Asianet Suvarna News Asianet Suvarna News

Covid Vaccination: ಪುದುಚೇರಿಯಲ್ಲಿ ಲಸಿಕೆ ಕಡ್ಡಾಯ, ಪಡೆಯದಿದ್ರೆ ಕಾನೂನು ಕ್ರಮ!

* ಲಸಿಕೆ ಪಡೆಯದಿದ್ರೆ ಕಾನೂನು ಕ್ರಮ  ಇಂಥ ನಿಯಮ ಜಾರಿ ಮಾಡಿದ ಮೊದಲ ರಾಜ್ಯ

* ಪುದುಚೇರಿಯಲ್ಲಿ ಲಸಿಕೆ ಕಡ್ಡಾಯ, ಪಡೆಯದಿದ್ರೆ ಕಾನೂನು ಕ್ರಮ

* ದೇಶದ ಶೇ.50 ಜನಕ್ಕೆ ಲಸಿಕೆ ಪೂರ್ಣ ಈವರೆಗೆ ದೇಶದ 48 ಕೋಟಿ ಜನಕ್ಕೆ ಎರಡೂ ಡೋಸ್ ಲಸಿಕೆ

 

Puducherry announces that Covid 19 vaccination compulsory in the Union Territory pod
Author
Bangalore, First Published Dec 6, 2021, 10:46 AM IST

ಪುದುಚೇರಿ(ಡಿ.06): ಎಲ್ಲರಿಗೂ ಕೊರೋನಾ ಲಸಿಕೆ (Covid vaccine) ಹಾಕುವ ಗುರಿ ಹೊಂದಿರುವ ಪುದುಚೇರಿ ಸರ್ಕಾರ, ಕೋವಿಡ್ ಲಸಿಕೆಯನ್ನು (Puducherry Govt) ಕಡ್ಡಾಯಗೊಳಿಸಿದೆ. ಯಾರಾದರೂ ಲಸಿಕೆ ಪಡೆಯಲು ನಿರಾಕರಿಸಿದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಚಿವ ಜಿ. ಶ್ರೀರಾಮುಲು ಶನಿವಾರ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ. ಕೋವಿಡ್ ಲಸಿಕೆ ಕಡ್ಡಾಯ ಮಾಡಲು 1973ರ ಪುದುಚೇರಿ ಸಾರ್ವಜನಿಕ ಆರೋಗ್ಯ ಕಾಯ್ದೆಯ ಅಂಶಗಳನ್ನು ಅವರು ಬಳಸಿದ್ದಾರೆ.

ವಿಪತ್ತಿನ ಸಂದರ್ಭದಲ್ಲಿ ಅಗತ್ಯ ಬಿದ್ದರೆ ಕಠಿಣ ಕ್ರಮಗಳನ್ನು ತೆಗೆದು ಕೊಳ್ಳಬಹುದು ಎಂದು ಸಾರ್ವಜನಿಕ ಆರೋಗ್ಯ ಕಾಯ್ದೆ ಹೇಳುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುದುಚೇರಿಯಲ್ಲಿ 10 ಲಕ್ಷ ಜನರು ಕೋವಿಡ್ ಲಸಿಕೆ ಪಡೆಯಲು ಅರ್ಹರಾಗಿದ್ದು, ಇದುವರೆಗೂ 7.74 ಲಕ್ಷ ಜನರು ಮಾತ್ರವೇ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 4.90 ಲಕ್ಷ ಜನರು ಮಾತ್ರವೇ ಎರಡೂ ಡೋಸ್ ಪಡೆದುಕೊಂಡಿದ್ದಾರೆ. ಹೀಗಾಗಿ ಪ್ರತಿ ವ್ಯಕ್ತಿಗೂ ಎರಡೂ ಡೋಸ್ ನೀಡಿಕೆ ಖಾತರಿ ಪಡಿಸಲು ಸರ್ಕಾರ ಈ ಕಠಿಣ ಕಾಯ್ದೆ ಜಾರಿಗೊಳಿಸಿದೆ.

Covid In Karnataka: ರಾಜ್ಯದ 16 ಜಿಲ್ಲೆಗಳಲ್ಲಿ ಕೋವಿಡ್ ಏರಿಕೆ: ಶಿವಮೊಗ್ಗ, ಕೊಪ್ಪಳದಲ್ಲಿ 400% ಹೆಚ್ಚಳ!

ದೇಶದ ಶೇ.50 ಜನಕ್ಕೆ ಲಸಿಕೆ ಪೂರ್ಣ 

ಭಾರತದಲ್ಲಿ ಶೇ.50ರಷ್ಟು ಅರ್ಹ ವಯಸ್ಕರು ಎರಡೂ ಡೋಸ್ ಕೋವಿಡ್-19 ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಭಾನುವಾರ ತಿಳಿಸಿದ್ದಾರೆ. ‘ಅಭಿನಂದನೆಗಳು ಭಾರತ. ದೇಶದ ಶೇ.50ರಷ್ಟು ವಯಸ್ಕರು ಪೂರ್ಣ ಪ್ರಮಾಣದ ಲಸಿಕೆ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿ. ಜೊತೆಯಾಗಿ ಹೋರಾಡುವುದರಿಂದ ಕೋವಿಡ್ ವಿರುದ್ಧದ ಯುದ್ಧ ಗೆಲ್ಲ ಬಹುದು’ ಎಂದು ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮಾಹಿತಿ ಅನ್ವಯ, ಇದುವ ರೆಗೆ 128 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ 80.15 ಕೋಟಿ ಜನರಿಗೆ ಮೊದಲ ಡೋಸ್ ಮತ್ತು 48 ಕೋಟಿ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಈ ಮೂಲಕ ಲಸಿಕೆ ಪಡೆಯಲು ಅರ್ಹರು ಎನ್ನಿಸಿಕೊಂಡ ಶೇ.50ರಷ್ಟು ಜನರಿಗೆ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿದೆ.

