿದ್ದಾರೆ.

ಮಸೀದಿಯು ಒಂದು ಸಮಯದಲ್ಲಿ 2,000 ನಮಾಜಿಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಮಸೀದಿ ರಚನೆಯು ದುಂಡಗಿನ ಆಕಾರದಲ್ಲಿರುತ್ತದೆ ಎಂದು ಶ್ರೀ ಅಖ್ತರ್ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿದರು.