* ಪಂಜಾಬ್ ಚುನಾವಣಾ ಕಣದಲ್ಲಿ ಪಕ್ಷಗಳ ಕಸರತ್ತು* ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್* ಚನ್ನಿ, ಸಿದ್ದು ಸ್ಪರ್ಧೆ ಯಾವ ಕ್ಷೇತ್ರದಿಂದ
ಚಂಡೀಗಢ(ಜ.15): ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 86 ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಇದರಲ್ಲಿ ಸಿಎಂ ಚರಂಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್ (ಎಸ್‌ಸಿ)ಯಿಂದ ಸ್ಪರ್ಧಿಸಲಿದ್ದಾರೆ. ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವದಿಂದ ಸ್ಪರ್ಧಿಸಲಿದ್ದಾರೆ. ಪ್ರತಾಪ್ ಸಿಂಗ್ ಬಾಜ್ವಾ ಕಡಿಯಾನ್‌ನಿಂದ ಮತ್ತು ಗಾಯಕ ಸಿಧು ಮೂಸೆವಾಲಾ ಮಾನಸಾದಿಂದ ಸ್ಪರ್ಧಿಸಲಿದ್ದಾರೆ. ಇದಲ್ಲದೇ ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಅವರಿಗೆ ಪಕ್ಷ ಮೊಗದಿಂದ ಟಿಕೆಟ್ ನೀಡಿದೆ. ಡೇರಾ ಬಾಬಾ ನಾನಕ್‌ನಿಂದ ಗೃಹ ಸಚಿವ ಸುಖಜೀಂದರ್ ಸಿಂಗ್ ರಾಂಧವಾ, ಅಮೃತಸರ ಸೆಂಟ್ರಲ್‌ನಿಂದ ಪಂಜಾಬ್ ಉಪ ಮುಖ್ಯಮಂತ್ರಿ ಓಂ ಪ್ರಕಾಶ್ ಸೋನಿ ಅವರನ್ನು ಕಣಕ್ಕಿಳಿಸಲಾಗಿದೆ. ಸನೋರ್ ವಿಧಾನಸಭಾ ಕ್ಷೇತ್ರದಿಂದ ಹರಿಂದರ್ ಪಾಲ್ ಸಿಂಗ್ ಮಾನ್ ಕಣಕ್ಕಿಳಿದಿದ್ದಾರೆ.
ಈ ಅಭ್ಯರ್ಥಿಗಳಿಗೂ ಟಿಕೆಟ್
* ಸುಲ್ತಾನಪುರದಿಂದ ನರೇಶ್ ಪುರಿಗೆ
* ಪಠಾಣ್‌ಕೋಟ್‌ನಿಂದ ಅಮಿತ್ ವಿಜ್
* ಗುರುದಾಸ್‌ಪುರದಿಂದ ಬರಿಂದರ್ಜಿತ್ ಸಿಂಗ್ ಪಹ್ರಾ
* ದೀನಾನಗರದ ಅರುಣಾ ಚೌಧರಿ
* ಶ್ರೀಹರಗೋವಿಂದಪುರದಿಂದ ಮನದೀಪ್ ಸಿಂಗ್ ರಂಗರ್
* ರಾಜಿಂದರ್ ಸಿಂಗ್ ಬಾಜ್ವಾ ಫತೇಘರ್ ಚುಡಿಯಾನ್‌ನಿಂದ ಕಣಕ್ಕಿಳಿಯಲಿದ್ದಾರೆ
ಫೆಬ್ರವರಿ 14 ರಂದು ಮತದಾನ, ಮಾರ್ಚ್ 10 ರಂದು ಫಲಿತಾಂಶ
ಪಂಜಾಬ್‌ನಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. 2017ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿತ್ತು. ಪಕ್ಷ 77 ಸ್ಥಾನಗಳನ್ನು ಗೆದ್ದಿತ್ತು. ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಸಂಖ್ಯೆಯ ಪಕ್ಷವಾಯಿತು. ಅದೇ ಸಮಯದಲ್ಲಿ ಶಿರೋಮಣಿ ಅಕಾಲಿದಳಕ್ಕೆ ಕೇವಲ 15 ಸ್ಥಾನಗಳು ಮತ್ತು ಬಿಜೆಪಿಗೆ ಮೂರು ಸ್ಥಾನಗಳು ದೊರೆತವು. ಪಂಜಾಬ್‌ನಲ್ಲಿ 117 ವಿಧಾನಸಭಾ ಸ್ಥಾನಗಳಿವೆ.