ಒಟ್ಟಾರೆ 65.38 ಕೋಟಿ ಪುರುಷರು ಮತ್ತು 62.02 ಕೋಟಿ ಮಹಿಳೆಯರು ಲಸಿಕೆ ಪಡೆದುಕೊಂಡಿದ್ದಾರೆ. ಇವರ ಪೈಕಿ 18-44ರ ವಯೋಮಾನದವರಿಗೆ 74.96 ಕೋಟಿ, 45-60ರ ವಯೋಮಾನದವರಿಗೆ 32.47 ಕೋಟಿ ಮತ್ತು 60 ವರ್ಷ ಮೇಲ್ಪಟ್ಟವರಿಗೆ 20 ಕೋಟಿ ಡೋಸ್ ವಿತರಿಸಲಾಗಿದೆ.

ಕರ್ನಾಟಕದ ಕ್ರಮ ದೇಶಕ್ಕೇ ಮಾದರಿ  ಇತರೆ ರಾಜ್ಯಗಳು ಅನುಸರಿಸಲಿ

ದೇಶಾದ್ಯಂತ ಒಮಿಕ್ರೋನ್ (Omicron) ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ಈ ಮಹಾಮಾರಿ ವೈರಸ್ ನಿಯಂತ್ರಣಕ್ಕೆ ಕರ್ನಾಟಕ (Karnataka) ಕೈಗೊಂಡಿರುವ ಕ್ರಮಗಳು ಇಡೀ ದೇಶಕ್ಕೆ ಮಾದರಿ. ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳನ್ನು ದೇಶದ ಇತರೆ ಎಲ್ಲಾ ರಾಜ್ಯಗಳು ಪಾಲಿಸಬೇಕು ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಸದಸ್ಯ ಡಾ. ಸುಭಾಷ್ ಸಾಲುಂಖೆ (Task Force Member Dr Subhash Salunkhe) ಪ್ರತಿಪಾದಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅದು ಭಾರತ ದಲ್ಲಿ ತೀವ್ರಗೊಳ್ಳದಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಕುರಿತಾಗಿ ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸುಭಾಷ್ ‘ಕರ್ನಾಟಕದಲ್ಲಿ ಕೈಗೊಂಡಿರುವ ರೀತಿಯ ಕ್ರಮಗಳನ್ನು ಎಲ್ಲಾ ರಾಜ್ಯಗಳು ಪಾಲಿಸಬೇಕು. ಜತೆಗೆ ಕೇಂದ್ರ ಹೊರಡಿಸಿದ ಮಾರ್ಗಸೂಚಿಗಳನ್ನು ಲೋಪವಿಲ್ಲದೆ ಕಟ್ಟುನಿಟ್ಟಾಗಿ ಪಾಲಿಸಬೇಕು

Omicron ದೇಶದಲ್ಲಿ ಮೂರನೇ ಅಲೆ ಆತಂಕ, ಲಸಿಕಾ ಅಭಿಯಾನಕ್ಕೆ ಮತ್ತಷ್ಟು ಒತ್ತು!

ಹೀಗಾದಾಗ ಒಮಿಕ್ರೋನ್ ವೈರಸ್ ಅನ್ನು ನಿಯಂತ್ರಿಸಬಹುದು’ ಎಂದು ಹೇಳಿದರು. ಅಲ್ಲದೆ ‘ಒಮಿಕ್ರೋನ್‌ನ ಮೂಲಸ್ಥಾನವಾದ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಮಂದಿಗೆ ಈ ವೈರಸ್ ಹರಡುತ್ತಿದೆ. ಆದಾಗ್ಯೂ, ಈ ವೈರಸ್‌ಗೆ ತೀವ್ರ ಅನಾರೋಗ್ಯಕ್ಕೀಡಾದ ಮತ್ತು ಸಾವಿಗೀಡಾದವರ ಸಂಖ್ಯೆ ನಿಯಂತ್ರಣ ದಲ್ಲೇ ಇರುವುದು ಸಮಾಧಾನಕರ. ಹಾಗೆಂದು ನಾವು ಮೈಮರೆಯುವಂತಿಲ್ಲ. ಅತಿಹೆಚ್ಚು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಒಳಗೊಂಡಿರುವ ಮುಂಬೈನಂಥ ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು’ ಎಂದು ಅವರು ಹೇಳಿದರು.

Follow Us:
Download App:
  • android
  • ios