Asianet Suvarna News Asianet Suvarna News

ಮದ್ವೆಗೆ ಸಾಲ ಕೊಡ್ತೇವೆ ಎಂದ ಬ್ಯಾಂಕ್: ಸಾಲ ತೀರಿಸುವ ಹುಡ್ಗಿ ಹುಡುಕಿ ಎಂದ ಯುವಕ

ಸಾಲ ನೀಡುವುದಾಗಿ ಸಂದೇಶ ನೀಡಿದ ಖಾಸಗಿ ಬ್ಯಾಂಕೊಂದಕ್ಕೆ ಯುವಕರೊಬ್ಬರು ಸಖತ್ ಆಗಿ ರಿಫ್ಲೈ ಮಾಡಿದ್ದು, ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Private bank offer man 25 lakh personal loan for marriage, he asked bank to search bride who able to pay loan as soon as possible akb
Author
First Published Dec 11, 2022, 10:01 PM IST

ಸಾಮಾನ್ಯವಾಗಿ ಈ ಬ್ಯಾಂಕ್‌ಗಳು ಅಗತ್ಯವಿರುವವರಿಗೆ ಸಾಲ ನೀಡಲು ಅವರಿಗೆ ಸಾಲ ಕಟ್ಟುವ ತಾಕತ್ತಿದ್ದರೂ ನೂರೆಂಟು ನೆಪ ಹೇಳಿ ಸಾಲ ನೀಡಲು ಮೀನಾಮೇಷ ಎಣಿಸುತ್ತಿರುತ್ತಾರೆ. ಜೊತೆಗೆ ಆ ದಾಖಲೆ ಬೇಕು ಈ ದಾಖಲೆ ಬೇಕು ಎಂದು ಹೇಳಿ ತಿಂಗಳುಗಟ್ಟಲೇ ವರ್ಷಾನುಗಟ್ಟಲೇ ಅವರನ್ನು ಕುಣಿಸುತ್ತಾ ಅವರಿಗೆ ಈ ಬ್ಯಾಂಕ್‌ನವರ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ಜಿಗುಪ್ಸೆ ತರಿಸಿ ಬಿಡುತ್ತಾರೆ. ಆದರೆ ಸಾಲ ಬೇಕಿಲ್ಲದವರಿಗೆ ಮಾತ್ರ ಅವರ ಬ್ಯಾಂಕ್ ಬ್ಯಾಲೆನ್ಸ್ ನೋಡಿಕೊಂಡು ಸಾಲ ಬೇಕಾ ಸಾಲ ಬೇಕಾ ಇವತ್ತೇ ಬನ್ನಿ ಈ ಕ್ಷಣವೇ ಬನ್ನಿ ಎಂದು ಮೊಬೈಲ್‌ಗೆ ಕಾಲ್ ಮಾಡ್ತಾ ಇಮೇಲ್‌ಗೆ ಸಂದೇಶ ಕಳುಹಿಸುತ್ತಾ ಕಿರಿಕಿರಿ ಮಾಡುತ್ತಿರುತ್ತಾರೆ. ಹೀಗೆ ಸಾಲ ನೀಡುವುದಾಗಿ ಸಂದೇಶ ನೀಡಿದ ಖಾಸಗಿ ಬ್ಯಾಂಕೊಂದಕ್ಕೆ ಯುವಕರೊಬ್ಬರು ಸಖತ್ ಆಗಿ ರಿಫ್ಲೈ ಮಾಡಿದ್ದು, ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಅಂದಹಾಗೆ ಖಾಸಗಿ ಬ್ಯಾಂಕೊಂದು (Private bank) ಯುವಕನಿಗೆ ಮದ್ವೆಗೆ ಸಾಲ ನೀಡುವ ಆಫರ್ ನೀಡಿದೆ. ಗ್ರ್ಯಾಂಡ್ ಆಗಿ ಮದ್ವೆಯಾಗಲು ನಿಮಗೆ ಬೇಕಾಗಿರುವುದು ಕೊಟಕ್‌ನ ವೈಯಕ್ತಿಕ ಸಾಲ 25 ಲಕ್ಷದವರೆಗೆ ಎಂದು ಶೆಟ್ಟಿ ದಿನತ್ (Dinath Shetty) ಎಂಬುವವರಿಗೆ ಕೊಟಕ್ ಬ್ಯಾಂಕ್ ಸಂದೇಶ ಕಳುಹಿಸಿದೆ. ಈ ಸಂದೇಶಕ್ಕೆ ಪ್ರತಿಯಾಗಿ ಡಿ ಶೆಟ್ಟಿ ಅವರು ನನ್ನ ಆರ್ಥಿಕ ಸ್ಥಿತಿ ಬಗ್ಗೆ ಚಿಂತಿಸಿದ್ದಕ್ಕೆ ಧನ್ಯವಾದ ಕೊಟಕ್, ಹಾಗೆಯೇ ನೀವು ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಸಾಲವನ್ನು ತೀರಿಸಲು ಸಶಕ್ತವಾದಂತಹ ಅರ್ಧಾಂಗಿಯನ್ನು ಹುಡುಕಿಕೊಡಿ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಇದರ ಸ್ಕ್ರೀನ್‌ ಶಾಟ್ (Screenshot) ಅನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

