ಹೃದಯ, ನ್ಯುಮೋನಿಯಾ, ಅಸ್ತಮಾಕ್ಕೆ ಶೇ.42 ಸಾವು: ಶೇ.9ರಷ್ಟು ಸಾವಿಗೆ ಕೋವಿಡ್ ಕಾರಣ
2020ರಲ್ಲಿ ದೇಶದಲ್ಲಿ ವೈದ್ಯರಿಂದ ಪ್ರಮಾಣಿಕರಿಸಲ್ಪಟ್ಟ81.15 ಲಕ್ಷ ಸಾವಿನಲ್ಲಿ ಶೇ.42ರಷ್ಟುಮಂದಿ ಹೃದಯ ಸಂಬಂಧಿ ಕಾಯಿಲೆಗಳು, ನ್ಯುಮೋನಿಯಾ, ಅಸ್ತಮಾದಿಂದ ಮೃತಪಟ್ಟಿದ್ದಾರೆ ಎಂದು ವರದಿಯೊಂದು ಹೇಳಿದೆ.
ನವದೆಹಲಿ (ಮೇ.27): 2020ರಲ್ಲಿ ದೇಶದಲ್ಲಿ ವೈದ್ಯರಿಂದ ಪ್ರಮಾಣಿಕರಿಸಲ್ಪಟ್ಟ81.15 ಲಕ್ಷ ಸಾವಿನಲ್ಲಿ ಶೇ.42ರಷ್ಟುಮಂದಿ ಹೃದಯ ಸಂಬಂಧಿ ಕಾಯಿಲೆಗಳು, ನ್ಯುಮೋನಿಯಾ, ಅಸ್ತಮಾದಿಂದ ಮೃತಪಟ್ಟಿದ್ದಾರೆ ಎಂದು ವರದಿಯೊಂದು ಹೇಳಿದೆ. ಭಾರತದ ರೆಜಿಸ್ಟ್ರಾರ್ ಜನರಲ್ ಹಾಗೂ ಗಣತಿಯ ಕಮಿಷನರ್ ಸಿದ್ಧಪಡಿಸಿದ ‘ಸಾವಿಗೆ ಕಾರಣವಾದ ವೈದ್ಯಕೀಯ ಪ್ರಮಾಣೀಕರಣದ ವರದಿ 2020’ ಕೋವಿಡ್ ಸೋಂಕು ಶೇ.9ರಷ್ಟು ಜನರ ಸಾವಿಗೆ ಕಾರಣವಾಗಿದ್ದು, 2020ರಲ್ಲಿ ಕೋವಿಡ್‌ನಿಂದಾಗಿ 1,60,618 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ಅದೇ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ಶೇ.32.1ರಷ್ಟು, ಉಸಿರಾಟ ಸಂಬಂಧಿ ಕಾಯಿಲೆಗಳಿಂದಾಗಿ ಶೇ.10 ರಷ್ಟುಜನರು ಹಾಗೂ ಕ್ಷಯ, ಇನ್ನಿತರ ಸಾಂಕ್ರಾಮಿಕ ರೋಗಗಳಿಂದಾಗಿ ಶೇ.7.1ರಷ್ಟು, ಅಪೌಷ್ಠಿಕತೆ ಹಾಗೂ ಚಯಾಪಚಯ ಪ್ರಕ್ರಿಯೆಗೆ ಸಂಬಂಧಿಸಿದ ರೋಗಗಳಿಂದಾಗಿ ಶೇ.5.8ರಷ್ಟು, ತೀವ್ರ ಗಾಯ, ವಿಷಾಹಾರ ಸೇವನೆಯಿಂದಾಗಿ ಶೇ.5.6ರಷ್ಟುಹಾಗೂ ಕ್ಯಾನ್ಸರ್‌ನಿಂದಾಗಿ ಶೇ.4.7 ರಷ್ಟುಸಾವುಗಳು ಸಂಭವಿಸಿದೆ ಎಂದು ವರದಿ ಹೇಳಿದೆ.
Covid Crisis: ಬಿಎ.4, ಬಿಎ.5 ಉಪತಳಿಯ ಮೊದಲ ದೇಶಿ ಕೇಸು ಪತ್ತೆ!
