Asianet Suvarna News Asianet Suvarna News

ನರೇಂದ್ರ ಮೋದಿ ಅವರ ಮಾತು, ಕೃತಿಯಲ್ಲಿ ಪಾಲನೆಯಾಗ್ತಿರೋದು ಸ್ವಾಮಿ ವಿವೇಕಾನಂದರ ಆದರ್ಶ!

1893 ರಲ್ಲಿ ಇದೇ ದಿನ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ತಮ್ಮ ಅತ್ಯುತ್ತಮ ಭಾಷಣಗಳ ಪೈಕಿ ಒಂದನ್ನು ಮಾಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡಿದ್ದಾರೆ.  ಅವರ ಭಾಷಣವು ಜಗತ್ತಿಗೆ ಭಾರತದ ಸಂಸ್ಕೃತಿ ಮತ್ತು ನೀತಿಯ ಒಂದು ನೋಟವನ್ನು ನೀಡಿತು ಎಂದು ಸ್ಮರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿ ಮಾತು, ಕೃತಿಯಲ್ಲಿ ಸ್ವಾಮಿ ವಿವೇಕಾನಂದರ ಆದರ್ಶನ ಪಾಲನೆಯಾಗುತ್ತಿದೆ.

Prime Minister Narendra Modi and teachings of swami vivekananda san
Author
First Published Sep 11, 2022, 5:31 PM IST

ಬೆಂಗಳೂರು (ಸೆ.11): ಸ್ವಾಮಿ ವಿವೇಕಾನಂದರು 1893 ರಲ್ಲಿ ಚಿಕಾಗೋದಲ್ಲಿ ಮಾಡಿದ ಮಹೋನ್ನತ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸ್ಮರಿಸಿಕೊಂಡಿದ್ದಾರೆ. ಅಮೆರಿಕದ ಚಿಕಾಗೋದಲ್ಲಿ ಇದೇ ದಿನದಂದು ಮಾಡಿದ ಅತ್ಯುತ್ತಮ ಭಾಷಣ, ಭಾರತದ ಸಂಸ್ಕೃತಿ ಹಾಗೂ ನೀತಿಯ ಒಂದು ನೋಟವನ್ನು ಇಡೀ ವಿಶ್ವಕ್ಕೆ ನೀಡಿತ್ತು. ಈ ಕುರಿತಾಗಿ ಟ್ವಿಟರ್‌ನಲ್ಲಿ ನರೇಂದ್ರ ಮೋದಿ ಬರೆದುಕೊಂಡಿದ್ದಾರೆ. “ಸೆಪ್ಟೆಂಬರ್ 11 ಸ್ವಾಮಿ ವಿವೇಕಾನಂದರೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದೆ. 1893 ರಲ್ಲಿ ಈ ದಿನದಂದು ಅವರು ಚಿಕಾಗೋದಲ್ಲಿ ತಮ್ಮ ಅತ್ಯುತ್ತಮ ಭಾಷಣಗಳಲ್ಲಿ ಒಂದನ್ನು ಮಾಡಿದರು. ಅವರ ಭಾಷಣವು ಜಗತ್ತಿಗೆ ಭಾರತದ ಸಂಸ್ಕೃತಿ ಮತ್ತು ನೀತಿಯ ಒಂದು ನೋಟವನ್ನು ನೀಡಿತು' ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಅದರೊಂದಿಗೆ ಬೇಲೂರು ಮಠದ ವೆಬ್‌ಸೈಟ್‌ನಲ್ಲಿರುವ ಸ್ವಾಮಿ ವಿವೇಕಾನಂದರ ಭಾಷಣ ಹಾಗೂ ವಿಡಿಯೋ ಲಿಂಕ್‌ಅನ್ನು ಸೇರಿದ್ದಾರೆ. ಮೋದಿ ಆರ್ಕೈವ್‌ ಟ್ವಿಟರ್‌ ಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ಅವರ ಮಾತುಗಳನ್ನು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಂಡಿದ್ದಾರೆ ಎನ್ನುವುದನ್ನು ತಿಳಿಸಲಾಗಿದೆ. 1985ರಲ್ಲಿ ನರೇಂದ್ರ ಮೋದಿ ಪುಣೆಯಲ್ಲಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ ಮಾತನಾಡಿದ್ದ ನರೇಂದ್ರ ಮೋದಿ,  ಸ್ವಾಮಿ ವಿವೇಕಾನಂದರು ಅದ್ವೈತವನ್ನು ಪಶ್ಚಿಮದ ದೇಶಗಳಲ್ಲಿ ಯಾವ ರೀತಿಯಲ್ಲಿ ಅರ್ಥ ಮಾಡಿಸಿದರು ಎನ್ನುವುದನ್ನು ತಿಳಿಸಿದ್ದರು.


ಮೋದಿ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದ ಸ್ವಾಮಿ ವಿವೇಕಾನಂದ: ತಮ್ಮ ಇಡೀ ಜೀವನವನ್ನು ಸೇವೆಗೆ ಮುಡಿಪಾಗಿಡುವ ನಿಟ್ಟಿನಲ್ಲಿ ಯುವಕನಾಗಿದ್ದ ಸಮಯದಲ್ಲಿ ನರೇಂದ್ರ ಮೋದಿ ಅವರ ಮನಸ್ಸಿನ ಮೇಲೆ ಸ್ವಾಮಿ ವಿವೇಕಾನಂದರು ಸಾಕಷ್ಟು ಪ್ರಭಾವ ಬೀರಿದ್ದರು. ಮೋದಿಯವರು ಸಾಧುಗಳು ಮತ್ತು ಸಂತರೊಂದಿಗೆ ವಾಸಿಸುತ್ತಿದ್ದ ರಾಮಕೃಷ್ಣ ಮಿಷನ್‌ನಲ್ಲಿ ಆಂತರಿಕ ಅನ್ವೇಷಣೆಯ ಪ್ರಯಾಣ ಪ್ರಾರಂಭವಾಯಿತು. ರಾಮಕೃಷ್ಣ ಮಿಶನ್‌ನಲ್ಲಿ ವಾಸ್ತವ್ಯ ಮಾಡುತ್ತಿದ್ದ ವೇಳೆ ವಿವೇಕಾನಂದರ ಕೋಣೆಯಲ್ಲೂ ಮೋದಿ ಉಳಿದುಕೊಂಡಿದ್ದರು.

ಕರ್ತವ್ಯದ ಜವಾಬ್ದಾರಿಗಳೇನು: ಉತ್ಸಾಹಿ ಓದುಗನಾಗಿದ್ದ ನರೇಂದ್ರ ಮೋದಿ, ಮನಸ್ಸು ಹಾಗೂ ಹೃದಯದಲ್ಲಿ ಕುತೂಹಲಗಳನ್ನು ತುಂಬಿಟ್ಟುಕೊಂಡಿದ್ದ ವ್ಯಕ್ತಿಯಾಗಿದ್ದರು. ತಮ್ಮ ದಿನಚರಿ ಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರ ಉಲ್ಲೇಖಗಳು ಹಾಗೂ ಅವರ ಮಾತುಗಳನ್ನು ಸಂಗ್ರಹಿಸುತ್ತಿದ್ದರು. ಹಿಂದೂ ಸನ್ಯಾಸಿಯ ತತ್ವಶಾಸ್ತ್ರ ಮತ್ತು ಕೊಡುಗೆಗಳ ಬಗ್ಗೆ ಮೋದಿ ನಿಯಮಿತವಾಗಿ ಯುವಕರೊಂದಿಗೆ ಚರ್ಚಿಸುತ್ತಿದ್ದರು.

1991 ರಲ್ಲಿ ಕನ್ಯಾಕುಮಾರಿಯಿಂದ ಪ್ರಾರಂಭವಾದ ಏಕತಾ ಯಾತ್ರೆಯ ಮೂಲಕ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಸಂದೇಶವನ್ನು ಘೋಷಿಸಲಾಯಿತು. 45 ದಿನಗಳ ಯಾತ್ರೆಯನ್ನು ಆಯೋಜಿಸುವ ಬಹುದೊಡ್ಡ ಜವಾಬ್ದಾರಿಯನ್ನು ಮೋದಿಯವರಿಗೆ ವಹಿಸಲಾಗಿತ್ತು. ಕನ್ಯಾಕುಮಾರಿಯಲ್ಲಿದ್ದ ಸ್ವಾಮಿ ವಿವೇಕಾನಂದ ಕಲ್ಲಿನ ಸ್ಮಾರಕಕ್ಕೆ ಮೋದಿ ಹಾಗೂ ಮುರಳಿ ಮನೋಹರ್ ಜೋಶಿ ಭೇಟಿ ನೀಡಿದ್ದ ಚಿತ್ರಗಳೂ ಇವೆ. ಅಮೆರಿಕದಲ್ಲಿ ಗ್ಲೋಬಲ್‌ ವಿಷನ್‌ ಸಮಾವೇಶದಲ್ಲಿ ಮೋದಿ ಮಾತನಾಡಿದರು. 1993 ರಲ್ಲಿ ಸ್ವಾಮಿ ವಿವೇಕಾನಂದರ 1893 ರ ವಿಶ್ವ ಧರ್ಮ ಸಂಸತ್ತಿನಲ್ಲಿ ಮಾಡಿದ ಭಾಷಣದ ಶತಮಾನೋತ್ಸವದ ಆಚರಣೆಗಾಗಿ ವಾಷಿಂಗ್ಟನ್ ಡಿಸಿ ಯಲ್ಲಿ ನಡೆದ ಗ್ಲೋಬಲ್ ವಿಷನ್ 2000 ಸಮಾವೇಶದಲ್ಲಿ ಭಾಗವಹಿಸಲು ಮೋದಿಯನ್ನು ಆಹ್ವಾನಿಸಲಾಯಿತು. ಇದರಲ್ಲಿ 60 ದೇಶಗಳಿಂದ 10,000 ಪ್ರತಿನಿಧಿಗಳು ಭಾಗವಹಿಸಿದ್ದರು.

Swami Vivekananda 159th Birthday: ಸ್ವಾಮಿ ವಿವೇಕಾನಂದರಿಂದ ಯುವಜನ ಕಲಿಯಬೇಕಾದ 10 ಜೀವನ ಪಾಠಗಳು

ವಿವೇಕಾನಂದರ ಚಿಕಾಗೋ ಭಾಷಣ ಶತಮಾನೋತ್ಸವದ ಸಂದರ್ಭದಲ್ಲಿ ಮೋದಿ ಯುವ ಸಮಾವೇಶವನ್ನು ಆಯೋಜಿಸಿದ್ದರು. ಯುವಕರು ಭಾರತೀಯ ಧ್ವಜಗಳನ್ನು ಎತ್ತರಕ್ಕೆ ಹಾರಿಸಿ, ಬ್ಯಾಂಡ್‌ನೊಂದಿಗೆ ಮೆರವಣಿಗೆ ನಡೆಸಿದರು. ರಾಷ್ಟ್ರೀಯ ಹೆಮ್ಮೆಯನ್ನು ಜಾಗೃತಗೊಳಿಸುವ ಮೋದಿಯವರ ಪ್ರಯತ್ನಗಳ ಮೇಲೆ ಸ್ವಾಮಿ ವಿವೇಕಾನಂದರು ತಾತ್ವಿಕ ಪ್ರಭಾವ ಬೀರಿದರು. ವಿದೇಶ ಪ್ರವಾಸದ ವೇಳೆ ಮೋದಿಯವರು ವಿವೇಕಾನಂದರ ಸಂದೇಶವನ್ನು ತಮ್ಮೊಂದಿಗೆ ಕೊಂಡೊಯ್ದರು. ಮಹಾನ್ ಸಂತನ ವಿಚಾರಗಳು ಮತ್ತು ಬೋಧನೆಗಳನ್ನು ಚರ್ಚಿಸುವ ಸಲುವಾಗಿ ವಿದೇಶದಲ್ಲಿನ ಭಾರತೀಯರು ಕೂಡ ಮೋದಿ ಅವರಿಗೆ ಆಹ್ವಾನ ನೀಡುತ್ತಿದ್ದರು. ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಚಿಕಾಗೋ ಭಾಷಣಕ್ಕೆ ಗೌರವವಾಗಿ, ಗುಜರಾತ್ ಸಿಎಂ ನರೇಂದ್ರ ಮೋದಿ ಅವರು 11 ಸೆಪ್ಟೆಂಬರ್ 2012 ರಂದು ಗುಜರಾತ್‌ನಾದ್ಯಂತ ಬೃಹತ್ ಯಾತ್ರೆಯನ್ನು ನಡೆಸಿದ್ದರು.

National Youth Day: ಜಗತ್ತಿನಲ್ಲೇ ಭಾರತ ಶಕ್ತಿಯ ಉತ್ತುಂಗಕ್ಕೇರಲಿದೆ, ವಿವೇಕಾನಂದರ ಭವಿಷ್ಯ ನಿಜವಾಗಿಸೋಣ!

ಅಪರೂಪದ ಪುಸ್ತಕವನ್ನು ಗಿಫ್ಟ್‌ ಆಗಿ ನೀಡಿದ್ದ ಒಬಾಮ:  1893 ರ ವಿಶ್ವ ಧರ್ಮಗಳ ಶೃಂಗಸಭೆಯಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣವನ್ನು ನೆನಪಿಸುವ ಅಪರೂಪದ ಪುಸ್ತಕವಾದ ದಿ ವರ್ಲ್ಡ್ಸ್ ಕಾಂಗ್ರೆಸ್: ರಿಲಿಜನ್ಸ್ ಅಟ್ ದಿ ವರ್ಲ್ಡ್ಸ್ ಕೊಲಂಬಿಯನ್ ಎಕ್ಸ್‌ಪೋಸಿಷನ್ ಅನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು.

Follow Us:
Download App:
  • android
  • ios