ಫೆಬ್ರವರಿ 14ಕ್ಕೆ ನಿಗದಿಯಾಗಿರುವ ಪಂಜಾಬ್ ಚುನಾವಣೆ ಮುಂದೂಡಿಆರು ದಿನಗಳ ಕಾಲ ಚುನಾವಣೆ ಮುಂದೂಡುವಂತೆ ಆಗ್ರಹಕೇಂದ್ರ ಚುನಾವಣಾ ಆಯೋಗ ಪಂಜಾಬ್ ಮುಖ್ಯಮಂತ್ರಿಯಿಂದ ಪತ್ರ

ನವದೆಹಲಿ (ಜ.15): ರಾಜಕೀಯ ಕಾರಣಗಳಿಂದಾಗಿ ದೊಡ್ಡ ಮಟ್ಟದ ಸುದ್ದಿಯಲ್ಲಿರುವ ಪಂಜಾಬ್ ನಲ್ಲಿ (Punjab) ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಪಂಜಾಬ್ ನಲ್ಲಿ ವಿಧಾನಸಭೆ ಚುನಾವಣೆ (Assembly Election) ನಡೆಯಲಿದ್ದು, ಅದಕ್ಕಾಗಿ ಸೂಕ್ತ ತಯಾರಿಗಳನ್ನೂ ಮಾಡಲಾಗುತ್ತಿದೆ. ಅದರ ನಡುವೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು ಚುನಾವಣೆ ಮುಂದೂಡಿಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಜನವರಿ 13 ರಂದು ಈ ಕುರಿತಂತೆ, ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಸುಶೀಲ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಚುನಾವಣೆ ಮುಂದೂಡಿಕೆ ಮಾಡಲು ಪಂಜಾಬ್ ನಲ್ಲಿನ ಕೋವಿಡ್-19 ಪರಿಸ್ಥಿತಿ ಕಾರಣವಲ್ಲ. ಫೆಬ್ರವರಿ 16 ರಂದು ಗುರು ರವಿದಾಸ್ (Guru Ravidas birth anniversary) ಅವರ ಜನ್ಮಜಯಂತಿ ಆಗಿದ್ದು, ರಾಜ್ಯದ ಎಸ್ ಸಿ ಸಮುದಾಯದ ಬಹಳಷ್ಟು ಜನರು ಈ ವೇಳೆ ವಾರಣಾಸಿಗೆ (Varanasi) ತೆರಳಲಿದ್ದಾರೆ. ಆ ಕಾರಣದಿಂದ ಚುನಾವಣೆಯನ್ನು ಕನಿಷ್ಠ ಆರು ದಿನಗಳ ಕಾಲ ಮುಂದೂಡಿಕೆ ಮಾಡುವಂತೆ ಚರಂಜಿತ್ ಸಿಂಗ್ ಚನ್ನಿಪತ್ರದ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.

ಪಂಜಾಬ್ ಜನಸಂಖ್ಯೆಯ ಶೇ.32 ರಷ್ಟು ಮಂದಿ ದಲಿತ ಸಮುದಾಯದವರಾಗಿದ್ದಾರೆ. ಫೆ.10 ರಿಂದ 16ರವರೆಗೆ ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿ(Varanasi) ಗುರು ರವಿದಾಸ್ ಅವರ ಜನ್ಮಜಯಂತಿಯಿದ್ದು, ಬಹುತೇಕ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಬರೆದಿದ್ದಾರೆ.

Scroll to load tweet…


“ಇಂತಹ ಪರಿಸ್ಥಿತಿಯಲ್ಲಿ, ಈ ಸಮುದಾಯದ ಅನೇಕ ಜನರು ರಾಜ್ಯ ವಿಧಾನಸಭೆಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ, ಅದು ಅವರ ಸಾಂವಿಧಾನಿಕ ಹಕ್ಕು. 2022 ರ ಫೆಬ್ರವರಿ 10 ರಿಂದ 16 ರವರೆಗೆ ಬನಾರಸ್‌ಗೆ ಭೇಟಿ ನೀಡಲು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗುವ ರೀತಿಯಲ್ಲಿ ಮತದಾನದ ದಿನಾಂಕವನ್ನು ವಿಸ್ತರಣೆ ಮಾಡಿ ಎಂದು ಅವರು ವಿನಂತಿಸಿದ್ದಾರೆ ”ಎಂದು ಪಂಜಾಬ್ ಸಿಎಂ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Punjab Elections: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಚನ್ನಿ, ಸಿದ್ದುಗೆ ಟಿಕೆಟ್ ಸಿಕ್ಕಿದೆ ನೋಡಿ
"ಸುಮಾರು 20 ಲಕ್ಷ ಜನರು ರಾಜ್ಯ ವಿಧಾನಸಭೆಗೆ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಲು" ಕನಿಷ್ಠ ಆರು ದಿನಗಳ ಕಾಲ ಪಂಜಾಬ್ ಚುನಾವಣೆಯನ್ನು ಮುಂದೂಡುವಂತೆ ಕಾಂಗ್ರೆಸ್ ಮುಖ್ಯಮಂತ್ರಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಈ ನಡುವೆ, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 86 ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಇದರಲ್ಲಿ ಸಿಎಂ ಚರಂಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್ (ಎಸ್‌ಸಿ)ಯಿಂದ ಸ್ಪರ್ಧಿಸಲಿದ್ದಾರೆ. ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವದಿಂದ ಸ್ಪರ್ಧಿಸಲಿದ್ದಾರೆ. ಪ್ರತಾಪ್ ಸಿಂಗ್ ಬಾಜ್ವಾ ಕಡಿಯಾನ್‌ನಿಂದ ಮತ್ತು ಗಾಯಕ ಸಿಧು ಮೂಸೆವಾಲಾ ಮಾನಸಾದಿಂದ ಸ್ಪರ್ಧಿಸಲಿದ್ದಾರೆ. ಇದಲ್ಲದೇ ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಅವರಿಗೆ ಪಕ್ಷ ಮೊಗದಿಂದ ಟಿಕೆಟ್ ನೀಡಿದೆ. ಡೇರಾ ಬಾಬಾ ನಾನಕ್‌ನಿಂದ ಗೃಹ ಸಚಿವ ಸುಖಜೀಂದರ್ ಸಿಂಗ್ ರಾಂಧವಾ, ಅಮೃತಸರ ಸೆಂಟ್ರಲ್‌ನಿಂದ ಪಂಜಾಬ್ ಉಪ ಮುಖ್ಯಮಂತ್ರಿ ಓಂ ಪ್ರಕಾಶ್ ಸೋನಿ ಅವರನ್ನು ಕಣಕ್ಕಿಳಿಸಲಾಗಿದೆ. ಸನೋರ್ ವಿಧಾನಸಭಾ ಕ್ಷೇತ್ರದಿಂದ ಹರಿಂದರ್ ಪಾಲ್ ಸಿಂಗ್ ಮಾನ್ ಕಣಕ್ಕಿಳಿದಿದ್ದಾರೆ. ಪಂಜಾಬ್‌ನಲ್ಲಿ 117 ಕ್ಷೇತ್ರಗಳಿಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.