ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ವಿಮಾನ ಸೇವೆ ಆರಂಭ, ಟಿಕೆಟ್ ದರ ಮಾಹಿತಿ ಇಲ್ಲಿದೆ
ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಇಂಡಿಗೋ ಬಳಿಕ ಇದೀಗ ಸ್ಟಾರ್ ಏರ್ ಸಂಸ್ಥೆಯಿಂದಲೂ ವಿಮಾನ ಸೇವೆ ಆರಂಭವಾಗಿದೆ. ಟಿಕೆಟ್ ದರ, ವಿಮಾನ ಸಮಯ ಸೇರಿ ಸಂಪೂರ್ಣ ವಿವರ ಇಲ್ಲಿದೆ.
ಶಿವಮೊಗ್ಗ (ನ.21): ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಇಂಡಿಗೋ ಬಳಿಕ ಇದೀಗ ಸ್ಟಾರ್ ಏರ್ ಸಂಸ್ಥೆಯಿಂದಲೂ ವಿಮಾನ ಸೇವೆ ಆರಂಭವಾಗಿದೆ. ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ವಾರದಲ್ಲಿ ಸ್ಟಾರ್ ಏರ್‌ನಿಂದ ನಾಲ್ಕು ದಿನ ವಿಮಾನ ಹಾರಾಟ ಮಂಗಳವಾರದಿಂದಲೇ ಆರಂಭವಾಗುತ್ತಿದೆ. ಶಿವಮೊಗ್ಗ-ಗೋವಾ, ಹೈದರಾಬಾದ್ ಮತ್ತು ತಿರುಪತಿ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯ ಇರುತ್ತದೆ. ಈ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಕರ್ನಾಟಕಕ್ಕೆ ಪ್ರತ್ಯೇಕ ವಿಮಾನಯಾನ, ರೈಲ್ವೆ ಸಂಸ್ಥೆ ರಚನೆಗೆ ಮನವಿ: ಕಲರ್ ಡಿಸೈನ್ ಮಾಡಿಕೊಟ್ಟ ಗುತ್ತೇದಾರ್!
ಉಡಾನ್ ಯೋಜನೆಯಡಿ ಈ ಮೂರು ಸ್ಥಳಗಳಿಗೆ ತೆರಳಲು ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗೆ ಸಬ್ಸಿಡಿ ನೀಡಲಿದೆ. ಎಕಾನಮಿ ಕ್ಲಾಸ್‌ನಲ್ಲಿ 1,999ರೂ. ಪಾವತಿಸಿ ಟಿಕೆಟ್ ಪಡೆಯ ಬಹುದಾಗಿದೆ. ಕಳೆದ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟಿಸಿದ್ದರು. ಬಳಿಕ ಆ.31ರಿಂದ ಶಿವಮೊಗ್ಗ- ಬೆಂಗಳೂರು ವಿಮಾನ ಸಂಚಾರ ಆರಂಭವಾಗಿತ್ತು. ಇದೀಗ ಮತ್ತೆ ಮೂರು ನಗರಗಳಿಗೆ ಶಿವಮೊಗ್ಗ ಏರ್‌ಪೋರ್ಟ್ ಮೂಲಕ ಸಂಪರ್ಕ ಲಭ್ಯವಾಗಲಿದೆ. ಹೈದರಾಬಾದ್ ಹಾಗೂ ತಿರುಪತಿಗೆ ವಾರದಲ್ಲಿ ನಾಲ್ಕು ದಿನ ಮಾತ್ರ ವಿಮಾನ ಸಂಚಾರ ಇರಲಿದೆ. ಉಡಾನ್ ಯೋಜನೆಯ ಸಬ್ಸಿಡಿ ಪಡೆಯುವವರು ಮೊದಲೇ ಟಿಕೆಟ್ ಬುಕಿಂಗ್ ಮಾಡಬೇಕಿದೆ.
