ಕಾಂಗ್ರೆಸ್ ಒಳಜಗಳದಿಂದ ಬೇಸತ್ತ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಭಾವುಕರಾದ ಅಮರಿಂದರ್, ಪಂಜಾಬ್‌ನಲ್ಲಿ ಸಿಎಂ ರೇಸ್‌ಗೆ ಪೈಪೋಟಿ

ಪಂಜಾಬ್(ಸೆ.18): ಪಂಜಾಬ್ ಕಾಂಗ್ರೆಸ್ ಒಳಜಗಳಕ್ಕೆ ಇದೀಗ ಬಹುದೊಡ್ಡ ವಿಕೆಟ್ ಪತನಗೊಂಡಿದೆ.. ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಜೆ 4.30ಕ್ಕೆ ರಾಜಭವನಕ್ಕೆ ತೆರಳಿದ ಅಮರಿಂದರ್ ಸಿಂಗ್, ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

Scroll to load tweet…

ಕಾಶ್ಮೀರ ಭಾರತದ್ದಲ್ಲ ಎಂದ ಸಿಧು ಸಲಹೆಗಾರನಿಗೆ ಕ್ಯಾಪ್ಟನ್‌ ಕ್ಲಾಸ್‌!

ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅಮರಿಂದರ್, ಕಾಂಗ್ರೆಸ್ ಮಾಡಿದ ಅವಮಾನದ ಕುರಿತು ಕೆಲ ಸೂಕ್ಷ್ಮ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ಅಮರಿಂದರ್ ಕೊಂಚ ಭಾವುಕರಾಗಿದ್ದಾರೆ.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇತ್ತೀಚೆಗೆ ತಾರಕಕ್ಕೇರಿತ್ತು. ಸಿಧು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ಬಳಿಕ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದ ಅಮರಿಂದರ್, ಇದೀಗ ಒಳಜಗಳಕ್ಕೆ ಬೇಸತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಗಾಳಿ; ರಾಜೀನಾಮೆಗೆ ಮುಂದಾದ ಸಿಎಂ ಅಮರಿಂದರ್!

ರಾಜಭವನಕ್ಕೆ ತೆರಳುವ ಮುನ್ನ ಕ್ಯಾಪ್ಟನ್ ಅಮರಿಂದರ್ ಟ್ವೀಟ್ ಮೂಲಕ ರಾಜೀನಾಮೆ ನೀಡುವ ಕುರಿತು ಮಾಹಿತಿ ಬಹಿರಂಗ ಮಾಡಿದ್ದಾರೆ. ನನ್ನ ತಂದೆ ರಾಜಭವನಕ್ಕೆ ತೆರಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ ನಾನು ಸಾಕ್ಷಿಯಾಗಿದ್ದೆ. ಇದೀಗ ಕುಟುಂಬದ ಜೊತೆ ನಾನು ರಾಜಭವನಕ್ಕೆ ತೆರಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. 

Scroll to load tweet…

ರಾಜೀನಾಮೆ ಮುನ್ನ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಹಾಗೂ ಬಣ ಮಾಡುತ್ತಿರುವ ಅವಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಗೆ ಹೇಳಿದ್ದರು ಎಂದು ಮೂಲಗಳು ಹೇಳಿವೆ. ಆದರೆ ಕಾಂಗ್ರೆಸ್ ಹೈಕಮಾಂಡ್ ನವಜೋತ್ ಸಿಂಗ್ ಸಿಧುರತ್ತ ಒಲವು ತೋರಿದೆ. ಹೀಗಾಗಿ ಭಿನ್ನಮತ ಶಮನಕ್ಕೆ ಯಾವುದೇ ದಾರಿ ಹುುಡುಕಡೆ ಸುಮ್ಮನಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಮುಂದಿನ ವರ್ಷ ಪಂಜಾಬ್ ವಿಧಾನಸಭೆ ಚುನಾವಣೆ ಆಗಮಿಸುತ್ತಿದೆ. ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಇದರ ನಡುವೆ ಅಮರಿಂದರ್ ಸಿಂಗ್ ರಾಜೀನಾಮೆ ಕಾಂಗ್ರೆಸ್‌ಗೆ ತೀವ್ರ ಹೊಡೆತ ನೀಡುವ ಸಾಧ್ಯತೆ ಇದೆ.