ತಿರುಪತಿಗೆ ಮೋದಿ : ತಿಮ್ಮಪ್ಪನ ದರ್ಶನ ಪಡೆಯಲಿರುವ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿಯವರು ನ.27 ರಂದು ವಿಶ್ವವಿಖ್ಯಾತ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
ತಿರುಪತಿ: ಪ್ರಧಾನಿ ನರೇಂದ್ರ ಮೋದಿಯವರು ನ.27 ರಂದು ವಿಶ್ವವಿಖ್ಯಾತ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಮೋದಿ ನ.26 ರಾತ್ರಿ ತಿರುಪತಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನ.27 ರಂದು ಬೆಳಗ್ಗೆ 8 ಗಂಟೆಗೆ ತಿರುಪತಿಯ ಭಗವಾನ್ ಬಾಲಾಜಿಯ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಪ್ರಧಾನಿ ಜೊತೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಮತ್ತು ರಾಜ್ಯ ಸಚಿವರು ಹಾಗೂ ಸಂಸದರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ನ.27ರಂದು ವಿಐಪಿ ದರ್ಶನವನ್ನು (VIP Darshan) ರದ್ದುಗೊಳಿಸಲಾಗಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ. ಮೊದಿ ಭೇಟಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ.
ಮಾದಿಗ ಒಳಮೀಸಲು: ಬೇಗ ಸಮಿತಿ ರಚನೆಗೆ ಪ್ರಧಾನಿ ಮೋದಿ ಸೂಚನೆ
ನವದೆಹಲಿ: ಪರಿಶಿಷ್ಟ ಜಾತಿಯಲ್ಲಿ ಮಾದಿಗರಿಗೆ ಒಳಮೀಸಲು ನೀಡುವ ಬೇಡಿಕೆ ಪರಿಶೀಲಿಸಲು ಸಮಿತಿ ರಚನೆ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗೆ ಮೋದಿ ಅವರು ಹೈದರಾಬಾದ್ ದಲಿತ ರಾಲಿಯಲ್ಲಿ ಸಮಿತಿ ರಚನೆ ಭರವಸೆ ನೀಡಿದ್ದರು.
ಡ್ರಗ್ಸ್‌ಗಾಗಿ ಒಂದು ತಿಂಗಳ ಮಗು ಮಾರಿದ ದಂಪತಿ
ಮುಂಬೈ: ಮಾದಕ ವಸ್ತುಗಳ (Drug Addiction) ವ್ಯಸನ ಜನರನ್ನು ಹೇಗೆ ಬದಲಾಯಿಸುತ್ತದೆ ಎಂಬುದಕ್ಕೆ ಈ ಪ್ರಕರಣ ಒಂದು ಸಾಕ್ಷಿಯಾಗಿದೆ. ಮಾದಕ ವಸ್ತು ಖರೀದಿಗಾಗಿ ದಂಪತಿಗಳು ತಮ್ಮ ಒಂದು ತಿಂಗಳ ಹೆಣ್ಣು ಮಗು (Baby GirL) ಹಾಗೂ ಒಂದು ವರ್ಷದ ಮಗನನ್ನು ಮಾರಿದ ಹೇಯ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆ ಸಂಬಂಧ ದಂಪತಿಗಳು ಹಾಗೂ ಏಜೆಂಟರನ್ನು ಪೊಲೀಸರು ಬಂಧಿಸಿದ್ದಾರೆ.
ಶಬ್ಬೀರ್ ಹಾಗೂ ಸಾನಿಯಾ ಖಾನ್ (Sania Khan) ಮಾದಕ ವಸ್ತುಗಳ ವ್ಯಸನಿಗಳಾಗಿದ್ದು, ದಿನಂಪ್ರತಿ ಡ್ರಗ್ಸ್ ಇಲ್ಲದೆ ಇರುವುದಕ್ಕೆ ಆಗದಷ್ಟು ದಾಸರಾಗಿದ್ದಾರೆ. ಇವರು ಒಂದು ದಿನ ಡ್ರಗ್ಸ್ ಖರೀದಿಸಲು ಹಣವಿಲ್ಲದ ಕಾರಣ ಒಂದು ತಿಂಗಳ ಶಿಶುವನ್ನು 14,000 ರು. ಹಾಗೂ 1 ವರ್ಷದ ಮಗನನ್ನು 60,000 ರು,ಗೆ ಮಾರಿದ್ದಾರೆ.
ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ವಿಮಾನ ಸೇವೆ ಆರಂಭ, ಟಿಕೆಟ್ ದರ ಮಾಹಿತಿ ಇಲ್ಲಿದೆ
ಈ ಘಟನೆಯನ್ನು ತಿಳಿದ ಶಬ್ಬೀರ್ ಸೋದರಿ ರುಬೀನಾ ಆತಂಕಗೊಂಡು ಹತ್ತಿರದ ಡಿ.ಎನ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇವರ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಒಂದು ತಿಂಗಳ ಶಿಶುವನ್ನು ರಕ್ಷಿಸಿದ್ದಾರೆ. 1 ವರ್ಷದ ಮಗುವಿಗೆ ಹುಡುಕಾಟ ನಡೆಸಿದ್ದಾರೆ. ದಂಪತಿ ಉಷಾ ರಾಥೋಡ್ ಎಂಬ ಏಜೆಂಟ್, 1 ತಿಂಗಳ ಶಿಶುವನ್ನು ಖರೀದಿ ಮಾಡಿದ್ದ ಶಕೀಲ್ ಮಕ್ರಾನಿಯನ್ನು ಬಂಧಿಸಿದ್ದಾರೆ. 1 ವರ್ಷದ ಮಗುವನ್ನು ಖರೀದಿ ಮಾಡಿದವರಿಗೆ ಬಲೆ ಬೀಸಿದ್ದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ನವದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ: ದಾಖಲೆ ಕಡ್ಡಾಯ