ಹಳೆಯ ತಂತ್ರಜ್ಞಾನವಾದರೂ ವಾವ್ ಎನಿಸುವ ಕೆಲವೊಂದು ತಂತ್ರಜ್ಞಾನಗಳ ವೀಡಿಯೋಗಳು ಈ ಡಿಜಿಟಲ್ ಯುಗದಲ್ಲಿ ವೈರಲ್ ಆಗುವುದರ ಜೊತೆ ಎಲ್ಲರ ಗಮನ ಸೆಳೆಯುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಸೂಟ್‌ಕೇಸ್ ಕಳವಾಗದಂತೆ ತಡೆಯಬಹುದಾದ ವೀಡಿಯೋವೊಂದು ವೈರಲ್ ಆಗಿದೆ. 

ಹಳೆಯ ತಂತ್ರಜ್ಞಾನವಾದರೂ ವಾವ್ ಎನಿಸುವ ಕೆಲವೊಂದು ತಂತ್ರಜ್ಞಾನಗಳ ವೀಡಿಯೋಗಳು ಈ ಡಿಜಿಟಲ್ ಯುಗದಲ್ಲಿ ವೈರಲ್ ಆಗುವುದರ ಜೊತೆ ಎಲ್ಲರ ಗಮನ ಸೆಳೆಯುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಸೂಟ್‌ಕೇಸ್ ಕಳವಾಗದಂತೆ ತಡೆಯುವುದಕ್ಕಾಗಿ ಬಳಸಲಾಗಿತ್ತು ಎನ್ನಲಾದ ವೀಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರನ್ನು ಅಚ್ಚರಿಗೊಳ್ಳುವಂತೆ ಮಾಡಿದೆ. 

non aesthetic things ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವಾವ್ ಭೇಷ್ ಎಂದಿದ್ದಾರೆ. ಈ 20 ಸೆಕೆಂಡ್‌ಗಳ ವಿಡಿಯೋ ಪೋಸ್ಟ್ ಮಾಡಿರುವ ಪೇಜ್ ಇದು 1961ರಲ್ಲಿ ಬಳಕೆಯಲ್ಲಿದ್ದ ಸೂಟ್‌ಕೇಸ್ ಕಳವಾಗದಂತೆ ತಡೆಯಬಲ್ಲ ತಂತ್ರಜ್ಞಾನ ಎಂದು ಬರೆದುಕೊಂಡಿದೆ. ಆದರೆ ಇದರ ಸತ್ಯಾಸತ್ಯತ ಬಗ್ಗೆ ಮಾಹಿತಿ ಇಲ್ಲ, ವೀಡಿಯೋದಲ್ಲಿ ಸೂಟ್ ಕೇಸ್ ಕಳವಾಗದಂತೆ ತಡೆಯುವ ತಂತ್ರಜ್ಞಾನದ ತಪಾಸಣೆ ಮಾಡಲಾಗಿದೆ.

ಮ್ಯಾಕ್‌ಡೊನಾಲ್ಡ್ ಮಹಿಳಾ ಉದ್ಯೋಗಿಯ ಕೆಣಕಿ ಕಂಗಾಲಾದ ಗ್ರಾಹಕ: ಸರಿಯಾಗಿ ಬಾರಿಸಿದ ಅಕ್ಕಬಾಂಡ್

ವೀಡಿಯೋದಲ್ಲಿ ಕಾಣಿಸುವಂತೆ ಒಬ್ಬರು ಸೂಟ್‌ ಧರಿಸಿರುವವ ವ್ಯಕ್ತಿ ತಮ್ಮ ಸೂಟ್‌ಕೇಸ್‌ ನ್ನು ಸಮೀಪದಲ್ಲಿರುವವರಿಗೆ ನೀಡಿದ್ದು, ಅವರು ಹ್ಯಾಂಡಲ್‌ನಲ್ಲಿ ಆ ಸೂಟ್‌ಕೇಸನ್ನು ಹಿಡಿದ ಕೂಡಲೇ ಸೂಟ್‌ಕೇಸ್‌ ಹ್ಯಾಂಡಲ್ ಮಧ್ಯೆ ಅವರ ಕೈ ಸಿಲುಕಿಕೊಳ್ಳುತ್ತದೆ. ಜೊತೆಗೆ ಸೂಟ್ಕೇಸ್‌ನ ಕೆಳಭಾಗದಲ್ಲಿ ಹಾಗೂ ಅಕ್ಕ ಪಕ್ಕ ಸ್ಟ್ಯಾಂಡ್‌ನಂತೆ ಕೋಲೊಂದು ತೆರೆದುಕೊಂಡು ಸೂಟ್‌ಕೇಸ್‌ನಲ್ಲಿ ಕೈ ಇರುವಂತೆಯೇ ಈ ಸೂಟ್‌ಕೇಸನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ. ಅದು ನೋಡುವುದಕ್ಕೆ ಸೂಟ್‌ಕೇಸ್‌ನ ಕೆಳಭಾಗಕ್ಕೆ ಕೋಲೊಂದನ್ನು ನೀಡಿ ಎತ್ತರಿಸಿದಂತೆ ಕಾಣುವುದು. ಸೂಟ್‌ಕೇಸ್ ಹಿಡಿದಿದ್ದ ವ್ಯಕ್ತಿ ಅಷ್ಟು ಎತ್ತರವಿದ್ದರೂ ಅವರು ತಮ್ಮ ಕೈಯ ಸುರಕ್ಷತೆಗಾಗಿ ಕಾಲನ್ನು ಎತ್ತುವಂತೆ ಮಾಡುತ್ತದೆ ಈ ಸೂಟ್‌ಕೇಸ್ ಕಳವು ತಪ್ಪಿಸುವ ತಂತ್ರಜ್ಞಾನ.

