ತಮಾಷೆ ಮಾಡಲು ಹೋಗಿ ತಗಲಾಕೊಂಡ ಟೆಕ್ಕಿ ಜೋಡಿ: ಬೆಂಗಳೂರಿಗೆ ಹೊರಟ ವಿಮಾನ ಲೇಟ್: ಏರ್‌ಪೋರ್ಟ್‌ನಲ್ಲಿ ಅರೆಸ್ಟ್
ತಮಾಷೆ ಮಾಡಲು ಹೋಗಿ ಟೆಕ್ಕಿ ಜೋಡಿಯೊಂದು ಕಂಬಿ ಹಿಂದೆ ಕೂರುವಂತಾದ ಘಟನೆ ಗೋವಾ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆ ವೇಳೆ ತಮ್ಮ ಬ್ಯಾಗ್‌ನಲ್ಲಿ ಬಾಂಬ್ ಇರುವುದಾಗಿ ಜೋಡಿ ಹೇಳಿದ್ದಾರೆ.
ಪಣಜಿ: ತಮಾಷೆ ಮಾಡಲು ಹೋಗಿ ಟೆಕ್ಕಿ ಜೋಡಿಯೊಂದು ಕಂಬಿ ಹಿಂದೆ ಕೂರುವಂತಾದ ಘಟನೆ ಗೋವಾ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆ ವೇಳೆ ತಮ್ಮ ಬ್ಯಾಗ್‌ನಲ್ಲಿ ಬಾಂಬ್ ಇರುವುದಾಗಿ ಜೋಡಿ ಹೇಳಿದ್ದಾರೆ. ಆದರೆ ತಪಾಸಣೆ ಮಾಡಿದಾಗ ಇದು ಸುಳ್ಳು ಎಂಬುದು ಗೊತ್ತಾಗಿದ್ದು, ಜೋಡಿ ತಮಾಷೆಗಾಗಿ ಹೀಗೆ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಜೋಡಿಯನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬಂದಿಸಿ ಕಂಬಿ ಹಿಂದೆ ಕಳಿಸಿದ್ದಾರೆ.
ಗೋವಾದ ಪಣಜಿ ಬಳಿ ಇರುವ ಡಬೊಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಜೋಡಿಯ ಈ ಕುಚೇಷ್ಟೆಯಿಂದ ಇವರು ಪ್ರಯಾಣಿಸಬೇಕಿದ್ದ ವಿಮಾನ ಸುಮಾರು 90 ನಿಮಿಷ ವಿಳಂಬವಾಗಿ ಹೊರಟಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ, ಗೋವಾಕ್ಕೂ ವಿಮಾನ: ಇಲ್ಲಿದೆ ಸಮಯಗಳ ವಿವರ!
ಮಧ್ಯಪ್ರದೇಶದ 29 ವರ್ಷದ ಅತುಲ್ ಕುಮಾರ್ ಕೆವಟ್ ಹಾಗೂ ಕೋಲ್ಕತ್ತಾ ಮೂಲದ 29 ವರ್ಷದ ತೃತೀಯ ಜನ ಬಂಧಿತರು. ಏರ್‌ಪೋರ್ಟ್‌ನಲ್ಲಿ ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಭದ್ರತಾ ತಪಾಸಣೆ ವೇಳೆ ಇವರು ಸಿಬ್ಬಂದಿಗೆ ತಮ್ಮ ಬ್ಯಾಗ್‌ನಲ್ಲಿ ಬಾಂಬ್ ಇರುವುದಾಗಿ ಸುಳ್ಳು ಹೇಳಿ ಆತಂಕ ಸೃಷ್ಟಿಸಿದ್ದರು ಎಂದು ವಾಸ್ಕೋದ ಉಪ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಶೇಖ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 11.42 ರ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಜೋಡಿ ವಿಮಾನ ಹತ್ತಲು ಸೆಕ್ಯೂರಿಟಿ ಚೆಕ್ ಬಳಿ ನಿಂತಿದ್ದರು. ಕ್ಯೂನಲ್ಲಿ ನಿಂತಿದ್ದ ವೇಳೆ ಅವರಲ್ಲೊಬ್ಬರು ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದು, ಜೊತೆಯಲ್ಲಿದ್ದ ಪ್ಯಾಸೆಂಜರೊಬ್ಬರು ಕೂಡಲೇ ಈ ವಿಚಾರವನ್ನು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಅವರ ಬ್ಯಾಗನ್ನು ಸಂಪೂರ್ಣವಾಗಿ ಪರೀಕ್ಷಿಸಿದ್ದಾರೆ. ಆದರೆ ಅಲ್ಲಿ ಶಂಕಾಸ್ಪದವಾದ ಯಾವುದೇ ವಸ್ತುಗಳು ಸಿಕ್ಕಿಲ್ಲ. ಅಲ್ಲದೇ ಅವರ ಯಾರ ಬ್ಯಾಗ್ ಬಗ್ಗೆ ಹೇಳಿದರೂ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದೇವಸ್ಥಾನಕ್ಕೆ ಪೆಟ್ರೋಲ್ ಬಾಂಬ್ ಎಸೆದ ಭಕ್ತ, ಕಾರಣ ಕೇಳಿ ದಂಗಾದ ಪೊಲೀಸ್ರು!
ಘಟನೆಗೆ ಸಂಬಂಧಿಸಿದಂತೆ ಈ ಜೋಡಿ ವಿರುದ್ಧ ಪ್ರಕರಣ ದಾಖಲಾಗಿದ್ದು ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಈ ಜೋಡಿಯನ್ನು ಬಂಧಿಸಿದ್ದಾರೆ. ಇವರು ಗೋವಾಕ್ಕೆ ಪ್ರವಾಸಕ್ಕಾಗಿ ಬಂದಿದ್ದರು. ಇದಾದ ನಂತರ ಒಂದೂವರೆ ಗಂಟೆ ವಿಳಂಬವಾಗಿ ವಿಮಾನ ಗೋವಾದಿಂದ ಬೆಂಗಳೂರಿಗೆ ಹೊರಟಿದೆ ಎಂದು ಡಿಎಸ್‌ಪಿ ಶೇಕ್ ಹೇಳಿದರು. ಈ ಜೋಡಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506ರ ಅಡಿ (ಸಾರ್ವಜನಿಕ ಕುಚೇಷ್ಟೆ) ಪ್ರಕರಣ ದಾಖಲಾಗಿದೆ ಹಾಗೂ ಪೊಲೀಸರಿಂದ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೇರಳ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು: ಮೃತರ ಸಂಖ್ಯೆ 4ಕ್ಕೆ ಏರಿಕೆ