Personal Finance: ಅಂಗಡಿ ಶುರು ಮಾಡೋ ಪ್ಲಾನ್ ಇದ್ಯಾ? ಇಲ್ಲಿ ಸಿಗುತ್ತೆ ಲೋನ್

ಇಷ್ಟೊಂದು ಕೆಟ್ಟ ದಿನ ಯಾರ ಬದುಕಿನಲ್ಲಿಯೂ ಬಾರದಿರಲಿ ಸಹೋದರ, ಗ್ರ್ಯಾಂಡ್ ಆಗಿ ಮದ್ವೆಯಾಗುವ (Grand wedding) ಜೋಶ್‌ನಲ್ಲಿ 10 ವರ್ಷಗಳ ಕಾಲ ಇಎಂಐ ಕಟ್ಟುವ ದುಸ್ಥಿತಿ ಯಾರಿಗೂ ಬರದಿರಲಿ ಎಂದು ಅವರು ಬರೆದುಕೊಂಡು ಈ ಪೋಸ್ಟ್ ಮಾಡಿದ್ದು, ಅನೇಕರು ನಗುವ ಇಮೋಜಿ ಯ ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ಮದುವೆಯ ವಿಚಾರದಲ್ಲಿ ಅನೇಕರು ಅದ್ಧೂರಿಯಾಗಿ ವಿವಾಹವಾಗಬೇಕೆಂದು, ಊರಿಗೆಲ್ಲ ಊಟ ಹಾಕಬೇಕು, ತಮ್ಮ ವೈಭವ ತೋರಿಸಬೇಕು ಎಂದು ಮದುವೆಯಾಗಲು ಹೋಗಿ ಸಾಲದಲ್ಲಿ ಮುಳುಗುತ್ತಾರೆ. ಮದ್ವೆಯ ಸಂಭ್ರಮದಲ್ಲಿ ಆ ಸಾಲ ಯಾವುದು ದೊಡ್ಡ ವಿಷಯವಾಗುವುದೇ ಇಲ್ಲ. ಆದರೆ ಮದ್ವೆಯ ನಂತರ ಪ್ರತಿ ತಿಂಗಳು ಇಎಂಐ (EMI) ಕಟ್ಟುವ ಸಂದರ್ಭದಲ್ಲಿ ಸುಮ್ಮನೆ ರಿಜಿಸ್ಟಾರ್ ಮದ್ವೆಯಾಗಿದ್ರು ಸಾಕಿತ್ತು ಸಾಲ ಕಟ್ಟುವ ಹಗಲು ರಾತ್ರಿ ದುಡಿಯುವ ಕೆಲಸ ಇರಲಿಲ್ಲ ಎಂದು ಯೋಚಿಸಲು ಶುರು ಮಾಡುತ್ತಾರೆ. ಅದಕ್ಕೆ ತಕ್ಕಂತೆ ಉದ್ಯೋಗದಲ್ಲಿರುವವರಿಗೆ ಬ್ಯಾಂಕ್‌ಗಳು ಹೀಗೆ ಸಾಲದ ಆಮಿಷವೊಡ್ಡಿ ಹಗಲುಕನಸು ಕಾಣುವವರಿಗೆ ರೆಕ್ಕೆ ಪುಕ್ಕ ಬರುವಂತೆ ಮಾಡುತ್ತಾರೆ. ಒಟ್ಟಿನಲ್ಲಿ ಈ ಯುವಕ ನೀಡಿದ ಪ್ರತಿಕ್ರಿಯೆ ಮಾತ್ರ ಅನೇಕರಿಗೆ ವಾಸ್ತವವನ್ನು ಅರ್ಥ ಮಾಡಿಸುತ್ತಿದೆ.

Personal Finance : ಕಡಿಮೆ ಕ್ರೆಡಿಟ್ ಸ್ಕೋರ್ ಇದ್ರೆ ಇಷ್ಟೆಲ್ಲಾ ಕಷ್ಟ, ನಷ್ಟನಾ?

 
 
 
 
 
 
 
 
 
 
 
 
 
 
 

A post shared by DShettyWay (@dshetty_way)

 

Follow Us:
Download App:
  • android
  • ios