ಎರಡೆರಡು ಗರ್ಭಕೋಶ ಇರೋ ಮಹಿಳೆಗೆ ಎರಡರಲ್ಲೂ ಕುಡಿಯೊಡಿಯುತ್ತಿದೆ ಕಂದಮ್ಮ!

ನಂತರ ಅವರ ಕೈಯನ್ನು ಈ ಸೂಟ್‌ಕೇಸ್‌ನ ಹ್ಯಾಂಡಲ್‌ನಿಂದ ಬಿಡಿಸಬೇಕಾದರೆ ಈ ಸೂಟ್‌ಕೇಸ್‌ನ ಲಾಕ್‌ ಒಪನ್ ಮಾಡಿದ ನಂತರವಷ್ಟೇ ಅವರ ಕೈಯನ್ನು ತೆಗೆಯಲು ಸಾಧ್ಯ. ಅಲ್ಲದೇ ಈ ವೇಳೆ ಕೈ ಜ್ಯಾಮ್ ಆಗಿ ಕೈಗೆ ಸ್ವಲ್ಪ ಮಟ್ಟಿಗೆ ನೋವು ಕೂಡ ಆಗುತ್ತದೆ. ಈ ವೀಡಿಯೋದಲ್ಲಿ ಈ ತಂತ್ರಜ್ಞಾನದ ಬಳಕೆಯನ್ನು ಕಾಣಬಹುದಾಗಿದೆ. 

ಈ ತಂತ್ರಜ್ಞಾನದ ಬಗ್ಗೆ ಲಿಂಡಾ ಎಂಬುವವರು ಕಾಮೆಂಟ್‌ನಲ್ಲಿ ವಿವರಿಸಿದ್ದು, ಈ ಕಳ್ಳತನ ವಿರೋಧಿ ತಂತ್ರಜ್ಞಾನವನ್ನು 1961ರಲ್ಲಿ ಕಂಡು ಹಿಡಿಯಲಾಯ್ತು. ಈ ತಂತ್ರಜ್ಞಾನವೂ 3 ಟೆಲಿಸ್ಕೋಪಿಕ್ ಪೋಲ್(ಕಂಬ) ಗಳನ್ನು ಹೊಂದಿದ್ದು, ಈ ಸೂಟ್‌ಕೇಸನ್ನು ಸಂಬಂಧ ಇಲ್ಲದೇ ಇದ್ದವರು ಮುಟ್ಟಲು ಹೋದಾಗ ಅದರ ಸುತ್ತಲೂ ಇರುವ ಈ ಮೂರು ಪೋಲ್‌ಗಳು ಹೊರಬರುತ್ತವೆ. ಹೀಗಾಗಿ ಕೋಲುಗಳನ್ನು ಹೊಂದಿರುವ ಈ ಸೂಟ್‌ಕೇಸ್‌ನ್ನು ಎತ್ತಿಕೊಂಡು ಓಡುವುದು ಕಳ್ಳನಿಗೂ ಅಷ್ಟು ಸುಲಭವಲ್ಲ, ಅಲ್ಲದೇ ಈ ತಂತ್ರಜ್ಞಾನ ಕಳ್ಳನ ಕೈಗೂ ಹಾನಿ ಮಾಡಬಹುದು ಎಂದು ವಿವರಿಸಿದ್ದಾರೆ. 

ಆ ಕಟ್ಟಡದಿಂದ ಈ ಕಟ್ಟಡಕ್ಕೆ ಹಾಸ್ಟೆಲ್ ಹುಡುಗರ ರಾಕೆಟ್ ವಾರ್: ಆಘಾತಕಾರಿ ವೀಡಿಯೋ ವೈರಲ್

ಈ ವೀಡಿಯೋವನ್ನು ಇಂದು ಮುಂಜಾನೆ ಶೇರ್ ಮಾಡಿದ್ದು, 9 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ. ಆರಂಭದ ಹಾಗೂ 90ರ ದಶಕದ ಅಂತ್ಯದ ಕೆಲ ಶೋಧನೆಗಳು ವಿಚಿತ್ರವಾಗಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಈ ತಂತ್ರಜ್ಞಾನ ನಂತರವೂ ಕಳ್ಳತನ ನಡೆದಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಇದೊಂದು ಒಳ್ಳೆಯ ಕಳ್ಳತನ ತಡೆ ವಿಧಾನವಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಅಪ್‌ಲೋಡ್ ಆದ 4 ಗಂಟೆಯಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಜನ ಈ ವೀಡಿಯೋ ವೀಕ್ಷಿಸಿದ್ದಾರೆ. 

Scroll to load tweet…