Asianet Suvarna News Asianet Suvarna News

ಮೋದಿ ಅಮ್ಮನ ನಿಧನ: ಪೇಪರ್ ಆ್ಯಡಿನಲ್ಲೂ ಅದೇ ಸರಳತೆ ಮೆರೆದ ಪ್ರಧಾನಿ ಕುಟುಂಬ

ಇತ್ತೀಚೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತೃವಿಯೋಗವಾಗಿತ್ತು.  ಆದರೆ ಮಗ ಪ್ರಧಾನಿ ಆಗಿದ್ದರೂ ಆ ಸಂದರ್ಭದಲ್ಲಿ ತಾಯಿಯ ಅಂತ್ಯಸಂಸ್ಕಾರ ಯಾವುದೇ ಆಡಂಬರವಿಲ್ಲದೇ,  ಗೌಜು ಗದ್ದಲಗಳಿಲ್ಲದೇ ಸರಳಾತಿ ಸರಳವಾಗಿ ನಡೆದಿತ್ತು.

Prime Minister Narendra modi wife Heeraben death, Modi family shows same simplicity again in classifieds akb
Author
First Published Jan 6, 2023, 2:31 PM IST

ನವದೆಹಲಿ:  ಇತ್ತೀಚೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತೃವಿಯೋಗವಾಗಿತ್ತು.  ಆದರೆ ಮಗ ಪ್ರಧಾನಿ ಆಗಿದ್ದರೂ ಆ ಸಂದರ್ಭದಲ್ಲಿ ತಾಯಿಯ ಅಂತ್ಯಸಂಸ್ಕಾರ ಯಾವುದೇ ಆಡಂಬರವಿಲ್ಲದೇ,  ಗೌಜು ಗದ್ದಲಗಳಿಲ್ಲದೇ ಸರಳಾತಿ ಸರಳವಾಗಿ ನಡೆದಿತ್ತು.  ಪ್ರಧಾನಿ ಟೀಕಾಕಾರು ಕೂಡ ಕ್ಷಣ ದಂಗಾಗುವಂತೆ ಮಾಡಿದ ಈ ಸರಳ ಸಂಸ್ಕಾರವನ್ನು ಇದೊಂದು ಮಾದರಿ ನಡೆ ಎಂದೇ ಬಹುತೇಕರು ಹೊಗಳಿದ್ದರು. ಪ್ರಧಾನಿ ಮೋದಿ ಕುಟುಂಬದ ಸರಳತೆಯ ಮತ್ತೊಂದು  ನಿದರ್ಶನ ಈಗ ಅನಾವರಣವಾಗಿದೆ. 

ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಯಾರಾದರೂ ಮೃತಪಟ್ಟರೆ ಅವರಿಗೆ ಶ್ರದ್ದಾಂಜಲಿ ಸೂಚಿಸಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಾರೆ. ಕೆಲವರು ಅವರ ಶ್ರದ್ಧಾಕರ್ಮಗಳ ವಿವರಗಳನ್ನು ಅದರಲ್ಲಿ ನೀಡುತ್ತಾರೆ. ಆದರೆ ಗಣ್ಯಾತಿಗಣ್ಯರು (Celebrities) ಮೃತಪಟ್ಟಾಗ ಅವರ ಪತ್ರಿಕೆಯ ಮುಖಪುಟದಲ್ಲಿ(Front Page) ಒಂದು ಪೇಜ್ ಪೂರ್ತಿ ದೊಡ್ಡದಾದ ಜಾಹೀರಾತು (classifieds) ರಾರಾಜಿಸುತ್ತಿರುತ್ತದೆ. ಅಲ್ಲದೇ ವಿಧಿ ವಿಧಾನಗಳಿಗೆ ಸಾವಿರಾರು ಜನರನ್ನು ಕರೆದು ಊಟ ಹಾಕಿಸುತ್ತಾರೆ. ಆದರೆ  ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ಮೃತಪಟ್ಟಾಗ ಪತ್ರಿಕೆಯ ಜಾಹೀರಾತು ವಿಭಾಗದ ಸಣ್ಣದೊಂದು ಮೂಲೆಯಲ್ಲಿ ಜಾಹೀರಾತು ನೀಡಲಾಗಿದೆ.  ಅದೂ ಗುಜರಾತ್‌ ಭಾಷೆಯ ಸ್ಥಳೀಯ ಮಟ್ಟದ ಪತ್ರಿಕೆಯಲ್ಲಿ. ಈ ಮೂಲಕ ಅಲ್ಲೂ ಪ್ರಧಾನಿ ನರೇಂದ್ರ ಮೋದಿ (Narendra Modi) ಕುಟುಂಬ ಸರಳತೆ (Simlicity) ತೋರಿದೆ.  ಪ್ರಧಾನಿ ಮನಸ್ಸು ಮಾಡಿದರೆ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲೇ ತಮ್ಮ ತಾಯಿಯ ನಿಧನದ ಜಾಹೀರಾತನ್ನು ನೀಡಬಹುದಿತ್ತು. ಆದರೆ ಹಾಗೆ ಮಾಡದೇ  ಒಂದು ಸರಳ ಮಾರ್ಗದ ಬುನಾದಿ ಹಾಕಿ ಇತರರಿಗೂ ಮಾದರಿಯಾಗಿದ್ದಾರೆ. 

