* ಪುಣೆಯಲ್ಲಿ 7 ಮಂದಿಗೆ ಬಿ.ಎ.4, ಬಿ.ಎ.5 ಸೋಂಕು* ಇವರಲ್ಲಿ ಮೂವರು ಕರ್ನಾಟಕದಿಂದ ಮರಳಿದ್ದರು* ಕರ್ನಾಟಕದಿಂದ ಮರಳಿದವರಿಗೆ ಬಿಎ.4, ಬಿಎ.5 ಕೊರೋನಾ
ಮುಂಬೈ(ಮೇ.29): ಮಹಾರಾಷ್ಟ್ರದಲ್ಲಿ ಮೊಟ್ಟಮೊದಲ ಬಾರಿಗೆ ಒಮಿಕ್ರೋನ್‌ನ ಬಿ.ಎ.4 ಉಪತಳಿಯ 4 ಪ್ರಕರಣಗಳು ಹಾಗೂ ಬಿ.ಎ.5 ಉಪತಳಿಯ 3 ಪ್ರಕರಣಗಳು ಪುಣೆಯಲ್ಲಿ ವರದಿಯಾಗಿವೆ. ಇವರಲ್ಲಿ ಮೂವರು ಕರ್ನಾಟಕದ ಪ್ರವಾಸ ಇತಿಹಾಸ ಹೊಂದಿದ್ದರು ಎಂಬುದು ಗಮನಾರ್ಹ.
‘ಸೋಂಕಿತರಲ್ಲಿ 2 ದಕ್ಷಿಣ ಆಫ್ರಿಕಾ ಹಾಗೂ ಬೆಲ್ಜಿಯಂಗೆ ಪ್ರವಾಸ ಕೈಗೊಂಡಿದ್ದರು. ಮೂವರು ಕರ್ನಾಟಕ ಹಾಗೂ ಕೇರಳದಿಂದ ಮರಳಿದ್ದರು. ಉಳಿದ 2 ಸೋಂಕಿತರು ಯಾವುದೇ ಪ್ರವಾಸದ ಇತಿಹಾಸ ಹೊಂದಿಲ್ಲ’ ಎಂದು ಎಂದು ರಾಜ್ಯ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ.
ಎಲ್ಲ ಸೋಂಕಿತರಲ್ಲೂ ಸೌಮ್ಯ ರೋಗಲಕ್ಷಣಗಳು ಕಂಡು ಬಂದಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
Covid cases ಮಹಾರಾಷ್ಟ್ರದಲ್ಲಿ ಮೊದಲ BA.4 ಹಾಗೂ BA.5 ಉಪತಳಿ ಪತ್ತೆ, ಹೆಚ್ಚಾಗುತ್ತಿದೆ ಕೋವಿಡ್!
ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ಬಿ.ಎ.4, ಬಿ.ಎ.5 ಉಪತಳಿಯ ಸೋಂಕು ತಗುಲಿದೆ ಎಂದು ತಿಳಿದು ಬಂದಿದ್ದು, ಎಲ್ಲ 7 ಸೋಂಕಿತರು ಪುಣೆಯವರಾಗಿದ್ದಾರೆ. ಸೋಂಕಿತರಲ್ಲಿ 4 ಪುರುಷರು 3 ಮಹಿಳೆಯರಿದ್ದು, ಇವರಲ್ಲಿ 4 ಮಂದಿ 50 ವರ್ಷ ಮೀರಿದವರಾಗಿದ್ದು, ಇಬ್ಬರು 20-40 ವರ್ಷದವರಾಗಿದ್ದಾರೆ. 9 ವರ್ಷದ ಮಗುವಿನಲ್ಲೂ ಸೋಂಕು ಪತ್ತೆಯಾಗಿದೆ. ಮಗುವನ್ನು ಹೊರತು ಪಡಿಸಿ ಎಲ್ಲ 6 ಸೋಂಕಿತರು ಕೋವಿಡ್‌ನ ಎರಡೂ ಲಸಿಕೆ ಮಾತ್ರವಲ್ಲದೇ ಬೂಸ್ಟರ್ ಡೋಸನ್ನು ಪಡೆದಿದ್ದಾರೆ. ಎಲ್ಲ ರೋಗಿಗಳಲ್ಲೂ ಸೌಮ್ಯ ರೋಗಲಕ್ಷಣ ಕಂಡುಬಂದಿದ್ದು, ಮನೆಯಲ್ಲೇ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಮಿಕ್ರೋನ್‌ನ ಉಪತಳಿ ಬಿ.ಎ.4, ಬಿ.ಎ.5 ಸೋಂಕು ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊಟ್ಟಮೊದಲ ಬಾರಿ ಪತ್ತೆಯಾಗಿತ್ತು.
