ಭಾರತವು ಡಿಸೆಂಬರ್ 1 ರಂದು ಔಪಚಾರಿಕವಾಗಿ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಸರ್ಕಾರದ ಮುಖ್ಯಸ್ಥರ ಮಟ್ಟದಲ್ಲಿ ಮುಂದಿನ G20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆಯಲಿದೆ.

ಭಾರತ (India) ಈಗಾಗಲೇ ಜಿ - 20 ಅಧ್ಯಕ್ಷತೆಯನ್ನು (G20 Presidency) ವಹಿಸಿಕೊಂಡಿದೆ. ಈ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಂಗಳವಾರವಾದ ಇಂದು ರಾಜ ಚಾರ್ಲ್ಸ್‌ III (King Charles III) ಅವರೊಂದಿಗೆ ದೂರವಾಣಿ ಸಂಭಾಷಣೆ (Telephone Conversation) ನಡೆಸಿದರು. ಚಾರ್ಲ್ಸ್‌ III ಯುಕೆ ಸಾರ್ವಭೌಮತ್ವದ ಕಚೇರಿಯನ್ನು ವಹಿಸಿಕೊಂಡ ನಂತರ ಮೊದಲನೆಯ ಬಾರಿ ಪ್ರಧಾನ ಮೋದಿ ಅವರೊಂದಿಗೆ ಸಂಭಾಷಣೆ ನಡೆಸಿದ್ದಾರೆ.ಈ ವೇಳೆ, ರಾಜನ ಆಳ್ವಿಕೆ ಅತ್ಯಂತ ಯಶಸ್ವಿಯಾಗಿರಲೆಂದು ಪ್ರಧಾನಿ ಮೋದಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು, ಇಬ್ಬರೂ ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ಕೇಂದ್ರ ಸರ್ಕಾರ (Central Government) ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹವಾಮಾನ, ಜೀವವೈವಿಧ್ಯದ ಸಂರಕ್ಷಣೆ ಮತ್ತು ಇಂಧನ - ಪರಿವರ್ತನೆಗೆ ಹಣಕಾಸು ಒದಗಿಸುವ ನವೀನ ಪರಿಹಾರಗಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. 

ಇನ್ನು, ಈ ವಿಚಾರಗಳ ಬಗ್ಗೆ ಗೌರವಾನ್ವಿತ ರಾಜನ ಅಚಲ ಆಸಕ್ತಿ ಮತ್ತು ವಕಾಲತ್ತಿನ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿದ್ದಾರೆ. ಡಿಜಿಟಲ್ ಸಾರ್ವಜನಿಕ ಸರಕುಗಳ ಪ್ರಚಾರ ಸೇರಿದಂತೆ ಜಿ-20 ಅಧ್ಯಕ್ಷತೆ ಹಿನ್ನೆಲೆ ಭಾರತದ ಆದ್ಯತೆಗಳ ಬಗ್ಗೆಯೂ ಬ್ರಿಟನ್‌ ರಾಜನಿಗೆ ಪ್ರಧಾನಿ ವಿವರಿಸಿದ್ದಾರೆ ಎಂದು ಸರ್ಕಾರ ಹೇಳಿದೆ. ಭಾರತವು ಡಿಸೆಂಬರ್ 1 ರಂದು ಔಪಚಾರಿಕವಾಗಿ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಸರ್ಕಾರದ ಮುಖ್ಯಸ್ಥರ ಮಟ್ಟದಲ್ಲಿ ಮುಂದಿನ G20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆಯಲಿದೆ.