ನನ್ನ ತಾಯಿಯೇ ನನ್ನ ಜೀವನದ ದೊಡ್ಡ ಶಿಕ್ಷಕಿ: ಪ್ರಧಾನಿ ನರೇಂದ್ರ ಮೋದಿ

ಡಿಸೆಂಬರ್ 30 ರಂದು ಮುಂಜಾನೆ 3.30ರ ಸುಮಾರಿಗೆ ಹೀರಾಬೆನ್ (Heeraben)ನಿಧನರಾಗಿದ್ದರು.  ಅನಾರೋಗ್ಯದ ಹಿನ್ನೆಲೆಯಲ್ಲಿ ಹೀರಾಬೆನ್ ಅವರನ್ನು ಅಹಮದಾಬಾದ್‌ನ ಯುಎನ್‌ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ತಮ್ಮ ತಾಯಿ ನಿಧನದ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ  ಮಾಹಿತಿ ನೀಡಿದ್ದರು. ಸರಣಿ ಟ್ವೀಟ್‌ ಮಾಡಿ, ತಮ್ಮ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದರು "ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ. ನನ್ನ ತಾಯಿಯಲ್ಲಿ ನಾನು ಯಾವಾಗಲೂ ಆ ತ್ರಿಮೂರ್ತಿಗಳನ್ನು ಕಂಡಿದ್ದೇನೆ, ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ (Karmayogi) ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ ಅಂತ ಪ್ರಧಾನಿ ಬರೆದುಕೊಂಡಿದ್ದರು. 

ಮುಂಜಾನೆ  3.30ಕ್ಕೆ ನಿಧನರಾದ ನರೇಂದ್ರ ಮೋದಿಯವರ (Narendra Modi) ತಾಯಿಯ ಅಂತ್ಯಸಂಸ್ಕಾರ ಬೆಳಗ್ಗೆ ಆರು ಗಂಟೆಗೆಲ್ಲಾ ಮುಕ್ತಾಯವಾಗಿತ್ತು. ಯಾವುದೇ ಗಣ್ಯಾತಿಗಣ್ಯರ ಅಂತಿಮ ದರ್ಶನಕ್ಕೆ ಅಲ್ಲಿ ಅವಕಾಶ ನೀಡಿರಲಿಲ್ಲ. ಶವಸಂಸ್ಕಾರಕ್ಕಾಗಿ ಯಾವುದೋ ಸಾರ್ವಜನಿಕ ಆಸ್ತಿಯಲ್ಲಿ ನೆಲಸಮದ ಕೆಲಸ ಮಾಡಲಿಲ್ಲ.  ಪ್ರಧಾನಿ ತಾಯಿ ಎಂಬ ಕಾರ್ಣಕ್ಕೆ ಮೃತದೇಹಕ್ಕೆ ರಾಷ್ಟ್ರಧ್ವಜವನ್ನು (National flag) ಹೊದಿಸಲಿಲ್ಲ.  ಊರಿಗೆ ಅರಸನಾದರೂ ತಾಯಿಗೆ ಮಗ ಎನ್ನುವಂತೆ ಸ್ವತಃ ಪ್ರಧಾನಿ ತಾಯಿಯ ಅಂತಿಮಯಾತ್ರೆಗೆ ಹೆಗಲು ನೀಡಿದ್ದರು. ನಂತರ ಸಾಮಾನ್ಯರಲ್ಲಿ ಸಾಮಾನ್ಯರಂತೆ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆದಿತ್ತು. 

ತಾಯಿ ನಿಧನದ ದು:ಖದಲ್ಲೂ ಮೋದಿ ಕರ್ತವ್ಯಕ್ಕೆ ಹಾಜರ್‌: ಅಂತ್ಯಸಂಸ್ಕಾರ ನಡೆದ 1.5 ತಾಸಲ್ಲೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿ

ಮೋದಿ ನೀಡಿದ ಸಂದೇಶ ಏನು?: ದೇಶದ ಪ್ರಧಾನಿ ಮೋದಿ ಕುಟುಂಬ ಎಂದರೆ ನಾವೆಲ್ಲಾ ನೋಡಿದ್ದು ಕೇವಲ ಅವರ ತಾಯಿಯನ್ನು ಮಾತ್ರ. ಆಗಾಗ ತಾಯಿಯ ಜೊತೆ ಕೆಲ ಸಮಯ ಕಾಲ ಕಳೆಯುತ್ತಿದ್ದ ಮೋದಿ, ಅವರ ಸಹೋದರರ ಜೊತೆ ಕಾಣಿಸಿಕೊಂಡಿದ್ದು ಅತೀ ಕಡಿಮೆ ಅಥವಾ ಆ ರೀತಿಯ ಸಮಯಕ್ಕೆ ಮೋದಿ ಅವಕಾಶ ನೀಡಿರಲಿಲ್ಲ. ರಾಜಕೀಯದಿಂದ ತಮ್ಮ ಕುಟುಂಬವನ್ನು ದೆಹಲಿಗೂ , ಗುಜರಾತ್'ಗೂ ಇರುವಷ್ಟೇ ದೂರ ಇಟ್ಟಿದ್ದರು. ಈ ವಿಷಯದಲ್ಲಿ ಮೋದಿ ದೇಶದ ರಾಜಕೀಯಕ್ಕೆ ಮಾದರಿ ನಾಯಕ. ತಾಯಿ ಜೊತೆ ಮಾತ್ರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದ ಮೋದಿ ಹೇಗೆ  ಮಾದರಿ ನಾಯಕನೊ, ಅದೇ ರೀತಿ ತಾಯಿ ಹೀರಾಬೆನ್ ಕೂಡ ಮಾದರಿ ತಾಯಿ.

Follow Us:
Download App:
  • android
  • ios