Asianet Suvarna News Asianet Suvarna News

Assembly Elections 2022 Result ಉತ್ತರಖಂಡದಲ್ಲಿ ಬಿಜೆಪಿ ಮುನ್ನಡೆ, ಹಾಲಿ ಸಿಎಂ ಫುಷ್ಕರ್ ಸಿಂಗ್‌ಗೆ ಹಿನ್ನಡೆ!

  • ಪಂಜರಾಜ್ಯ ಚುನಾವಣೆಯಲ್ಲಿ ಬಹುತೇಕ ರಾಜ್ಯಗಳಲ್ಲಿ ಬಿಡೆಪಿ ಮುನ್ನಡೆ
  • ಉತ್ತರಖಂಡದಲ್ಲಿ ಬಿಜೆಪಿಗೆ 30 ಹಾಗೂ ಕಾಂಗ್ರೆಸ್‌ಗೆ 20 ಸ್ಥಾನಗಲ್ಲಿ ಮುನ್ನಡೆ
  • ಉತ್ತರಖಂಡದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ, ಹರೀಶ್ ರಾವತ್ ವಿಶ್ವಾಸ
Uttarakhand Assembly Elections 2022 Result  BJP ahead with 30 seats in Uttarakhand and Congress leading on 20 ckm
Author
Bengaluru, First Published Mar 10, 2022, 10:08 AM IST | Last Updated Mar 10, 2022, 10:18 AM IST

ಉತ್ತರಖಂಡ(ಮಾ.10): ಉತ್ತರಖಂಡ ವಿಧಾನಸಭಾ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸದ್ಯದ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೂ, ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದೆ. ಬಿಜೆಪಿ 30 ಸ್ಥಾನಗಲ್ಲಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಅಂತಗಳು ಕಡಿಮೆಯಾಗುತ್ತಿರುವುದು ಬಿಜೆಪಿ ಆತಂಕಕ್ಕೆ ಕಾರಣವಾಗಿದೆ. 

ಉತ್ತರಖಂಡದಲ್ಲಿ ಬಿಜೆಪಿ 30 ಸ್ಥಾನದಲ್ಲಿ ಮುನ್ನಡೆ ಸಾಧಿಸುವ ಅಧಿಕಾರದತ್ತ ದಾಪುಗಾಲಿಡುತ್ತಿದೆ. ಇತ್ತ ಕಾಂಗ್ರೆಸ್ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಉತ್ತರಖಂಡ ಹಾಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ 900 ಮತಗಳ ಅಂತರದಲ್ಲಿ ಹಿನ್ನಡೆ ಸಾಧಿಸಿದ್ದಾರೆ.

Assembly Elections 2022 Result: ಪಂಜಾಬ್‌ನಲ್ಲಿ ಆಪ್‌ ಭಾರೀ ಮುನ್ನಡೆ, ಗೋವಾದಲ್ಲಿ ಅತಂತ್ರ ಸ್ಥಿತಿ!

ಉತ್ತರಖಂಡದಲ್ಲಿ ಕಳದೆ 6 ತಿಂಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ. ಬಿಜೆಪಿ ಪದೇ ಪದೇ ಸಿಎಂ ಬದಲಿಸಿ ಕೊನೆಗೆ ಪುಷ್ಕರ್ ಸಿಂಗ್ ಧಮಿಗೆ ಅಧಿಕಾರ ನೀಡಿತ್ತು. ಇದು ಪಕ್ಷದ ಒಳಗೆ ಮುನಿಸಿಗೆ ಕಾರಣಾಗಿತ್ತು. ಆದರೆ ಉತ್ತರಖಂಡ ಬಿಜೆಪಿ ಹೈಕಮಾಂಡ್ ಆದೇಶಕ್ಕೆ ತಲೆಬಾಗಿತ್ತು. ಈ ಬಾರಿ ಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಮಿ ವಿರುದ್ಧ ಕಾರ್ಯಕರ್ತರು ಅಸಮಾಧಾನಗೊಂಡಿದ್ದರು ಅನ್ನೋ ಮಾತುಗಳು ಇದೀಗ ಫಲಿತಾಂಶದಲ್ಲಿ ನಿಜವಾಗುತ್ತಿದೆ. ಧಮಿ ಹಿನ್ನಡೆ ಮುಂದವರಿದಿದ್ದು. ಇದೀಗ ಮತ ಏಣಿಕೆ ಅಂತಿ ಹಂತಕ್ಕೆ ತಲುಪಿದೆ.