ಮೃತಪಟ್ಟವರಲ್ಲಿ ಶೇ.64 ರಷ್ಟು ಪುರುಷರು ಹಾಗೂ ಶೇ.36ರಷ್ಟುಮಹಿಳೆಯರಿದ್ದಾರೆ. 70 ವರ್ಷ ಮೇಲ್ಪಟ್ಟವರಲ್ಲಿ ಅತಿ ಹೆಚ್ಚು ಸಾವು ವರದಿಯಾಗಿದ್ದು 5.17 ಲಕ್ಷ ಸಾವು ದಾಖಲಾಗಿವೆ. 45 ವರ್ಷ ಮೇಲ್ಪಟ್ಟವರಲ್ಲಿ ಹೃದಯ ಸಂಬಂಧಿ ಕಾಯಿಲೆ ಅತಿ ಹೆಚ್ಚು ಸಾವಿಗೆ ಕಾರಣವಾಗಿದೆ. ಶೇ.5.7 ರಷ್ಟುಶಿಶು ಮರಣವು ಈ ಅವಧಿಯಲ್ಲಿ ದಾಖಲಾಗಿದೆ ಎಂದು ವರದಿ ತಿಳಿಸಿದೆ.
Omicron BA.4 ಮತ್ತು BA.5, ಭಾರತದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಬಹುದೇ?: ಭಾರತಕ್ಕೆ ಮತ್ತೆ ಕೊರೋನಾ ಕಾಟದ ಭೀತಿ ಎದುರಾಗಿದೆ. ಇತ್ತೀಚೆಗೆಷ್ಟೇ ಕೋವಿಡ್ ಅಬ್ಬರದ ಆತಂಕ ಹೆಚ್ಚಾಗಿತ್ತು. ಆದರೆ ಇದೀಗ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಇದರ ಬೆನ್ನಲ್ಲೇ ಓಮಿಕ್ರಾನ್ BA.4 ಉಪತಳಿ ಪತ್ತೆಯಾಗಿದೆ. ಇದು ಭಾರತದ ಎರಡನೇ ಪ್ರಕರಣವಾಗಿದೆ. ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ನವಲೂರಿನಲ್ಲಿನ ಓಮಿಕ್ರಾನ್ BA.4 ವೈರಸ್ ಪತ್ತೆಯಾಗಿದೆ. ಇದು ಓಮಿಕ್ರಾನ್ ಉಪತಳಿಯಾಗಿದೆ. ಚೆನ್ನೈ ನಗರದಲ್ಲಿ ಕೇವಲ 30 ಕಿಲೋಮೀಟರ್ ದೂರದಲ್ಲಿ ಎರಡನೇ ಪ್ರಕರಣ ಪತ್ತೆಯಾಗಿರುವುದು ಇದೀಗ ನಗರದ ಆತಂಕ ಹೆಚ್ಚಿಸಿದೆ.
ಕೋವಿಡ್ ಆರಂಭದಿಂದ ಪ್ರತಿ 30 ಗಂಟೆಗೊಮ್ಮೆ ಹೊಸ ಬಿಲಿಯನೇರ್ ಸೃಷ್ಟಿ: ಆಕ್ಸ್‌ಫ್ಯಾಮ್ ವರದಿ
Omicronನ BA.4 ಮತ್ತು BA.5 ಉಪ-ವ್ಯತ್ಯಯಗಳ ಕಾರಣದಿಂದಾಗಿ ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಗಮನಾರ್ಹವಾದ ಒಟ್ಟಾರೆ ಹೆಚ್ಚಳವನ್ನು ಯುರೋಪಿಯನ್ ದೇಶಗಳು ನಿರೀಕ್ಷಿಸುತ್ತಿದೆ. ಈ ಹೊಸ ತಳಿಗಳು ಯಾವುವು ಮತ್ತು ಅವು ಭಾರತದಲ್ಲಿ ಇನ್ನೊಂದು ಅಲೆಗೆ ಕಾರಣವಾಗಬಹುದೇ ಎಂಬ ಆತಂಕ ಶುರುವಾಗಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಒಮಿಕ್ರಾನ್ ನ BA.4 ಮತ್ತು BA.5 ಉಪ-ವ್ಯತ್ಯಯಗಳನ್ನು 'ಕಳವಳಿ ಉಂಟು ಮಾಡುವ ರೂಪಾಂತರಗಳು' ಎಂದು ಘೋಷಿಸಿದೆ. ಓಮಿಕ್ರಾನ್‌ನ ಉಪ-ವ್ಯತ್ಯಯವಾಗಿರುವುದರಿಂದ, ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಎರಡನ್ನೂ 'ಕಾಳಜಿಯ ರೂಪಾಂತರಗಳು' ಎಂದು ಪರಿಗಣಿಸಿದೆ.