Asianet Suvarna News Asianet Suvarna News

ಪಂಜಾಬ್ ಸಿಎಂ ರಾಜೀನಾಮೆ ಬೆನ್ನಲ್ಲೇ ರಾಜಸ್ಥಾನ ಕಾಂಗ್ರೆಸ್ ತಲ್ಲಣ; ಗೆಹ್ಲೋಟ್ ಆಪ್ತನ ತಲೆದಂಡ!

  • ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಬೆಳವಣಿಗೆ
  • ರಾಜಸ್ಥಾನ ಸಿಎಂ ಗೆಹ್ಲೋಟ್ OSD ಲೋಕೇಶ್ ಶರ್ಮಾ ರಾಜೀನಾಮೆ
  • ಅಮರಿಂದರ್ ರಾಜೀನಾಮೆ ಟೀಕಿಸಿ ಟ್ವೀಟ್, ತಕ್ಷಣವೆ ಕ್ರಮ ಕೈಗೊಂಡ ಕಾಂಗ್ರೆಸ್
     
Punjab congress Crisis Rajasthan CM Ashok Gehlot special officer resigns after controversial tweet ckm
Author
Bengaluru, First Published Sep 19, 2021, 4:11 PM IST

ರಾಜಸ್ಥಾನ(ಸೆ.19): ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ಅಸಮಾಧಾನಗೊಂಡಿರುವ ಅಮರಿಂದರ್ ರಾಜೀನಾಮೆ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ಈ ಬೆಳವಣೆಗೆ ಬೆನ್ನಲ್ಲೇ ರಾಜಸ್ಥಾನ ಕಾಂಗ್ರೆಸ್‌ನಲ್ಲೂ ತಲ್ಲಣ ಶುರುವಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪೆಷಲ್ ಡ್ಯೂಟಿ ಆಫೀಸರ್ ಲೋಕೇಶ್ ಶರ್ಮಾ ರಾಜೀನಾಮೆ ಸಲ್ಲಿಸಿದ್ದಾರೆ.

ಪಾಕ್ ಪ್ರೀತಿಗೆ ದೇಶ ಬಲಿಕೊಡಲು ಸಾಧ್ಯವಿಲ್ಲ, ಸಿಧು ಸಿಎಂ ಆಗಲು ಅಮರಿಂದರ್ ವಿರೋಧ!

ಲೋಕೇಶ್ ಶರ್ಮಾ ರಾಜೀನಾಮೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಕಾರಣವಾಗಿದೆ. ಅಮರಿಂದರ್ ಸಿಂಗ್ ರಾಜೀನಾಮೆ ಹಾಗೂ ಕಾಂಗ್ರೆಸ್ ಟೀಕಿಸಿ ಲೋಕೇಶ್ ಶರ್ಮಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕಾಂಗ್ರೆಸ್ ಕಣ್ಣು ಕೆಂಪಾಗಿಸಿದೆ. ಖಡಕ್ ವಾರ್ನಿಂಗ್ ಪಡೆದ ಲೋಕೇಶ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಕುರಿತು ಲೋಕೇಶ್ ಶರ್ಮಾ ಕಟುವಾಗಿ ಟೀಕಿಸಿದ್ದರು.  ಅವರು ಪ್ರಬಲರನ್ನು ದುರ್ಬಲರನ್ನಾಗಿಸುತ್ತಾರೆ. ಜನರನ್ನು ಒತ್ತಾಯಪೂರ್ವಕಾಗಿ ನಿರ್ಗಮಿಸುವಂತೆ ಮಾಡುತ್ತಾರೆ. ಅಂತಿಮವಾಗಿ ಬೇಲಿಯೇ ಎದ್ದು ಹೋಲ ಮೇಯ್ದದಂತೆ, ಅಂತಹ ಬೆಳೆಯನ್ನು ಯಾರು ಉಳಿಸಲು ಸಾಧ್ಯ ಎಂದು ಲೋಕೇಶ್ ಶರ್ಮಾ ಮಾರ್ಮಿಕವಾಗಿ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದರು. 

ಕಾಂಗ್ರೆಸ್‌ನಲ್ಲಿದ್ದ ಏಕೈಕ ದೇಶಭಕ್ತ ಅಮರಿಂದರ್, ಸೋಶಿಯಲ್ ಮೀಡಿಯಾದಲ್ಲಿ #JoinBJP ಟ್ರೆಂಡ್!

ಟ್ವೀಟ್ ರಾಜಸ್ಥಾನ ಕಾಂಗ್ರೆಸ್ ಹಾಗೂ ದೆಹಲಿಯಲ್ಲಿ ಭಾರಿ ಸದ್ದು ಮಾಡಿತು. ತಕ್ಷಣವೆ ಕ್ಷಮೆ ಕೇಳುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು. ಇದರಂತೆ ಕ್ಷಮೆ ಹೇಳಿದ ಲೋಕೇಶ್ ಶರ್ಮಾ, ದಿಢೀರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

2010ರಿಂದ ಟ್ವಿಟರ್‌ನಲ್ಲಿ ಸಕ್ರಿಯವಾಗಿದ್ದೇನೆ. ನಾನು ಯಾವತ್ತೂ ಪಕ್ಷ ಹಾಕಿದ ಗೆರೆ ದಾಟಿಲ್ಲ. ಪಕ್ಷ ಇತಿ ಮಿತಿ ಅರಿತು ಕೆಲಸ ಮಾಡಿದ್ದೇನೆ. ಶಿಸ್ತಿನ ಸಿಪಾಯಿಯಂತೆ ದುಡಿದ್ದೇನೆ. ಆದರೆ ಈಗ ಮಾಡಿದ ಟ್ವೀಟ್ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್‌ಗೆ ಇರಿಸುಮುರಿಸು ತಂದಿದೆ. ಇದರಿಂದ ಈ ಟ್ವೀಟ್‌ಗೆ ಕ್ಷಮೆ ಯಾಚಿಸುತ್ತೇನೆ ಎಂದು ಲೋಕೇಶ್ ಶರ್ಮಾ ಹೇಳಿದ್ದಾರೆ.

ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಕು: ಪಂಜಾಬ್ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದ್ ಸಿಂಗ್ ರಾಜೀನಾಮೆ!

ಕಳೆದ ಮಾರ್ಚ್‌ನಲ್ಲಿ ಪಕ್ಷದೊಳಗಿನ ಭಿನ್ನಮತವನ್ನು ಜಗಜ್ಜಾಹೀರು ಮಾಡಿದ ಕಾರಣಕ್ಕೆ ಇದೇ ಲೋಕೇಶ್ ಶರ್ಮಾ ಮೇಲೆ ದೂರು ದಾಖಲಾಗಿದೆ. ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಹಾಗೂ ಸಂಗಡಿಗರ ಆಡಿಯೋ ಕ್ಲಿಪ್ ವೈರಲ್ ಮಾಡಿದ ಆರೋಪದಡಿ ಕೇಸು ದಾಖಲಾಗಿತ್ತು. 

Follow Us:
Download App:
  • android
  • ios