Assembly Elections 2022 Result ಆಪ್ ಅಬ್ಬರಕ್ಕೆ ಪಂಜಾಬ್‌ನಲ್ಲಿ ಸಿಧು, ಸಿಎಂ ಚನಿ, ಕ್ಯಾಪ್ಟನ್ ಅಮರಿಂದರ್‌ಗೆ ಹಿನ್ನಡೆ!

ಪಂಜಾಬ್‌ನಲ್ಲಿ ಭಾರಿ ಮುನ್ನಡೆಯಲ್ಲಿರುವ ಆಮ್ ಆದ್ಮಿ ಪಾರ್ಟಿ ಇದೀಗ ಉತ್ತರಖಂಡದಲ್ಲಿ ಖಾತೆ ತೆರೆಯುವ ಸೂಚನೆ ನೀಡಿದೆ. ಈಗಾಗಲೇ ಒಂದು ಸ್ಥಾನದಲ್ಲಿ ಆಪ್ ಮುನ್ನಡೆ ಸಾಧಿಸಿದೆ. 

ಉತರಖಂಡ ವಿಧಾನಸಭಾ ಚುನಾವಣೆ ಹಾಗೂ ಮ್ಯಾಜಿಕ್ ನಂಬರ್
ಉತ್ತರಖಂಡದಲ್ಲಿ 79 ವಿಧಾನಸಭಾ ಕ್ಷೇತ್ರಗಳಿವೆ. ಅಧಿಕಾರಕ್ಕೇರಲು 36 ಸ್ಥಾನಗಳನ್ನು ಗೆಲ್ಲಬೇಕು. ಆಡಳಿತರೂಡ ಬಿಜೆಪಿ, ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಹಾೂ ಆಮ್ ಆದ್ಮಿ ಪಾರ್ಟಿ ಉತ್ತರಖಂಡದಲ್ಲಿನ ಪ್ರಮುಖ ಪಕ್ಷಗಳಾಗಿವೆ.

 

ಉತ್ತರಾಖಂಡ್‌ನಲ್ಲಿ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು. ಶೇ.65 ರಷ್ಟುಮತದಾನವಾಗಿದೆ. ಒಟ್ಟು 632 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.ಉತ್ತರಾಖಂಡ್‌ ಸರ್ಕಾರದ ರಚನೆಗೆ 36 ಬಹುಮತ ಮ್ಯಾಜಿಕ್‌ ನಂಬರ್‌. ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಇಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿದ್ದು, ಕೆಲವು ಕಾಂಗ್ರೆಸ್‌ ಸಹ ಗೆಲುವಿನ ಅಂಚಿಗೆ ಬರಲಿದೆ. ಆಮ್‌ ಆದ್ಮಿ ಪಕ್ಷ ಸಹ ಕೆಲವು ಸ್ಥಾನವನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿವೆ. ಅತಂತ್ರ ಸ್ಥಿತಿ ಎದುರಾದರೆ ಮೈತ್ರಿ ಲೆಕ್ಕಾಚಾರದಲ್ಲಿ ವಿಪಕ್ಷಗಳು ತೊಡಗಿವೆ.

ಉತ್ತರಾಖಂಡದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಬಹುದು ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಮಂಗಳವಾರದಿಂದಲೇ ಗಹನ ಸಮಾಲೋಚನೆ ಆರಂಭಿಸಿವೆ. ಡೆಹ್ರಾಡೂನ್‌ನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ, ರಾಜ್ಯದ ಬಿಜೆಪಿ ಪ್ರಭಾರಿಯಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸ್ಥಳೀಯ ಬಿಜೆಪಿ ನಾಯಕರ ಜತೆ ಮಂಗಳವಾರ ಸಮಾಲೋಚನೆ ನಡೆಸಿದ್ದಾರೆ. ಅತಂತ್ರ ಸ್ಥಿತಿ ಸೃಷ್ಟಿಯಾದರೆ ಯಾರ ಜತೈ ಮೈತ್ರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದು, ಗೆಲ್ಲುವ ಸಾಧ್ಯತೆ ಇರುವ ಸಣ್ಣಪುಟ್ಟಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳ ಜತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
 

Latest Videos
Follow Us:
Download App:
  • android
  • ios