Asianet Suvarna News Asianet Suvarna News

ಅಯೋಧ್ಯೆಯ ಶ್ರೀರಾಮನ ಆರಾಧನೆಗೆ 3000 ಅರ್ಚಕರ ಹಿಂದಿಕ್ಕಿ ಆಯ್ಕೆಯಾದ ವಿದ್ಯಾರ್ಥಿ ಮೋಹಿತ್

ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವ ಶ್ರೀರಾಮನ ದೇಗುಲ ಉದ್ಘಾಟನೆಗೆ ದಿನಗಣನೆಯಾಗ್ತಿದೆ. ಈ ಭವ್ಯ ಮಂದಿರದಲ್ಲಿ ಪೂಜೆಗಾಗಿ ದೇಶದೆಲ್ಲೆಡೆಯಿಂದ ಈ ಹಿಂದೆಯೇ ಪುರೋಹಿತರ ನೇಮಕ ಮಾಡಲಾಗಿದ್ದು, ಹೀಗೆ ನೇಮಕವಾದ ಪುರೋಹಿತರ ಪೈಕಿ ಓರ್ವ ವಿದ್ಯಾರ್ಥಿಯೂ ಸೇರಿದ್ದಾನೆ.

Mohit Pandey a vedic study student From Gaziabad selected to worship Lord Rama in Mandir inauguration puja at Ayodhya akb
Author
First Published Dec 11, 2023, 4:51 PM IST

ಅಯೋಧ್ಯೆ: ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವ ಶ್ರೀರಾಮನ ದೇಗುಲ ಉದ್ಘಾಟನೆಗೆ ದಿನಗಣನೆಯಾಗ್ತಿದೆ. ದೇಗುಲ ನಿರ್ಮಾಣ ಕಾಮಗಾರಿ ಕೊನೆ ಹಂತ ತಲುಪಿದ್ದು 2024ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ದೇಗುಲದ ಉದ್ಘಾಟನೆ ಮಾಡಲಿದ್ದಾರೆ.  ಈ ಭವ್ಯ ಮಂದಿರದಲ್ಲಿ ಪೂಜೆಗಾಗಿ ದೇಶದೆಲ್ಲೆಡೆಯಿಂದ ಈ ಹಿಂದೆಯೇ ಪುರೋಹಿತರ ನೇಮಕ ಮಾಡಲಾಗಿದ್ದು, ಹೀಗೆ ನೇಮಕವಾದ ಪುರೋಹಿತರ ಪೈಕಿ ಓರ್ವ ವಿದ್ಯಾರ್ಥಿಯೂ ಸೇರಿದ್ದಾನೆ. ಅವರೇ ಉತ್ತರಪ್ರದೇಶದ ಗಾಜಿಯಾಬಾದ್‌ನ ಮೋಹಿತ್ ಪಾಂಡೆ ಅವರ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. 

ಗಾಜಿಯಾಬಾದ್‌ನ (Gaziabad) ದೂಧೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿಯಾಗಿರುವ ಮೋಹಿತ್‌ ಪಾಂಡೆ (Mohit Pande) ರಾಮಮಂದಿರಕ್ಕೆ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ದೇಶದೆಲ್ಲೆಡೆಯ ಪುರೋಹಿತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 3 ಸಾವಿರಕ್ಕೂ ಹೆಚ್ಚು ಮಂದಿ ಈ ಪೌರೋಹಿತ್ಯ ಕೆಲಸಕ್ಕಾಗಿ ಸಂದರ್ಶನಕ್ಕೆ ಹಾಜರಾಗಿದ್ದರು. ಅಷ್ಟೊಂದು ಜನರಲ್ಲಿ ಕೇವಲ 50 ಮಂದಿಯನ್ನು ದೇಗುಲದ ಪೂಜೆಗಾಗಿ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಒಬ್ಬರಾಗಿದ್ದಾರೆ ಈ ವಿದ್ಯಾರ್ಥಿ ಮೋಹಿತ್ ಪಾಂಡೆ.  ಇಲ್ಲಿ ಪುರೋಹಿತರಾಗಿ ಆಯ್ಕೆಯಾದ ಅರ್ಚಕರಿಗೆ ಆರು ತಿಂಗಳ ಕಾಲ ತರಬೇತಿ ನೀಡಲಾಗಿದೆ. 

ಅಯೋಧ್ಯೆ ದೇಗುಲದ ಬಗ್ಗೆ BRS ಶಾಸಕಿ ಕವಿತಾ ಪೋಸ್ಟ್‌: ಸೋತ ಮೇಲೆ ಹಿಂದೂ ದೇವರ ನೆನಪಾಯ್ತ ಅಕ್ಕ ಎಂದ ನೆಟ್ಟಿಗರು

ಈ ಮೋಹಿತ್ ಪಾಂಡೆಯವರು ಗಾಜಿಯಾಬಾದ್‌ನ ಶ್ರೀ ದೂಧೇಶ್ವರನಾಥ ಮಠ (Dudheshwaranath Mutt) ದೇವಾಲಯದ ಆವರಣದಲ್ಲಿ ದೂಧೇಶ್ವರ ವೇದ ವಿದ್ಯಾಪೀಠದಲ್ಲಿ ವೇದಾಧ್ಯಯನ ನಡೆಸಿದ್ದಾರೆ. ಈ ದೂಧೇಶ್ವರನಾಥ ಮಠವೂ ಉತ್ತರ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಪ್ರಪಂಚದೆಲ್ಲೆಡೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ವೇದಾಧ್ಯಯನ ಪೀಠದಲ್ಲಿ ಸುಮಾರು 70 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ದೇಶದ ಮಾತ್ರವಲ್ಲದೇ ವಿದೇಶಗಳಲ್ಲಿರುವ ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ದೂಧೇಶ್ವರನಾಥ ಮಠದ ಪೀಠಾಧೀಶ್ವರ ಮಹಾಂತ್‌ ನಾರಾಯಣ ಗಿರಿ ಮಾತನಾಡಿದ್ದು, ದೂಧೇಶ್ವರ ದೇವರ ಆಶೀರ್ವಾದದಿಂದ  ಅಯೋಧ್ಯೆಯ ಶ್ರೀರಾಮನ ಸೇವೆಗೆ ಮೋಹಿತ್ ಪಾಂಡೆ ಆಯ್ಕೆಯಾಗಿದ್ದಾರೆ. ಈ ನಮ್ಮ ಮಠದಲ್ಲಿ ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ವೇದಾಧ್ಯಾಯನ ಕಲಿಸಿ ಸಂಸ್ಕಾರ ನೀಡಲಾಗಿದೆ. ಕಳೆದ 23 ವರ್ಷಗಳಿಂದ ಇಲ್ಲಿ ವೇದಾಧ್ಯಾಯನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 

ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನೆಗೆ ದಿನಗಣನೆ: ಗರ್ಭಗುಡಿ ಫೋಟೋ ಬಿಡುಗಡೆ ಮಾಡಿದ ಮಂದಿರ ಟ್ರಸ್ಟ್‌

ಧೂದೇಶ್ವರ ವಿದ್ಯಾಪೀಠದಲ್ಲಿ ಮೋಹಿತ್ ಅವರು 7 ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ. ಇಲ್ಲಿ ಅಧ್ಯಯನದ ನಂತರ ಹೆಚ್ಚಿನ ವೇದಾಭ್ಯಾಸಕ್ಕಾಗಿ ಮೋಹಿತ್ ತಿರುಪತಿಗೆ ಹೋಗಿದ್ದರು ಎಂದು ಮಹಾಂತ್‌ ನಾರಾಯಣ ಗಿರಿ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios