Asianet Suvarna News Asianet Suvarna News

ಕಾರಲ್ಲಿ ಬಂದು ಹೂಕುಂಡ ಕದ್ದ ಕಳ್ಳಿಯರು: ವೀಡಿಯೋ ವೈರಲ್

ಇಲ್ಲೊಂದು ಕಡೆ ಮಹಿಳೆಯರು ಸೆಡಾನ್ ಕಾರಿನಲ್ಲಿ (sedan car) ಬಂದು ಮನೆ ಮುಂದಿದ್ದ ಹೂ ಕುಂಡ ಎಗ್ಗರಿಸಿ ಪರಾರಿಯಾಗಿದ್ದಾರೆ. ಇವರ ಕಳ್ಳತನದ ಕೃತ್ಯಗಳು ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ವೈರಲ್ ಆಗಿದೆ. 

Punjab 2 women came by car steals flower pot in Mohali act captured in cctv goes viral akb
Author
First Published Nov 16, 2023, 12:03 PM IST

ಮೊಹಾಲಿ: ಕೆಲವರೇ ಹಾಗೆ ಎಲ್ಲಾ ಐಷಾರಾಮಿ ವಸ್ತುಗಳು ಅವರ ಬಳಿ ಇರುತ್ತವೆ, ಲಕ್ಸುರಿ ಜೀವನವನ್ನು ಎಂಜಾಯ್‌ ಮಾಡುತ್ತಾರೆ. ಆದರೆ ತುಂಬಾ ಅಗತ್ಯವೆನಿಸಿದ ವಸ್ತುಗಳು ಅವರ ಬಳಿ ಇರುವುದಿಲ್ಲ,  ಅಥವಾ ಅಂತಹವುಗಳನ್ನು ಕದಿಯುವುದಕ್ಕೆ ನೋಡುತ್ತಾರೆ. ಕೆಲವರಿಗೆ ಕಳ್ಳತನ ದೊಡ್ಡ ಚಟವಾಗಿದೆ. ಎಷ್ಟೇ ದೊಡ್ಡ ಹಂತಕ್ಕೆ ಬೆಳೆದರೂ ಬೇಕಾದಷ್ಟು ಹಣವಿದ್ದರೂ ಕಳ್ಳತನದಲ್ಲಿ ಅವರಿಗೆ ಏನೋ ಖುಷಿ. ಕೆಲ ಸೆಲೆಬ್ರಿಟಿಗಳೇ ದೊಡ್ಡ ದೊಡ್ಡ ಮಳಿಗೆಗಳಲ್ಲಿ ಸಣ್ಣಪುಟ್ಟ ವಸ್ತು ಕದ್ದು ಸಿಕ್ಕಿಬಿದ್ದ ಘಟನೆಗಳಿವೆ. ಇದೆಲ್ಲಾ ಈಗ್ಯಾಕೆ ಅಂತೀರಾ ಅದಕ್ಕೊಂದು ಕಾರಣವಿದೆ ನೋಡಿ. ಇಲ್ಲಿಬ್ಬರು ಮಹಿಳೆಯರು ಸೆಡಾನ್ ಕಾರಿನಲ್ಲಿ (sedan car) ಬಂದು ಮನೆ ಮುಂದಿದ್ದ ಹೂ ಕುಂಡ ಎಗ್ಗರಿಸಿ ಪರಾರಿಯಾಗಿದ್ದಾರೆ. ಇವರ ಕಳ್ಳತನದ ಕೃತ್ಯಗಳು ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ವೈರಲ್ ಆಗಿದೆ. 

ಇವರಿಗೆ ಕಾರು ಕೊಳ್ಳಲು ಕಾಸಿದೆ. ಆದರೆ ನೂರಿನ್ನೂರು ರೂಪಾಯಿಗೆ ಸಿಗುವ ಹೂ ಕುಂಡ ಕೊಳ್ಳಲು ಕಾಸಿಲ್ಲವೇ ಎಂದು ಜನ ಪ್ರಶ್ನೆ ಮಾಡುವಂತೆ ಮಾಡಿದೆ  ಮಹಿಳೆಯರ ಈ ಕೃತ್ಯ. ನವೆಂಬರ್ 11 ರಂದು ಪಂಜಾಬ್‌ನ (Punjab) ಮೊಹಾಲಿಯಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಡಿದೆ. 