196 ಮಂದಿಗೆ ಸೋಂಕು: 10ನೇ ದಿನವೂ ಸಾವಿಲ್ಲ
ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ಮತ್ತೆ 200 ಗಡಿಗೆ ಹೆಚ್ಚಳವಾಗಿದ್ದು, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.1 ಆಸುಪಾಸಿಗೆ ತಲುಪಿದೆ. ಮೇ 18 ರಿಂದ ಸತತ ಹತ್ತನೇ ದಿನವೂ ಸೋಂಕಿತರ ಸಾವು ವರದಿಯಾಗಿಲ್ಲ. ಶನಿವಾರ 196 ಮಂದಿಗೆ ಸೋಂಕು ತಗುಲಿದ್ದು, 125 ಮಂದಿ ಗುಣಮುಖರಾಗಿದ್ದಾರೆ. ಸಾವಿನ ವರದಿಯಾಗಿಲ್ಲ. ಸದ್ಯ 1898 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಶನಿವಾರ 21000 ಸೋಂಕು ಪರೀಕ್ಷೆ ನಡೆದಿದ್ದು, ಪಾಸಿಟಿವಿಟಿ ದರ ಶೇ.0.93 ದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಒಂದು ಸಾವಿರ ಏರಿಕೆಯಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 25 ಹೆಚ್ಚಳವಾಗಿವೆ. (ಶುಕ್ರವಾರ 171 ಪ್ರಕರಣಗಳು, ಸಾವು ಶೂನ್ಯ).
ಹೃದಯ, ನ್ಯುಮೋನಿಯಾ, ಅಸ್ತಮಾಕ್ಕೆ ಶೇ.42 ಸಾವು: ಶೇ.9ರಷ್ಟು ಸಾವಿಗೆ ಕೋವಿಡ್ ಕಾರಣ
ಬೆಂಗಳೂರು 175, ಬೆಂಗಳೂರು ಗ್ರಾಮಾಂತರ 5, ತುಮಕೂರು 4, ಧಾರವಾಡ 3, ಬೆಳಗಾವಿ, ಚಿತ್ರದುರ್ಗ ತಲಾ ಎರಡು, ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಮೈಸೂರು, ವಿಜಯಪುರದಲ್ಲಿ ತಲಾ ಒಬ್ಬರಿಗೆ ಒಬ್ಬರಿಗೆ ಸೋಂಕು ತಗುಲಿದೆ. 19 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.
ಬುಧವಾರ 200 ಗಡಿದಾಟಿದ್ದ ಹೊಸ ಪ್ರಕರಣಗಳು ಗುರುವಾರ 150ಕ್ಕೆ ತಗ್ಗಿದ್ದವು. ಶನಿವಾರ ಮತ್ತೆ 200 ಗಡಿಗೆ ತಲುಪಿವೆ. ಇತ್ತ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ತುಸು ಹೆಚ್ಚಳವಾಗಿದೆ. ರಾಜ್ಯದಲ್ಲಿ ಈವರೆಗೆ 39.49 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.09 ಲಕ್ಷ ಮಂದಿ ಗುಣಮುಖರಾಗಿದ್ದು, 40,064 ಮಂದಿ ಸಾವಿಗೀಡಾಗಿದ್ದಾರೆ.
