ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಈಗ ಉಕ್ರೇನ್‌ ಮೇಲೆ ಹೊಸ ರೀತಿಯ ಬಾಂಬ್‌ಗಳನ್ನು ಹಾಕಲು ಆರಂಭಿಸಿದ್ದಾರೆ. ಪೂರ್‌ ಮ್ಯಾನ್‌ ನ್ಯೂಕ್‌ ಬಾಂಬ್‌ಗಳನ್ನು ಹೊತ್ತ ಕ್ಷಿಪಣಿಗಳು ಉಕ್ರೇನ್‌ ಪ್ರದೇಶದ ಮೇಲೆ ದಾಳಿ ಮಾಡಲು ಆರಂಭಿಸಿದೆ. ಇದು ಎಂಥಾ ಭಯಾನಕ ಬಾಂಬ್‌ಗಳೆಂದರೆ, ಮನುಷ್ಯನ ದೇಹ ಇದರ ಶಾಖಕ್ಕೆ ಕರಗಿ ಹೋಗುತ್ತದೆ. ಇದನ್ನು ಥರ್ಮೋಬಾರಿಕ್‌ ಬಾಂಬ್‌ ಎನ್ನಲಾಗುತ್ತದೆ. ಈ ಬಾಂಬ್‌ ಬ್ಲಾಸ್ಟ್‌ ಆದರೆ ನಿರೀಕ್ಷೆಗೂ ಮೀರಿದ ಶಾಖ ಉತ್ಪನ್ನವಾಗುತ್ತದೆ. ಒಟ್ಟಾರೆ ಬೆಂಕಿಯನ್ನೇ ಉಗುಳುವ ಬಾಂಬ್‌ ಎಂದೂ ಕರೆಯಲಾಗುತ್ತದೆ. ಇದರ ಮೂಲಕ ಬಂಕರ್‌ಗಳನ್ನು ಕೂಡ ಸ್ಫೋಟಿಸಬಹುದಾಗಿದೆ. 

ಮಾಸ್ಕೋ (ನ.19): ಉಕ್ರೇನ್‌ಅನ್ನು ಮಣಿಸಲು ತನ್ನ ಮಿತಿಯೊಳಗೆ ರಷ್ಯಾ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಎಲ್ಲಾ ರೀತಿಯ ಬಾಂಬ್‌ಗಳ ಪ್ರಯೋಗದೊಂದಿಗೆ ರಷ್ಯಾ ಈಗ ಉಕ್ರೇನ್‌ ಮೇಲೆ ಮತ್ತೊಂದು ರೀತಿಯ ಬಾಂಬ್‌ಗಳನ್ನು ಕ್ಷಿಪಣಿಗಳ ಮೂಲಕ ಬೀಳಿಸುತ್ತಿದೆ. ಈ ಬಾಂಬ್‌ಗಳು ಎಷ್ಟು ಅಪಾಯಕಾರಿ ಎಂದರೆ, ಮನುಷ್ಯರನ್ನು ಕರಗಿಸಿಹಾಕುತ್ತದೆ. ಆತನ ದೇಹ ಕೂಡ ಈ ಬಾಂಬ್‌ ಉಡಾವಣೆ ಆದರೆ ಸಿಗೋದಿಲ್ಲ. ಬಂಕರ್‌ಗಳನ್ನು ಕೂಡ ಇದರ ಮೂಲಕ ಸ್ಪೋಟಕ ಮಾಡಬಹುದು. ಇದನ್ನು ಪೂರ್‌ ಮ್ಯಾನ್ಸ್‌ ನ್ಯೂಕ್‌ ಅಥವಾ ಪೂರ್‌ ಮ್ಯಾನ್ಸ್‌ ನ್ಯೂಕ್ಲಿಯರ್‌ ವೆಪನ್‌ (ಬಡ ಜನರ ಅಣು ಬಾಂಬ್‌) ಎನ್ನುವ ಹೆಸರಿನಿಂದ ಕರೆಯುತ್ತಾರೆ. ಇವು ವಾಸ್ತವವಾಗಿ ಥರ್ಮೋಬಾರಿಕ್ ಫ್ಲೇಮ್ಥ್ರೋವರ್ ಬಾಂಬ್‌ಗಳು. ಈ ಬಾಂಬ್‌ಗಳು ಸ್ಫೋಟವಾದಲ್ಲಿ ಬೆಂಕಿಯೊಂದಿಗೆ ಅತಿಯಾದ ಶಾಖವನ್ನು ಉಂಟು ಮಾಡುವ ಆಯುಧಗಳಾಗಿವೆ. ಈ ಬಾಂಬ್‌ಗಳು ಸ್ಫೋಟವಾದಲ್ಲಿ ಬಲವಾದ ತರಂಗಗಳು ಕೂಡ ಹೊರಹೊಮ್ಮುತ್ತದೆ.

ರಷ್ಯಾ ಹೊಂದಿರುವ ಥರ್ಮೋಬಾರಿಕ್ ಫ್ಲೇಮ್‌ಥ್ರೋವರ್ ಅನ್ನು TOS-1A Solntsepek ಹೆವಿ ಥರ್ಮೋಬಾರಿಕ್ ಫ್ಲೇಮ್‌ಥ್ರೋವರ್ ಎಂದು ಹೆಸರಿಸಲಾಗಿದೆ. ಈ ಆಯುಧಗಳು ಯಾವುದೇ ರೀತಿಯ ಕೋಟೆಯನ್ನು ಬೇಕಾದರೂ ಕೆಡವಬಲ್ಲವು. ಶಸ್ತ್ರಸಜ್ಜಿತ ವಾಹನಗಳು ಅಥವಾ ಬಂಕರ್‌ಗಳನ್ನು ಸ್ಪೋಟ ಮಾಡಬಹುದು. ಅಷ್ಟೇ ಅಲ್ಲ ಸೈನಿಕರ ಮೇಲೆ ಬಿದ್ದರೆ ಸಿಕ್ಕೋದು ಅತನ ಬೂದಿಯಾದ ಅಸ್ತಿಪಂಜರಗಳು ಮಾತ್ರ. ಥರ್ಮೋಬಾರಿಕ್ ಆಯುಧಗಳು ಇಡೀ ಪ್ರಪಂಚದ ಅತ್ಯಂತ ಹಳೆಯ, ಮಾರಕ ಮತ್ತು ಸಾಂಪ್ರದಾಯಿಕ ಆಯುಧಗಳಲ್ಲಿ ಒಂದಾಗಿದೆ. ಸಾಮಾನ್ಯ ಭಾಷೆಯಲ್ಲಿ, ಅವುಗಳನ್ನು ಬಡವರ ಪರಮಾಣು ಶಸ್ತ್ರಾಸ್ತ್ರ ಎಂದು ಕರೆಯಲಾಗುತ್ತದೆ. 

ಉಕ್ರೇನ್‌ನಲ್ಲಿ ವಿನಾಶವನ್ನು ಉಂಟು ಮಾಡಿರುವ ಥರ್ಮೋಬಾರಿಕ್ ಆಯುಧಗಳು ಯಾವುವು: ರಷ್ಯಾದ TOS-1 ಥರ್ಮೋಬಾರಿಕ್ ಶಸ್ತ್ರಾಸ್ತ್ರವು 220 ಎಂಎಂ 30 ಬ್ಯಾರೆಲ್‌ಗಳನ್ನು ಹೊಂದಿರುವ ಫಿರಂಗಿ ಗನ್ ಆಗಿದೆ. ಇವುಗಳಲ್ಲಿ, ಈ ಶಸ್ತ್ರಾಸ್ತ್ರಗಳನ್ನು ರಾಕೆಟ್ ಅಥವಾ T-72 ಟ್ಯಾಂಕ್ ಶೆಲ್‌ಗಳ ಮೂಲಕ ಎಲ್ಲಿ ಬೇಕಾದರೂ ಬೀಳಿಸಬಹುದು. ಈ ಶಸ್ತ್ರಾಸ್ತ್ರಗಳ ವ್ಯಾಪ್ತಿಯು 6 ರಿಂದ 10 ಕಿಲೋಮೀಟರ್ ಆಗಿರುತ್ತದೆ. ಅವು ಎಲ್ಲಿ ಸ್ಫೋಟಗೊಳ್ಳುತ್ತವೆಯೋ ಅಲ್ಲಿ 1000 ಅಡಿ ವ್ಯಾಸದಲ್ಲಿ ಯಾವುದು ಕೂಡ ಮೊದಲಿನ ಹಾಗೆ ಇರುವುದಿಲ್ಲ. ಸ್ಫೋಟದ ನಂತರ ಹೊರಬರುವ ಆಘಾತ ತರಂಗ ಸೈನಿಕರ ಶ್ವಾಸಕೋಶವನ್ನು ಸೀಳಿ ಹಾಕುತ್ತದೆ. ಇದರ ನಂತರ 3000 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಕೂಡ ಈ ಬಾಂಬ್‌ ಹೊರಸೂಸುತ್ತದೆ. ಅದರರ್ಥ, ಈ ವ್ಯಾಪ್ತಿಯಲ್ಲಿ ಯಾವುದೇ ಮನುಷ್ಯ ಸಿಕ್ಕಿ ಹಾಕಿಕೊಂಡರೂ ಕೆಲವೇ ಸೆಕೆಂಡ್‌ಗಳಲ್ಲಿ ಬೂದಿಯಾಗುತ್ತದೆ. ಶತ್ರುಗಳು ತಪ್ಪಿಸಿಕೊಳ್ಳುವ ಯಾವುದೇ ಅವಕಾಶ ಕೂಡ ಇರೋದಿಲ್ಲ.

ಕ್ಷಿಪಣಿ ರಷ್ಯಾ ಉಡಾಯಿಸಿದ ಬಗ್ಗೆ ಸಾಕ್ಷ್ಯವಿಲ್ಲ ಎಂದ ಬೈಡೆನ್‌, ಪೊಲೆಂಡ್‌ ಸೇನೆ ಹೈ ಅಲರ್ಟ್‌!

'ಪೂರ್ ಮ್ಯಾನ್ಸ್ ನ್ಯೂಕ್' ಎಂದು ಹೆಸರಿಸಿದ್ದ ಅಮೆರಿಕಾದ ಸೈನಿಕ: ಈ ಬಾಂಬ್‌ಗೆ ಅಮೆರಿಕ ಸೇನೆಯಿಂದ ನಿವೃತ್ತರಾದ ಕರ್ನಲ್ ಡೇವಿಡ್ ಜಾನ್ಸನ್ ಅವರು ಪೂರ್‌ ಮ್ಯಾನ್ಸ್‌ ನ್ಯೂಕ್‌ ಎಂದು ಹೆಸರು ನೀಡಿದ್ದರು. ಈ ಆಯುಧವನ್ನು ಏರೋಪ್ಲೇನ್‌ನಿಂದ ಬೀಳಿಸಬಹುದು. ಅಥವಾ ರಾಕೆಟ್ ನಲ್ಲಿ ಹಾಕಿ ಅಥವಾ ಫಿರಂಗಿಗಳಲ್ಲಿ ಹಾಕಿ ಹಾರಿಸಬಹುದು. ಇದೀಗ ಬಂದಿರುವ ಹೊಸ ವೀಡಿಯೋದಲ್ಲಿ ವ್ಯಾಗ್ನರ್ ಗ್ರೂಪ್ ಎಂದು ಕರೆಯಲ್ಪಡುವ ರಷ್ಯಾದ ಸೇನೆಯ, ಈ ಬಾಂಬ್‌ಗಳಿಂದ ಉಕ್ರೇನಿಯನ್ ಸೇನೆ, ವಾಹನಗಳು ಮತ್ತು ಬಂಕರ್‌ಗಳ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ.

ಶುರುವಾಗುತ್ತಾ 3ನೇ ಮಹಾಯುದ್ಧ..? ಪೋಲೆಂಡ್‌ ಮೇಲೂ ರಷ್ಯಾ ಕ್ಷಿಪಣಿ ದಾಳಿ; ಇಬ್ಬರು ಬಲಿ

ಮಾಸ್ಕೋ ಬಳಿಯ ಸೆರ್ಗೀವ್ ಪೊಸಾಡ್ ಪ್ರದೇಶದಲ್ಲಿನ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಕೆಮಿಸ್ಟ್ರಿಯಲ್ಲಿ ರಷ್ಯಾ ಈ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತದೆ. ಈ ಅಸ್ತ್ರಗಳನ್ನು ನಿಷೇಧಿಸಲು ಅಮೆರಿಕ ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಏಕೆಂದರೆ ಅದು ಸಾಮೂಹಿಕ ವಿನಾಶದ ಆಯುಧವಲ್ಲ. ಅದಕ್ಕಾಗಿಯೇ ಅದರ ಮೇಲೆ ಯಾವುದೇ ರೀತಿಯ ನಿರ್ಬಂಧವನ್ನು ಹೇರುವುದು ಅಮೆರಿಕಕ್ಕೆ ಕಷ್ಟವಾಗಿದೆ.