ತಮಾಷೆ ಮಾಡಲು ಹೋಗಿ ತಗಲಾಕೊಂಡ ಟೆಕ್ಕಿ ಜೋಡಿ: ಬೆಂಗಳೂರಿಗೆ ಹೊರಟ ವಿಮಾನ ಲೇಟ್‌: ಏರ್‌ಪೋರ್ಟ್‌ನಲ್ಲಿ ಅರೆಸ್ಟ್‌

ವೀಡಿಯೋದಲ್ಲಿ ಕಾಣಿಸುವಂತೆ ಇಬ್ಬರು ಮಹಿಳೆಯರು ಕಾರಿನಲ್ಲಿ ಬಂದಿದ್ದು, ಮೊಹಾಲಿಯ ಸೆಕ್ಟರ್ 78ರ ಬಳಿ ತಮ್ಮ ಕಾರನ್ನು ನಿಲ್ಲಿಸಿದ್ದಾರೆ.  ಬಳಿಕ ಅಲ್ಲೇ ಸಮೀಪದ ಮನೆಯ ಗೇಟ್‌ನ ಪಕ್ಕದಲ್ಲಿರುವ ಫಿಲ್ಲರ್‌ ಮೇಲೆ ಇರಿಸಿದ  ಎರಡು ಮೂರು ಹೂ ಕುಂಡಗಳನ್ನು ಎತ್ತಿಕೊಂಡು ಅಲ್ಲಿಂದ ತಾವು ಬಂದಿದ್ದ ಕಾರಿನಲ್ಲಿ ಪರಾರಿಯಾಗುತ್ತಾರೆ. ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social Media) ವೈರಲ್ ಆಗಿದೆ. ವೀಡಿಯೋದಲ್ಲಿ ಮಹಿಳೆಯರ ಮುಖ ಸ್ಪಷ್ಟವಾಗಿ ಗೋಚರಿಸುತ್ತಿದೆ.  ಇದೇ ಏರಿಯಾದಲ್ಲಿ ಕಳೆದೊಂದು ವಾರದಿಂದ ಇಂತಹದ್ದೇ 10ಕ್ಕೂ ಹೆಚ್ಚು ಘಟನೆಗಳು ನಡೆದ ಬಗ್ಗೆ ವರದಿಯಾಗಿದ್ದು, ಜನ ಏಕೆ ಹೂ ಕುಂಡ ಕದಿಯುವ ಸ್ಪರ್ಧೆಗಿಳಿದಿದ್ದರೋ ತಿಳಿಯುತ್ತಿಲ್ಲ.

1961ರ ಕಳ್ಳತನ ತಡೆ ತಂತ್ರಜ್ಞಾನದ ವೀಡಿಯೋ : ಪೋಸ್ಟ್ ಆದ ಗಂಟೆಯಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ

ಈ ವರ್ಷದ ಆರಂಭದಲ್ಲೂ ಇದೇ ರೀತಿಯ ಘಟನೆ ದೆಹಲಿ ಗುರುಗ್ರಾಮ್ (Gurugram) ಗಡಿ ಭಾಗದಲ್ಲಿ ನಡೆದಿತ್ತು. ಸ್ವಾಂಕಿ ಕಿಯಾ ಕಾರ್ನಿವಲ್‌ನಲ್ಲಿ ಆಗಮಿಸಿದ ವ್ಯಕ್ತಿಯೊಬ್ಬ  ಜಿ.20 ಶೃಂಗದ ಅಂಗವಾಗಿ ಅಲಂಕಾರಕ್ಕೆ  ರಸ್ತೆ ಬದಿ  ಇರಿಸಿದ್ದ ಹೂ ಕುಂಡಗಳನ್ನು ಎತ್ತಿಕೊಂಡು ಪರಾರಿಯಾಗಿದ್ದ. ಈತನ ಕಾರು ಚಾಲಕನೂ ಈ ಕೃತ್ಯಕ್ಕೆ ಸಹಕರಿಸಿದ್ದ,  ಫೆಬ್ರವರಿಯಲ್ಲಿ ನಡೆದ ಈ ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು.

 

Follow Us:
Download App:
  • android
  • ios