ನವದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ: ದಾಖಲೆ ಕಡ್ಡಾಯ
ನವದಂಪತಿಗಳಿಗೆ ಸುಲಭವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುವ ವಿಶೇಷ ಯೋಜನೆಯೊಂದನ್ನು ತಿರುಪತಿ ತಿರುಮಲ ದೇಗುಲದ ಆಡಳಿತ ಮಂಡಳಿ ಜಾರಿಗೆ ತಂದಿದೆ. ಈ ಯೋಜನೆಯಡಿ ಯಾವುದೇ ಜೋಡಿ ಮದುವೆಯಾದ ಒಂದು ವಾರದೊಳಗೆ ವಿಶೇಷ ಟಿಕೆಟ್ ನೀಡಿ ಸುಲಭವಾಗಿ ದೇವರ ದರ್ಶನ ಪಡೆಯಬಹುದು.
ತಿರುಮಲ: ನವದಂಪತಿಗಳಿಗೆ ಸುಲಭವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುವ ವಿಶೇಷ ಯೋಜನೆಯೊಂದನ್ನು ತಿರುಪತಿ ತಿರುಮಲ ದೇಗುಲದ ಆಡಳಿತ ಮಂಡಳಿ ಜಾರಿಗೆ ತಂದಿದೆ. ಈ ಯೋಜನೆಯಡಿ ಯಾವುದೇ ಜೋಡಿ ಮದುವೆಯಾದ ಒಂದು ವಾರದೊಳಗೆ ವಿಶೇಷ ಟಿಕೆಟ್ ನೀಡಿ ಸುಲಭವಾಗಿ ದೇವರ ದರ್ಶನ ಪಡೆಯಬಹುದು.
ವೆಂಕಟೇಶ್ವರನ ದರ್ಶನ ಮಾಡಲು ದೇಗುಲದ ಆಡಳಿತ ಮಂಡಳೀ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಅದರಂತೆ ನವದಂಪತಿಗಳು ಮದುವೆಯ ದಿರಿಸಿನಲ್ಲೇ ಮದುವೆಯಾದ ಮರುಕ್ಷಣವೇ ಬಂದು ತಿಮ್ಮಪ್ಪನ ದರ್ಶನ ಪಡೆಯಬೇಕೆಂದು ಸೂಚಿಸಲಾಗಿದೆ. ಇದರ ಜೊತೆಗೆ ಶ್ರೀವಾರಿ ಕಲ್ಯಾಣೋತ್ಸವದ ಮದುವೆ ಸಮಾರಂಭ ಹಾಗೂ ದೇವರ ವಿಶೇಷ ದರ್ಶನದಲ್ಲೂ ನವದಂಪತಿಗಳಿಗೆ ಪ್ರತಿನಿತ್ಯ 20 ಟಿಕೆಟ್‌ಗಳನ್ನು ಮೀಸಲಿಡಲಾಗುತ್ತಿದೆ.
ತಿರುಪತಿಯಲ್ಲಿ 13 ಎಕರೆ ಕೊಡಿಸೋದಾಗಿ₹1 ಕೋಟಿ ಉಂಡೆ ನಾಮ ಹಾಕಿದ್ದವರ ಸೆರೆ
ದರ್ಶನಕ್ಕೂ ಒಂದು ವಾರ ಹಿಂದೆ ಮದುವೆಯಾದ ನವದಂಪತಿಗಳು ಆರ್ಜಿತ ಸೇವಾ ಲಕ್ಕಿ ಡಿಪ್ ಕೌಂಟರ್‌ನಲ್ಲಿ ಅರ್ಜಿ ಹಾಕಿ 1000 ರು. ಶುಲ್ಕ ಸಲ್ಲಿಸಿ ಕಲ್ಯಾಣೋತ್ಸವ ಸೇವಾ ಟಿಕೆಟ್ ಅನ್ನು 1000 ರು. ನೀಡಿ ಖರೀದಿಸಬಹುದು. ಟಿಕೆಟ್ ಖರೀದಿ ವೇಳೆ ಮದುವೆ ಫೋಟೋ, ಆಧಾರ್ ದಾಖಲೆ ನೀಡುವುದು ಕಡ್ಡಾಯ. ಜೊತೆಗೆ ದೇವರ ದರ್ಶನಕ್ಕೆ ವಿವಾಹದ ಉಡುಗೆಯಲ್ಲೇ ಹಾಜರಾಗಬೇಕು. ನಿತ್ಯ 20 ಜೋಡಿಗಳಿಗೆ ಮಾತ್ರವೇ ಈ ಅವಕಾಶ.
ತಿರುಪತಿ ಅಭಿವೃದ್ಧಿಗೆ ಟಿಟಿಡಿ ಬಜೆಟ್‌ನ ಶೇ.1 ಹಣ: ಪ್ರಸ್ತಾವ ತಿರಸ್ಕರಿಸಿದ ಸಿಎಂ ಜಗನ್