ಶಿವಮೊಗ್ಗ-ಗೋವಾ: ಶಿವಮೊಗ್ಗದಿಂದ ಮಧ್ಯಾಹ್ನ 1.55ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 2.40ಕ್ಕೆ ಗೋವಾ ತಲುಪಲಿದೆ. ಗೋವಾದಿಂದ ಮಧ್ಯಾಹ್ನ 3.10ಕ್ಕೆ ಹೊರಟು ಸಂಜೆ 4.05ಕ್ಕೆ ಶಿವಮೊಗ್ಗ ತಲುಪಲಿದೆ. ಬುಧವಾರ ಶಿವಮೊಗ್ಗದಿಂದ ಗೋವಾಕ್ಕೆ ಬೆಳಗ್ಗೆ 11 ಗಂಟೆಗೆ ಹೊರಡುವ ವಿಮಾನ ಬೆಳಗ್ಗೆ 11.50ಕ್ಕೆ ಗೋವಾ ತಲುಪಿ, ಅಲ್ಲಿಂದ ಮಧ್ಯಾಹ್ನ 12.20ಕ್ಕೆ ಹೊರಟು ಮಧ್ಯಾಹ್ನ1.10ಕ್ಕೆ ಶಿವಮೊಗ್ಗ ತಲುಪಲಿದೆ.
ಕುಡಿದು ಗಗನಸಖಿ ಮುದ್ದಾಡಲು ಹೋದ ಪ್ರಯಾಣಿಕ, ಬೆಂಗಳೂರಲ್ಲಿ ಇಳಿಯುತ್ತಿದ್ದಂತೆ ಆರೋಪಿ ಅರೆಸ್ಟ್!
ಶಿವಮೊಗ್ಗ-ಹೈದರಬಾದ್: ಹೈದರಬಾದ್‌ನಿಂದ ಬೆಳಗ್ಗೆ 9.35ಕ್ಕೆ ಹೊರಟು ಬೆಳಗ್ಗೆ 10.35ಕ್ಕೆ ಶಿವಮೊಗ್ಗ ತಲುಪಿ, ಮತ್ತೆ ಇಲ್ಲಿಂದ ಸಂಜೆ 4.30ಕ್ಕೆ ಹೊರಟು ಸಂಜೆ 5.30ಕ್ಕೆ ಹೈದರಾಬಾದ್ ತಲುಪಲಿದೆ.
ಶಿವಮೊಗ್ಗ-ತಿರುಪತಿ: ಶಿವಮೊಗ್ಗದಿಂದ ಬೆಳಗ್ಗೆ 11ಕ್ಕೆ ಹೊರಟು 11.50ಕ್ಕೆ ತಿರುಪತಿ, ಅಲ್ಲಿಂದ ಮಧ್ಯಾಹ್ನ 12.15ಕ್ಕೆ ಹೊರಟು ಮಧ್ಯಾಹ್ನ 1.40ಕ್ಕೆ ಶಿವಮೊಗ್ಗ ತಲುಪಲಿದೆ. ಬುಧವಾರ ಶಿವಮೊಗ್ಗದಿಂದ ಮಧ್ಯಾಹ್ನ 1.40ಕ್ಕೆ ಹೊರಟು, 2.30ಕ್ಕೆ ತಿರುಪತಿ ತಲುಪಲಿದೆ. ಮತ್ತೆ ತಿರುಪತಿಯಿಂದ ಮಧ್ಯಾಹ್ನ 3ಕ್ಕೆ ಹೊರಟು 3.50ಕ್ಕೆ ಶಿವಮೊಗ್ಗ ತಲುಪಲಿದೆ.
ಶಿವಮೊಗ್ಗದಿಂದ ಬೆಂಗಳೂರಿಗೆ ಈಗಾಗಲೇ ಇಂಡಿಗೋ ಸಂಸ್ಥೆ ವಿಮಾನ ಸೇವೆ ಒದಗಿಸುತ್ತಿದೆ. ಮುಂದೆ ಶಿವಮೊಗ್ಗದಿಂದ ದೆಹಲಿ ಸೇರಿದಂತೆ ರಾಜ್ಯ, ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶವಿದೆ.