Assembly Elections 2022 Result ಕೆಲವೇ ಕ್ಷಣಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ರಾಜೀನಾಮೆ!

  • ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿರುವ ಚನಿ
  • ಪಂಜಾಬ್‌ನಲ್ಲಿ ಅಭೂತಪೂರ್ವ ಗೆಲುವಿನತ್ತ ಆಮ್ ಆದ್ಮಿ ಪಾರ್ಟಿ‌
  • 89 ಸ್ಥಾನಗಳಲ್ಲಿ ಆಪ್ ಮುನ್ನಡೆ, ಬಿಜೆಪಿ 5 ಸ್ಥಾನಗಳಲ್ಲಿ ಮುನ್ನಡೆ
  • 13 ಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ, ಸರ್ಕಾರ ರಚಿಸುವತ್ತ ಆಪ್ ಚಿತ್ತ
Punjab Assembly Elections 2022 Result CM charanjit singh channi set to resign aap leading with 89 seats ckm

ಪಂಜಾಬ್(ಮಾ.10): ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಇದೀಗ ಪಂಜಾಬ್‌ನಲ್ಲಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಈಗಾಗಲೇ 89 ಸ್ಥಾನಗಲ್ಲಿ ಆಮ್ ಆದ್ಮಿ ಪಾರ್ಟಿ ಮುನ್ನಡೆ ಸಾಧಿಸಿದೆ. ತೀವ್ರ ಮುಖಭಂಗಕ್ಕೆ ಒಳಗಾಗಿರುವ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ಕೆಲವೇ ಕ್ಷಣಗಳಲ್ಲಿ ಸಿಎಂ ಚರಣಜಿತ್ ಸಿಂಗ್ ಚನಿ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ.

ಅಧಿಕಾರರೂಢ ಕಾಂಗ್ರೆಸ್ ಕೇವಲ 13 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಬಿಜೆಪಿ 5 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಮ್ಯಾಜಿಕ್ ನಂಬರ್(59) ಸ್ಥಾನಗಳನ್ನು ದಾಟಿ ಮುಂದೆ ಸಾಗುತ್ತಿದ್ದಂತೆ ದೆಹಲಿ ಸಿಎಂ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶುಭಾಶಯ ಕೋರಿದ್ದಾರೆ. ಪಂಜಾಬ್ ಬೀದಿ ಬೀದಿಗಳಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ. 

Assembly Elections 2022 Result: ಪಂಜಾಬ್‌ನಲ್ಲಿ ಆಪ್‌ ಭಾರೀ ಮುನ್ನಡೆ, ಗೋವಾದಲ್ಲಿ ಅತಂತ್ರ ಸ್ಥಿತಿ!

ಪಂಜಾಬ್‌ನಲ್ಲಿ ಆಡಳಿತ ವಿರೋಧಿ ಎಲೆ ಎದ್ದು ಕಾಣುತ್ತಿದೆ.ಬರೋಬ್ಬರಿ 20ಕ್ಕೂ ಹೆಚ್ಚು ಹಾಲಿ ಸಚಿವರು ಸೋಲಿನತ್ತ ಮುಖ ಮಾಡಿದ್ದಾರೆ. ಇದರಲ್ಲಿ ಘಟಾನುಘಟಿ ಕಾಂಗ್ರೆಸ್ ನಾಯಕರಾದ, ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನಿ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಚನಿ ಸೇರಿದಂತೆ ಹಲವರು ಸೋಲಿನ ಸುಳಿಗೆ ಸಿಲುಕಿದ್ದಾರೆ.

ಸಿಎಂ ಚರಣಜಿತ್ ಸಿಂಗ್ ಚನಿ ಸ್ಪರ್ಧಿಸಿರುವ ಚಮಕೌರ್ ಸಾಹೀಬ್ ಹಾಗೂ ಬಹದೌರ್ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ನವಜೋತ್ ಸಿಂಗ್ ಸಿಧು ಪೂರ್ವ ಅಮೃತಸರ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಆಮ್ ಆದ್ಮಿ ಪಾರ್ಟಿ ಹಾಗೂ ಶಿರೋಮಣಿ ಅಕಾಲಿದ ದಳ ಅಭ್ಯರ್ಥಿ ಮುಂದೆ ಹಿನ್ನಡೆ ಸಾಧಿಸಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

Assembly Elections 2022 Result ಉತ್ತರಖಂಡದಲ್ಲಿ ಬಿಜೆಪಿ ಮುನ್ನಡೆ, ಹಾಲಿ ಸಿಎಂ ಫುಷ್ಕರ್ ಸಿಂಗ್‌ಗೆ ಹಿನ್ನಡೆ!

ಶಿರೋಮಣಿ ಅಕಾಲಿ ದಳ ನಾಯಕ ಸುಕ್ಬೀರ್ ಬಾದಲ್ ಕೂಡ ಹಿನ್ನಡೆ ಅನುಭವಿಸಿದ್ದಾರೆ. ಆಮ್ ಆದ್ಮಿ ಪಾರ್ಟಿ ಮುಂದೆ ಸುಕ್ಬೀರ್ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ಪಟಿಯಾಲ ಕ್ಷೇತ್ರದಿಂದ ಸ್ಪರ್ಧಿಸಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಹಿನ್ನಡೆ ಅನುಭವಿಸಿ್ದಾರೆ.