ಇದನ್ನು ಓದಿ: G20 summit: ಆರ್ಥಿಕತೆ ಮೇಲೆತ್ತುವ ಭಾರತದ ಪ್ರಸ್ತಾವಕ್ಕೆ ಜಿ20 ಬೆಂಬಲ

ಉಭಯ ನಾಯಕರ ಸಂವಾದದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಮಿಷನ್ ಲೈಫ್ ಅಂದರೆ ಪರಿಸರಕ್ಕಾಗಿ ಜೀವನಶೈಲಿಯ ಪ್ರಸ್ತುತತೆಯನ್ನು ವಿವರಿಸಿದರು. ಈ ಮಿಷನ್‌ ಮೂಲಕ ಭಾರತವು ಪರಿಸರ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಐದು ವರ್ಷಗಳ ಕಾರ್ಯಕ್ರಮವಾದ ಮಿಷನ್ ಲೈಫ್, ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ವೈಯಕ್ತಿಕ ಹಾಗೂ ಸಾಮೂಹಿಕ ಕ್ರಿಯೆಯನ್ನು ತಳ್ಳುವ ಭಾರತ-ನೇತೃತ್ವದ ಜಾಗತಿಕ ಸಾಮೂಹಿಕ ಆಂದೋಲನವಾಗಿ ರೂಪಿಸಲಾಗಿದೆ. ನವೆಂಬರ್ 2021 ರಲ್ಲಿ ಸ್ಕಾಟ್ಲೆಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆದ COP26 ನಲ್ಲಿ ಪ್ರಧಾನ ಮಂತ್ರಿ ಮೋದಿ ಇದನ್ನು ಪರಿಚಯಿಸಿದ್ದರು.

ಅಲ್ಲದೆ, ಪ್ರಧಾನಿ ಮೋದಿ ಹಾಗೂ ಬ್ರಿಟನ್‌ ರಾಜ ಚಾರ್ಲ್ಸ್‌, ಕಾಮನ್‌ವೆಲ್ತ್ ರಾಷ್ಟ್ರಗಳ ಬಗ್ಗೆ ಮತ್ತು ಅದರ ಕಾರ್ಯಚಟುವಟಿಕೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉಭಯ ರಾಷ್ಟ್ರಗಳ ನಡುವೆ "ಜೀವಂತ ಸೇತುವೆ"ಯಾಗಿ ಕಾರ್ಯನಿರ್ವಹಿಸುವಲ್ಲಿ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಶ್ರೀಮಂತಗೊಳಿಸುವಲ್ಲಿ ಯುಕೆಯಲ್ಲಿ ಭಾರತೀಯ ಸಮುದಾಯದ ಪಾತ್ರಕ್ಕಾಗಿಯೂ ಇಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: G20 Summit: ಜಿ20 ಅಧ್ಯಕ್ಷತೆ ಅವಧಿ ಭಾರತಕ್ಕೆ ನಿರ್ಣಾಯಕ

ರಾಣಿ ಎಲಿಜಬೆತ್ II ಮರಣದ ನಂತರ ಸೆಪ್ಟೆಂಬರ್‌ನಲ್ಲಿ ಚಾರ್ಲ್ಸ್ III ಅವರನ್ನು ಬ್ರಿಟನ್‌ನ ಹೊಸ ರಾಜ ಎಂದು ಔಪಚಾರಿಕವಾಗಿ ಘೋಷಿಸಲಾಯಿತು. ಚಾರ್ಲ್ಸ್ III ದಿವಂಗತ ರಾಣಿ ಎಲಿಜಬೆತ್ IIನ ಪುತ್ರ. ಇನ್ನೊಂದೆಡೆ, ಲಂಡನ್‌ನಲ್ಲಿ ಬಿಡುಗಡೆಯಾದ ಅವರ ಮೊದಲ ಹೊಸ ವರ್ಷದ ಗೌರವಗಳ ಪಟ್ಟಿಯಲ್ಲಿ, COP26 ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆಯನ್ನು ಎದುರಿಸಲು ನೀಡಿದ ಕೊಡುಗೆಗಾಗಿ ಭಾರತೀಯ ಮೂಲದ ಮಾಜಿ UK ಸಚಿವ ಅಲೋಕ್ ಶರ್ಮಾ ಅವರಿಗೆ ರಾಜ knight ಗೌರವ ನೀಡಿದ್ದಾರೆ.

ಇದನ್ನೂ ಓದಿ: ಜಿ20 ಯಶಸ್ಸಿಗೆ ಸಹಕರಿಸಿ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಕೋರಿಕೆ