'ದಿ ಕಾಶ್ಮೀರ್ ಫೈಲ್ಸ್ ಏಕ್ ಅರ್ಧಸತ್ಯ' ಕಾರ್ಯಕ್ರಮಕ್ಕೆ ಕಾಶ್ಮೀರಿ ಪಂಡಿತರಿಗೆ ತಡೆ
- ಯುವಕ ಕ್ರಾಂತಿ ದಳವು ಆಯೋಜಿಸಿದ್ದ ಕಾರ್ಯಕ್ರಮ
- ಪುಣೆಯ ಕೊತ್ರುದ್ ಪ್ರದೇಶದ ಗಾಂಧಿ ಭವನದಲ್ಲಿ ಕಾರ್ಯಕ್ರಮ
- ಇಂಡಿಯಾ 4 ಕಾಶ್ಮೀರ್ ರಾಷ್ಟ್ರೀಯ ಸಂಯೋಜಕನಿಗೆ ಕಾರ್ಯಕ್ರಮಕ್ಕೆ ತಡೆ
ಪುಣೆ(ಏ.8): ದಿ ಕಾಶ್ಮೀರಿ ಫೈಲ್ಸ್ ಕುರಿತಾದ ಏಕ್ ಅರ್ಧಸತ್ಯ ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬಂದಿದ್ದ ಕಾಶ್ಮೀರಿ ಪಂಡಿತ್ ಸಂಘಟನೆಯೊಂದರ ನಾಯಕನನ್ನು ಪೊಲೀಸರು ಗುರುವಾರ ತಡೆದ ಘಟನೆ ನಡೆದಿದೆ. ಪುಣೆಯ ಕೊತ್ರುದ್ ಪ್ರದೇಶದ ಗಾಂಧಿ ಭವನದಲ್ಲಿ ಯುವಕ ಕ್ರಾಂತಿ ದಳವು "ದಿ ಕಾಶ್ಮೀರ್ ಫೈಲ್ಸ್ - ಏಕ್ ಅರ್ಧಸತ್ಯ" ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾಶ್ಮೀರ್ ಔರ್ ಕಾಶ್ಮೀರಿ ಪಂಡಿತ್ ಎಂಬ ಪುಸ್ತಕದ ಲೇಖಕ ಅಶೋಕ್ ಕುಮಾರ್ ಪಾಂಡೆ ಈ ಕಾರ್ಯಕ್ರಮದಲ್ಲಿ ಮಾತನಾಡಲಿದ್ದರು. ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬಂದಿದ್ದ ಕಾಶ್ಮೀರಿ ಪಂಡಿತ್ ಸಂಘಟನೆಯೊಂದರ ನಾಯಕನನ್ನು ಪೊಲೀಸರು ತಡೆದಿದ್ದಾರೆ.
'ಇಂಡಿಯಾ 4 ಕಾಶ್ಮೀರ್'ನ ರಾಷ್ಟ್ರೀಯ ಸಂಯೋಜಕ ರೋಹಿತ್ ಕಚ್ರೂಗೆ(Rohit Kachroo) ಪೊಲೀಸರು ನೋಟಿಸ್ ಜಾರಿಗೊಳಿಸಿದ್ದು, ಕಾರ್ಯಕ್ರಮಕ್ಕೆ ಹಾಜರಾಗದಂತೆ ನಿರ್ಬಂಧಿಸಿದ್ದಾರೆ. 'ನಾವು ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಕೆಲವು ಪ್ರಶ್ನೆಗಳನ್ನು ಶಾಂತಿಯುತವಾಗಿ ಕೇಳಲು ಬಯಸಿದ್ದೇವೆ. ಆದರೆ ಸಂಘಟಕರು ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲೇಖಿಸಿ ಪೊಲೀಸ್ ಠಾಣೆಗೆ ಹೋದರು. ಪೊಲೀಸರು ಕಾರ್ಯಕ್ರಮಕ್ಕೆ ಹಾಜರಾಗದಂತೆ ನಮಗೆ ಹೇಳಿದರು. ನಾವು ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿದೆವು. ಶಾಂತಿಯುತ ಪ್ರತಿಭಟನೆಯನ್ನು ಮಾಡುವುದಿಲ್ಲಲ ಮತ್ತು ಪ್ರಶ್ನೋತ್ತರ ಅವಧಿಯಲ್ಲಿ ಮಾತ್ರ ಪ್ರಶ್ನೆಗಳನ್ನು ಕೇಳುತ್ತೇವೆ ಎಂದಿದ್ದೆವು ಎಂದು ಕಚ್ರೂ ಹೇಳಿದರು.
ಇನ್ಮುಂದೆ ಇದು ಸಿನಿಮಾವಲ್ಲ, ಒಂದು ಚಳುವಳಿ; ಕಾಶ್ಮೀರ್ ಫೈಲ್ಸ್ ಬಗ್ಗೆ ಕರಣ್ ಜೋಹರ್ ಮಾತು
ಅವರ ಇಂಡಿಯಾ 4 ಕಾಶ್ಮೀರ್ ಸಂಘಟನೆಯು ಈ ಕಾರ್ಯಕ್ರಮವನ್ನು ರದ್ದು ಪಡಿಸುವಂತೆ ಪೊಲೀಸರಿಗೆ ಅರ್ಜಿಯನ್ನು ಸಹ ನೀಡಿತ್ತು. ಕಾರ್ಯಕ್ರಮವು ಸುಳ್ಳನ್ನು ಉತ್ತೇಜಿಸುತ್ತದೆ ಎಂದು ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ವಿನಂತಿಸಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ನನ್ನನ್ನು ಬೆಳಗ್ಗೆ 11 ಗಂಟೆಯ ಸುಮಾರಿಗೆ ಬಂಧಿಸಿ ಸಂಜೆಯವರೆಗೆ ಇರಿಸಲಾಯಿತು ಮತ್ತು ಬಿಡುಗಡೆಯ ಸಮಯದಲ್ಲಿ ನಾವು ಕಾರ್ಯಕ್ರಮಕ್ಕೆ ಹೋದರೆ ನಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟಿಸ್ ನೀಡಲಾಯಿತು ಎಂದು ಅವರು ಹೇಳಿದರು. ಕಾಶ್ಮೀರಿ ಹಿಂದೂ ಸಮುದಾಯದ ಸದಸ್ಯರು ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಕಾರ್ಯಕ್ರಮಕ್ಕೆ ಹಾಜರಾಗದಂತೆ ಕೇಳಿಕೊಳ್ಳಲಾಗಿದೆ ಎಂದು ಕೊತ್ರುಡ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಮಹೇಂದ್ರ ಜಗತಾಪ್ (Mahendra Jagtap) ಹೇಳಿದ್ದಾರೆ.
Kashmir Pandit Exodus ಪಂಡಿತ್ ಸಮುದಾಯ ಕಾಶ್ಮೀರಕ್ಕೆ ಹಿಂದಿರುಗುವ ದಿನ ದೂರವಿಲ್ಲ, ಮೋಹನ್ ಭಾಗವತ್!
ಅವರು ಸಂಘಟಕರೊಂದಿಗೆ ಸಭೆ ನಡೆಸಬಹುದು ಮತ್ತು ಅವರ ಅನುಮಾನಗಳನ್ನು ನಿವಾರಿಸಬಹುದು ಎಂದು ನಾವು ಪ್ರಸ್ತಾಪಿಸಿದ್ದೇವೆ. ಕಚ್ರೂ ಮತ್ತು ಇತರರು ಆರಂಭದಲ್ಲಿ ಸಂಘಟಕರನ್ನು ಭೇಟಿ ಮಾಡಲು ಒಪ್ಪಿಕೊಂಡರು, ಆದರೆ ನಂತರ ಅವರನ್ನು ಭೇಟಿ ಮಾಡಲು ನಿರಾಕರಿಸಿದರು ಎಂದು ಅವರು ಹೇಳಿದ್ದಾರೆ. ಅವರು ಅಲ್ಲಿಗೆ ಹೋಗಿ ಯಾವುದೇ ಪ್ರಶ್ನೆಯನ್ನು ಕೇಳಿದರೆ, ಅಭಿಪ್ರಾಯಗಳ ಬಗ್ಗೆ ವಿವಾದ ಉಂಟಾಗಬಹುದು ಎಂದು ನಾವು ವಿವರಿಸಲು ಪ್ರಯತ್ನಿಸಿದ್ದೇವೆ. ಅವರ ಸುರಕ್ಷತೆಯ ಜವಾಬ್ದಾರಿಯೂ ಪೊಲೀಸರ ಮೇಲಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದರು.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ ಫೈಲ್ಸ್, 1990 ರ ದಶಕದಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಉಗ್ರಗಾಮಿಗಳು ಕಾಶ್ಮೀರಿ ಪಂಡಿತ ಸಮುದಾಯವನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ ನಡೆಸಿದ ನರಮೇಧದ ನೈಜ ಕತೆಯನ್ನು ಆಧರಿಸಿದ ಸಿನಿಮಾವಾಗಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ ಫೈಲ್ಸ್, 1990 ರ ದಶಕದಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಉಗ್ರಗಾಮಿಗಳು ಕಾಶ್ಮೀರಿ ಪಂಡಿತ ಸಮುದಾಯವನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ ನಡೆಸಿದ ನರಮೇಧದ ನೈಜ ಕತೆಯನ್ನು ಆಧರಿಸಿದ ಸಿನಿಮಾವಾಗಿದೆ. ಕಾಶ್ಮೀರಿ ಪಂಡಿತರ ನರಮೇಧದ (Kashmiri Pandit genocide)ನೈಜ ಕಥೆಗಳನ್ನು ಆಧರಿಸಿದ ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಕಾಶ್ಮೀರದಲ್ಲಿ ಮುಗ್ಧ ಹಿಂದೂಗಳ ಮೇಲೆ ನಡೆದ ಭೀಕರ ಭಯೋತ್ಪಾದನೆಯನ್ನು ರಾಷ್ಟ್ರವು ನೆನಪಿಸಿಕೊಳ್ಳುತ್ತಿರುವಾಗ, ಚಿತ್ರದ ಬಗ್ಗೆ ಅಸಮಾಧಾನಗೊಂಡ ಕೆಲವರು ಕಾಣ ಸಿಗುತ್ತಿದ್ದಾರೆ. 1990 ರ ದಶಕದಲ್ಲಿ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯೆಯ ನೇತೃತ್ವ ವಹಿಸಿದ ಕಾಶ್ಮೀರಿ ಮುಸ್ಲಿಮರ ನಿಜವಾದ ಮುಖವನ್ನು ತೋರಿಸಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕರನ್ನು ನಿಂದಿಸುವ ಮತ್ತು ಬೆದರಿಕೆ ಹಾಕುವ ಕೆಲಸ ನಡೆಯುತ್ತಿದೆ.