ಚಂಡೀಗಢ: ಪಂಜಾಬ್‌ ಚುನಾವಣಾ ಫಲಿತಾಂಶ ಗುರುವಾರ ಪ್ರಕಟವಾಗುವ ಹಿನ್ನೆಲೆಯಲ್ಲಿ ಪಂಜಾಬ್‌ನ ಸಿಹಿ ಖಾದ್ಯ ತಯಾರಕ ಅಂಗಡಿಗಳು ಲಾಡು ಸೇರಿದಂತೆ ಇತರ ಸಿಹಿ ತಿನಿಸುಗಳನ್ನು ಟನ್‌ಗಟ್ಟಲೇ ತಯಾರು ಮಾಡುತ್ತಿವೆ. ಇದರೊಂದಿಗೆ ಹಲವಾರು ಪಕ್ಷಗಳ ಅಭ್ಯರ್ಥಿಗಳು ಅಂಗಡಿಗಳಿಗೆ ಭೇಟಿ ನೀಡಿ ವಿವಿಧ ಬಗೆಯ ಸಿಹಿ ತಿನಿಸುಗಳಿಗೆ ಆರ್ಡರ್‌ ಮಾಡುತ್ತಿದ್ದಾರೆ.ಲೂಧಿಯಾನದಲ್ಲಿರುವ ಅಂಗಡಿಯೊಂದರಲ್ಲಿ ಗೆಲುವಿನ ಲಾಡು ಹೆಸರಿನಲ್ಲಿ ಸುಮಾರು 5 ಕೇಜಿ ತೂಕವಿರುವ ಲಾಡುಗಳನ್ನು ತಯಾರು ಮಾಡಲಾಗುತ್ತಿದೆ. ಇವುಗಳನ್ನು ಆಕರ್ಷಕ ತಟ್ಟೆಗಳಲ್ಲಿಟ್ಟು ಆರ್ಡರ್‌ ಮಾಡಿದವರಿಗೆ ತಲುಪಿಸಲಾಗುತ್ತಿದೆ. ‘ಈ ವರ್ಷ ನಾವು ಅತಿ ಹೆಚ್ಚು ಪ್ರಮಾಣದಲ್ಲಿ ಲಾಡುಗಾಗಿ ಆರ್ಡರ್‌ ಪಡೆದುಕೊಳ್ಳುತ್ತಿದ್ದೇವೆ. ಈ ವಿಶೇಷ ಲಾಡುಗಳನ್ನು ತಯಾರು ಮಾಡಲು ನಮ್ಮ ಪರಿಣಿತ ಕೆಲಸಗಾರನ್ನು ನೇಮಕ ಮಾಡಿದ್ದೇವೆ’ ಎಂದು ಪಂಜಾಬ್‌ ಹಲ್ವಾಯಿ ಅಸೋಸಿಯೇಶನ್‌ ಅಧ್ಯಕ್ಷ ನಾರಿಂದರ್‌ ಸಿಂಗ್‌ ಹೇಳಿದ್ದಾರೆ.

ಚುನಾವಣಾ ಸಮೀಕ್ಷೆ
ಎಲ್ಲ ಮಾಧ್ಯಮ ಸಂಸ್ಥೆಗಳು ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಪ್‌ ಬಹುಮತದ ರೇಖೆಯಾದ 59 ಮೀರಿ 60ಕ್ಕೂ ಹೆಚ್ಚು ಸೀಟು ಗೆಲ್ಲಲಿವೆ ಎಂದಿವೆ. ಟುಡೇಸ್‌ ಚಾಣಕ್ಯ 100 ಸ್ಥಾನಗಳನ್ನು ಆಫ್‌ಗೆ ಕೊಟ್ಟು ಕುತೂಹಲ ಮೂಡಿಸಿದೆ. ಒಳಗಜಳದ ಕಾರಣ ಆಡಳಿತಾರೂಢ ಕಾಂಗ್ರೆಸ್‌ ಗರಿಷ್ಠ 33 ಸ್ಥಾನ ಪಡೆಯಬಹುದು. ಕಾಂಗ್ರೆಸ್‌ ಬಂಡುಕೋರ ಅಮರೀಂದರ್‌ ಸಿಂಗ್‌ ಬಂಡಾಯದ ಹೊರತಾಗ್ಯೂ ಬಿಜೆಪಿ ಕೇವಲ ಗರಿಷ್ಠ 13 ಹಾಗೂ ಒಂದು ಕಾಲದಲ್ಲಿ ಮೆರೆದಿದ್ದ ಅಕಾಲಿದಳ ಕೇವಲ ಗರಿಷ್ಠ 32 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ.

Latest Videos
Follow Us:
Download App:
  • android
  • ios