ಗಾಜಿಯಾಬಾದ್ ಹೆಸರು ಬದಲಾವಣೆಗೆ ಸಿಎಂ ಯೋಗಿಗೆ ಪ್ರಸ್ತಾವನೆ
ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ಹೆಸರು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಮಂಗಳವಾರ ಗಾಜಿಯಾಬಾದ್ ನಗರ ಪಾಲಿಕೆ ಅಂಗೀಕರಿಸಿದೆ.
ಗಾಜಿಯಾಬಾದ್ ಹೆಸರು ಬದಲಾವಣೆಗೆ ಸಿಎಂ ಯೋಗಿಗೆ ಪ್ರಸ್ತಾವನೆ
ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ಹೆಸರು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಮಂಗಳವಾರ ಗಾಜಿಯಾಬಾದ್ ನಗರ ಪಾಲಿಕೆ ಅಂಗೀಕರಿಸಿದೆ. ಪರ್ಯಾಯವಾಗಿ 'ಹರನಂದಿ ನಗರ, ಗಜಪ್ರಸ್ಥ ಮತ್ತು ದೂಧೇಶ್ವರನಾಥ್ ನಗರ' ಎಂಬ 3 ಹೆಸರುಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕಳುಹಿಸಲಾಗುವುದು.
ಗಾಜಿಯಾಬಾದ್ ಮತ್ತು ಹಿಂದೂ ಸಂಘಟನೆಗಳ ಜನರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೆಸರುಗಳನ್ನು ಸೂಚಿಸಲಾಗಿದೆ ಎಂದು ಮೇಯರ್ ಸುನಿತಾ ದಯಾಳ್ ತಿಳಿಸಿದ್ದಾರೆ. ಈ ಹಿಂದೆ ಅಲಹಾಬಾದ್ ನಗರವನ್ನು ಪ್ರಯಾಗ್‌ರಾಜ್, ಮೊಘಲ್ ಸರಾಯ್ ಅನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರ ಎಂದು ಮತ್ತು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಜಿಲ್ಲೆ ಎಂದು ಯೋಗಿ ಸರ್ಕಾರ ಬದಲಿಸಿತ್ತು.
ಶಾಲೆಯಲ್ಲಿ ಬುರ್ಕಾ ನಿಷೇಧ ಮಾಡಿದ್ದ ಸಲಿಂಗಿ ಅಟ್ಟಲ್ ಗೇಬ್ರಿಯಲ್ ಫ್ರಾನ್ಸ್‌ನ ಹೊಸ ಪ್ರಧಾನಿ
ಪ್ಯಾರಿಸ್: ಶಿಕ್ಷಣ ಸಚಿವರಾಗಿದ್ದ ಅಟ್ಟಲ್ ಗೇಬ್ರಿಯೆಲ್ (34) ಅವರನ್ನು ಫ್ರಾನ್ಸ್‌ನ ಹೊಸ ಪ್ರಧಾನಿಯಾಗಿ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೋನ್ ನೇಮಿಸಿದ್ದಾರೆ. ಇದರೊಂದಿಗೆ ಫ್ರಾನ್ಸ್‌ನಲ್ಲಿ ಅತಿ ಕಿರಿಯ ವಯಸ್ಸಿನವರು ಪ್ರಧಾನಮಂತ್ರಿ ಅಧಿಕಾರಕ್ಕೆ ಏರಿದಂತಾಗಿದೆ. ವಲಸೆ ನೀತಿಯಲ್ಲಿ ವಿವಾದ ಭುಗಿಲೆದ್ದ ಕಾರಣ ಎಲಿಜ಼ಬೆತ್ ಬಾರ್ನೆ ಅವರು ಸೋಮವಾರವಷ್ಟೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಫ್ರಾನ್ಸ್‌ನ ಹೊಸ ಪ್ರಧಾನಿ ಅಟ್ಟಲ್ ಗೇಬ್ರಿಯಲ್ ತಾವು ಗೇ(ಸಲಿಂಗಿ) ಎಂಬುದಾಗಿ ಬಹಿರಂಗವಾಗಿ ಘೋಷಣೆ ಮಾಡಿಕೊಂಡಿದ್ದರು.
ಸುಪ್ರೀಂ ಆದೇಶ ಬೆನ್ನಲ್ಲೇ 11 ಬಿಲ್ಕಿಸ್ ರೇಪಿಸ್ಟ್‌ಗಳು ನಾಪತ್ತೆ
ಅಹಮದಾಬಾದ್: 2002ರಲ್ಲಿ ಗೋದ್ರೋತ್ತರ ದಂಗೆ ವೇಳೆ ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ಎಸಗಿದ ಹಾಗೂ ಆಕೆ ಕುಟುಂಬದ 7 ಮಂದಿಯನ್ನು ಹತ್ಯೆಗೈದ ಪ್ರಕರಣದ 11 ಅಪರಾಧಿಗಳಿಗೆ ನೀಡಲಾಗಿದ್ದ ಕ್ಷಮಾದಾನ ರದ್ದುಗೊಳಿಸಿ ಅವರನ್ನು ಮತ್ತೆ ಜೈಲಿಗೆ ಹಾಕಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿರುವ ಬೆನ್ನಲ್ಲೇ ಎಲ್ಲ ಅಪರಾಧಿಗಳೂ ನಾಪತ್ತೆಯಾಗಿದ್ದಾರೆ.
ಅಪರಾಧಿಗಳ ಮನೆಗೆ ಬೀಗ ಹಾಕಲಾಗಿದೆ. ಈ 11 ಜನ ಅಪರಾಧಿಗಳ ಪೈಕಿ ಇಬ್ಬರು ಗುಜರಾತ್‌ನ ರಣಧಿಕ್‌ಪುರದ ಮತ್ತು 9 ಜನ ಸಿಂಗವಾಡ್ ಗ್ರಾಮದ ನಿವಾಸಿಗಳು. ಇದೀಗ ಎರಡೂ ಗ್ರಾಮದಿಂದ ಅಪರಾಧಿಗಳು ನಾಪತ್ತೆಯಾಗಿದ್ದು, ಅವರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ನಡುವೆ ಅಪರಾಧಿಗಳ ಕುರಿತು ಅವರ ಕುಟುಂಬಸ್ಥರೂ ಯಾವುದೇ ಸುಳಿವು ನೀಡುತ್ತಿಲ್ಲ. ಅವರ ಮನೆಗಳಿಗೂ ಬೀಗ ಹಾಕಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಜೀವಾವಧಿಗೆ ಗುರಿಯಾಗಿದ್ದ 11 ದೋಷಿಗಳಿಗೆ ಗುಜರಾತ್ ಸರ್ಕಾರ ಕ್ಷಮೆ ನೀಡಿತ್ತು. ಇದರ ವಿರುದ್ಧ ಬಿಲ್ಕಿಸ್ ಸುಪ್ರೀಂ ಮೆಟ್ಟಿಲೇರಿದ್ದಳು.
ಅಯೋಧ್ಯೆಯ ಶ್ರೀರಾಮನ ಆರಾಧನೆಗೆ 3000 ಅರ್ಚಕರ ಹಿಂದಿಕ್ಕಿ ಆಯ್ಕೆಯಾದ ವಿದ್ಯಾರ್ಥಿ ಮೋಹಿತ್
ಪಾಕಿಸ್ತಾನದ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್‌ಗೆ ಮುಗಿಯದ ಸಂಕಷ್ಟ
ಇಸ್ಲಾಮಾಬಾದ್: ಸರ್ಕಾರಕ್ಕೆ ಸಂಬಂಧಿಸಿದ ಗುಪ್ತ ದಾಖಲೆ ಬಹಿರಂಗಗೊಳಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ರಾವಲ್ಪಿಂಡಿಯ ಕೋರ್ಟ್ ಜಾಮೀನು ನೀಡಿದೆ. ಆದರೆ ಕಳೆದ ಮೇ 9 ರಂದು ಪಾಕಿಸ್ತಾನದ ಮುಖ್ಯ ಸೇನಾ ಕಚೇರಿಯ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ ಇಮ್ರಾನ್ ಜೈಲಿನಲ್ಲೇ ಉಳಿಯುವಂತಾಗಿದೆ.
ಇದರ ಜೊತೆಗೆ ಮತ್ತೊಂದು ಪ್ರಕರಣದಲ್ಲಿ ಇಮ್ರಾನ್ ದಂಪತಿಗೆ ಸಂಕಷ್ಟ ಎದುರಾಗಿದ್ದು, ತೋಷಾಖಾನಾ (ಸರ್ಕಾರಿ ಖಜಾನೆ)ಗೆ ಉಡುಗೊರೆಗಳನ್ನು ಹೂಡಿಕೆ ಮಾಡದಿರುವುದು ಹಾಗೂ ಕಡಿಮೆ ಹಣವನ್ನು ಪಾವತಿಸಿ ತಮ್ಮಲ್ಲೇ ಉಡುಗೊರೆಗಳನ್ನು ಉಳಿಸಿಕೊಂಡಿದ್ದಾರೆ ಎಂದು ಇಮ್ರಾನ್ ಖಾನ್ ಮತ್ತು ಪತ್ನಿ ಬುಷಾ ಬೀಬಿ ಮೇಲೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ದೋಷಾರೋಪ ಹೊರಿಸಿದೆ.
ಕಳ್ಳನಿಂದಾಗಿ ಆಟೋದಿಂದ ಬಿದ್ದು BTech ವಿದ್ಯಾರ್ಥಿನಿ ಸಾವು: ಪೊಲೀಸರಿಂದ ಫೋನ್ ಕಳ್ಳನ ಎನ್‌ಕೌಂಟರ್