ಪೊಲೀಸ್ ಠಾಣೆಯ ಲಾಕಪ್‌ನಿಂದ ತಪ್ಪಿಸಿಕೊಂಡಿದ್ದ ಕಳ್ಳ ಮತ್ತೆ ಕಳ್ಳನನ್ನು ಹಿಡಿದು ತಂದ ಪೊಲೀಸರು ಲಾಕಪ್‌ನಿಂದ ತಪ್ಪಿಸಿಕೊಂಡಿದ್ದು ಹೇಗೆಂದು ತೋರಿಸಿದ ಕೈದಿ
ಮಹಾರಾಷ್ಟ್ರ(ಮಾ.22): ಜೈಲಿನಿಂದ ತಪ್ಪಿಸಿಕೊಂಡು ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳನೋರ್ವ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದು ಹೇಗೆ ಎಂಬುದನ್ನು ಪ್ರತ್ಯಕ್ಷಿಕವಾಗಿ ಪೊಲೀಸರಿಗೆ ತೋರಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೈಲಿನಿಂದ ತಪ್ಪಿಸಿಕೊಳ್ಳಲು ಕೈದಿಗಳು ಹೇಗೆ ಸೃಜನಾತ್ಮಕ ಮಾರ್ಗಗಳನ್ನು ಬಳಸುತ್ತಾರೆ ಎಂಬುದನ್ನು ತೋರಿಸುವ ಆಸಕ್ತಿದಾಯಕ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ (Maharastra) ಪಿಂಪ್ರಿ(Pimpri) ಚಿಂಚ್‌ವಾಡ್‌ನ (chinchavad) ಚಕನ್ (chakan) ಪೊಲೀಸ್ ಠಾಣೆಯ ಲಾಕ್‌ಅಪ್‌ನಿಂದ ಕೈದಿಯೊಬ್ಬರು ತಪ್ಪಿಸಿಕೊಂಡಿದ್ದು, ಗೇಟ್‌ಗೆ ಬೀಗ ಹಾಕಿದ್ದರೂ ಆತ ಲಾಕ್‌ಅಪ್‌ನಿಂದ ಪರಾರಿಯಾಗಿದ್ದು ಹೇಗೆ ಎಂಬುದು ಪೊಲೀಸರಿಗೆ ಅಚ್ಚರಿ ಮೂಡಿಸಿತ್ತು. ಇದಾಗಿ ಸ್ವಲ್ಪ ಸಮಯದಲ್ಲೇ ಪೊಲೀಸರು ಮತ್ತೆ ಆರೋಪಿಯನ್ನು ಹಿಡಿದು ಠಾಣೆಗೆ ಕರೆತಂದಿದ್ದಾರೆ.
ಈ ವೇಳೆ ಆರೋಪಿಯನ್ನು ಪೊಲೀಸರು ಹೇಗೆ ಲಾಕ್‌ಅಪ್‌ನಿಂದ ಓಡಿ ಹೋದೆ ಎಂದು ಕೇಳಿದಾಗ, ಅವರು ಪೊಲೀಸರಿಗೆ ಲೈವ್ ಡೆಮೊ ನೀಡಿದ್ದಾನೆ. ಕಳ್ಳನು ಸಾಕಷ್ಟು ತೆಳ್ಳಗಿದ್ದುದರಿಂದ, ಅವನು ಸುಲಭವಾಗಿ ಜೈಲಿನ ಕಂಬಿಗಳ ನಡುವೆ ತೂರಿ ಹೊರ ಬಂದಿದ್ದಾನೆ. ಕೆಲವೇ ಸೆಕೆಂಡ್‌ಗಳಲ್ಲಿ ಆರೋಪಿ ಕಂಬಿಗಳ ಸೆರೆಯಿಂದ ಹೊರಬಂದದ್ದನ್ನು ಕಂಡು ಪೊಲೀಸರು ಬೆಚ್ಚಿಬಿದ್ದರು. ಏತನ್ಮಧ್ಯೆ, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರನ್ನು ರಂಜಿಸುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಈ ಪರಿಸ್ಥಿತಿಯನ್ನು ತಿಳಿಸಿದ ನಂತರ, ಎಚ್ಚರವಾಗಿರಲು ಎಲ್ಲಾ ಪೊಲೀಸ್ ಠಾಣೆಗಳಿಗೆ ಸಲಹೆಯನ್ನು ನೀಡಲಾಗಿದೆ.
Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ ನಮಸ್ಕಾರ ಮಾಡಿಕೊಂಡ! ವಿಡಿಯೋ
ಅಂಗಡಿಗಳು, ಸೂಪರ್ ಮಾರ್ಕೆಟ್‌ಗಳಲ್ಲಿ ಕದಿಯುವುದು (Stolen)ಹಲವರ ಅಭ್ಯಾಸ. ಖರೀದಿಸಲು ಹಣವಿದ್ದರೂ ಸಣ್ಣ ಪುಟ್ಟ ವಸ್ತುಗಳನ್ನು ಕದಿಯೋ ಚಾಳಿ. ಆಹಾರವನ್ನು ಹೀಗೆ ಕದ್ದು ತೆಗೆದುಕೊಳ್ಳುವವರೂ ಇದ್ದಾರೆ. ಬಡತನವಿದ್ರೆ ಹಸಿವು ತಡೆದುಕೊಳ್ಳೋಕೆ ಆಗದೆ ಕದ್ದು ತಿನ್ನೋದ್ರಲ್ಲಿ ಏನೋ ಅರ್ಥವಿದೆ. ಆದ್ರೆ ಅದಲ್ಲದೆಯೂ ಆಹಾರವನ್ನು ಕದಿಯೋದೆ ಒಂದು ಹವ್ಯಾಸ ಆಗಿದ್ರೆ ಅದೆಷ್ಟು ವಿಚಿತ್ರ ಅಲ್ವಾ ? ಆಹಾರವನ್ನು ಕದಿಯಲು ಹೊರಟ ಮಂದಿ ಹೆಚ್ಚಾಗಿ ಏನನ್ನು ಕದ್ದಿರಬಹುದು ಎಂದು ನೀವು ಊಹಿಸಬಹುದು. ಚಾಕೊಲೇಟ್, ಸ್ನ್ಯಾಕ್ಸ್, ಅಲ್ಕೋಹಾಲ್ ಮೊದಲಾದವು ಆಗಿರಬಹುದು ಎಂದೇ ಎಲ್ಲರೂ ಊಹಿಸುತ್ತಾರೆ. ಆದ್ರೆ ಟೆಕ್ಸಾಸ್‌ನಲ್ಲಿ ಇಬ್ಬರು ಮಹಿಳೆಯರು ಸಿಕ್ಕಿಬಿದ್ದಿರೋದು ಚೀಸ್ ಕದ್ದಿರೋ ಆರೋಪದಲ್ಲಿ.
ಮೆಜೆಸ್ಟಿಕ್‌ನಲ್ಲಿ ಕಲಬುರಗಿಯ ಲ್ಯಾಪ್‌ಟಾಪ್ ಕಳ್ಳನ ಕರಾಮತ್ತು
ಅಮೆರಿಕಾದಲ್ಲಿ ಇಬ್ಬರು ಮಹಿಳೆಯರಿಗೆ ಭಾರಿ ಪ್ರಮಾಣದ ಚೀಸ್, ಮೇಯನೇಸ್ ಮತ್ತು ಟನ್‌ಗಳಷ್ಟು ಇತರ ಖಾದ್ಯಗಳನ್ನು ಅಕ್ರಮವಾಗಿ ಸಂಪಾದಿಸಿದ್ದಕ್ಕಾಗಿ ಜೈಲು ಶಿಕ್ಷೆ ವಿಧಿಸಲಾಯಿತು. ಇಬ್ಬರು ಮಹಿಳೆಯರು ಸೇರಿ ಅಕ್ರಮವಾಗಿ 50 ಟನ್ ಚೀಸ್ ಮತ್ತು 5,000 ಗ್ಯಾಲನ್ ಮೇಯನೇಸ್ ಕದ್ದಿದ್ದಾರೆ. ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಿಂದ ಬಂದಿರುವ ಅನಾ ರಿಯೋಜಾ ಮತ್ತು ಮರಿಯಾ ಕನ್ಸುಯೆಲೊ ಡಿ ಯುರೆನೊ ಅವರು ಆಹಾರ ಕದ್ದು ಸಿಕ್ಕಿಬಿದ್ದವರು.
ಇನ್ನೊಂದು ವಿಚಿತ್ರ ಪ್ರಕರಣದಲ್ಲಿ ಹೊರರಾಜ್ಯದಿಂದ ವಿಮಾನದಲ್ಲಿ(Flight) ನಗರಕ್ಕೆ ಬಂದು ಮನೆಗಳವು ಮಾಡಿ ಪರಾರಿಯಾಗುತ್ತಿದ್ದ ಮೂವರು ಖತರ್ನಾಕ್‌ಗಳನ್ನು ಬಾಣಸವಾಡಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಹರಿದಾಸ್ ಬರಾಯಿ (37) ಮತ್ತು ಪಾರ್ಥ ಹಲ್ದಾರ್ (32) ಹಾಗೂ ರತನ್ ಸಾಹಾ (52) ಬಂಧಿತರು(Arrest). ಆರೋಪಿಗಳಿಂದ(Accused) 38 ಲಕ್ಷ ಮೌಲ್ಯದ 745 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.