ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ!
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಈ ವೇಳೆ ಹಲವು ವಿಚಾರಗಳ ಬಗ್ಗೆ ಅವರು ಚರ್ಚೆ ಮಾಡಿದ್ದಾರೆ.
ನವದೆಹಲಿ (ಡಿ. 16): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಪ್ರಮುಖ ಮಾತುಕತೆ ನಡೆಸಿದರು. ಎಸ್‌ಸಿಒ ಶೃಂಗಸಭೆಯ ಹಿನ್ನಲೆಯಲ್ಲಿ ಸಮರ್‌ಕಂಡ್‌ನಲ್ಲಿ ತಮ್ಮ ಸಭೆಯ ನಂತರ, ಉಭಯ ನಾಯಕರು ಇಂಧನ ಸಹಕಾರ, ವ್ಯಾಪಾರ ಮತ್ತು ಹೂಡಿಕೆಗಳು, ರಕ್ಷಣೆ ಮತ್ತು ಭದ್ರತಾ ಸಹಕಾರ ಮತ್ತು ಇತರ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಂತೆ ದ್ವಿಪಕ್ಷೀಯ ಸಂಬಂಧದ ಹಲವಾರು ವಿಚಾರಗಳ ಬಗ್ಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾಗಿ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
Vladimir Putin: ಮೆಟ್ಟಿಲಿನಿಂದ ಜಾರಿಬಿದ್ದು ಮಲ ವಿಸರ್ಜನೆ ಮಾಡಿಕೊಂಡ ರಷ್ಯಾ ಅಧ್ಯಕ್ಷ..!
ಇನ್ನು ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ವಿಚಾರವಾಗಿಯೂ ಪ್ರಧಾನಿ ಮೋದಿ ಈ ವೇಳೆ ಮಾತನಾಡಿದ್ದು, ಮಾತುಕತೆ ಹಾಗೂ ರಾಜತಾಂತ್ರಿಕತೆಯ ಇದನ್ನು ಕೊನೆಗಾಣಿಸುವ ಏಕೈಕ ಮಾರ್ಗ ಎಂದು ಪುಟಿನ್ ಅವರಿಗೆ ಹೇಳಿದ್ದಾರೆ. ಪ್ರಧಾನಮಂತ್ರಿಯವರು ಅಧ್ಯಕ್ಷ ಪುಟಿನ್ ಅವರಿಗೆ ಜಿ-20 ರ ಭಾರತದ ಪ್ರಸ್ತುತ ಅಧ್ಯಕ್ಷೀಯತೆಯ ಬಗ್ಗೆ ವಿವರಿಸಿದರು, ಅದರ ಪ್ರಮುಖ ಆದ್ಯತೆಗಳನ್ನು ಎತ್ತಿ ತೋರಿಸಿದರು.
ಮನುಷ್ಯರನ್ನೇ ಕರಗಿಸುವ 'ಪೂರ್ ಮ್ಯಾನ್ ನ್ಯೂಕ್' ಬಾಂಬ್ ಅನ್ನು ಉಕ್ರೇನ್‌ನತ್ತ ಉಡಾಯಿಸಿದ ರಷ್ಯಾ?
ಶಾಂಘೈ ಸಹಕಾರ ಸಂಘಟನೆಯ ಭಾರತದ ಅಧ್ಯಕ್ಷತೆಯಲ್ಲಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಉಭಯ ನಾಯಕರು ಪರಸ್ಪರ ನಿರಂತರ ಸಂಪರ್ಕದಲ್ಲಿರಲು ಒಪ್ಪಿಕೊಂಡರು.