ಜಿ20 ಯಶಸ್ಸಿಗೆ ಸಹಕರಿಸಿ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಕೋರಿಕೆ

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸರ್ವಪಕ್ಷ ಸಭೆಯನ್ನು ನಡೆಸಿ, ಮುಂದಿನ ವರ್ಷ ನಡೆಯಲಿರುವ ಜಿ20 ಶೃಂಗ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರ ಕೋರಿದ್ದಾರೆ. ಭಾರತಕ್ಕೆ ಜಿ20 ಅಧ್ಯಕ್ಷನಾಗಲು ಅವಕಾಶ ಸಿಕ್ಕಿದ್ದು, ಇಡೀ ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ. ಶೃಂಗದ ಯಶಸ್ಸಿಗಾಗಿ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು’ ಎಂದು ಕರೆ ನೀಡಿದ್ದಾರೆ.

PM Narendra Modi urges all party leaders for G20 success at all party meeting akb

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸರ್ವಪಕ್ಷ ಸಭೆಯನ್ನು ನಡೆಸಿ, ಮುಂದಿನ ವರ್ಷ ನಡೆಯಲಿರುವ ಜಿ20 ಶೃಂಗ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರ ಕೋರಿದ್ದಾರೆ. ಭಾರತಕ್ಕೆ ಜಿ20 ಅಧ್ಯಕ್ಷನಾಗಲು ಅವಕಾಶ ಸಿಕ್ಕಿದ್ದು, ಇಡೀ ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ. ಶೃಂಗದ ಯಶಸ್ಸಿಗಾಗಿ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು’ ಎಂದು ಕರೆ ನೀಡಿದ್ದಾರೆ.

ಆದರೆ, ಸರ್ಕಾರದ ನಿಲುವನ್ನು ವಿಪಕ್ಷಗಳು ಟೀಕಿಸಿವೆ. ಜಿ20 ಅಧ್ಯಕ್ಷತೆ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಸರದಿಯಲ್ಲಿ ಸಿಗುತ್ತದೆ. ಹೀಗಾಗಿ ಸ್ವಾಭಾವಿಕವಾಗಿ ಅಧ್ಯಕ್ಷತೆ ಭಾರತಕ್ಕೆ ಬಂದಿದೆ. ಇದನ್ನು ಬಿಜೆಪಿ ಸರ್ಕಾರ ತನ್ನ ಸಾಧನೆ ಎಂಬಂತೇ ಬಿಂಬಿಸಬಾರದು ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ (Sitharam Yechuri) ಕಿಡಿಕಾರಿದರು. ಇದೇ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಈ ಹಿಂದೆ ಇದೇ ರೀತಿ ಭಾರತವು ಅಲಿಪ್ತ ಚಳವಳಿ (Non-Aligned Movement) ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು ಎಂದು ಸ್ಮರಿಸಿ, ಮೋದಿಗೆ ಟಾಂಗ್‌ ನೀಡಿದರು.

ಭಾರತಕ್ಕೆ ಜಿ20 ಶೃಂಗಸಭೆ ಅಧ್ಯಕ್ಷತೆ; ಐತಿಹಾಸಿಕ ಗೋಳಗುಮ್ಮಟಕ್ಕೆ ದೀಪಾಲಂಕಾರ

ಜಿ20 ಲೋಗೋದಲ್ಲಿ ಕಮಲ ಚಿಹ್ನೆಗೆ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಆಕ್ಷೇಪಿಸಿದ್ದು, ಜಿ20 ಒಂದು ಪಕ್ಷದ ಅಜೆಂಡಾ ಆಗಿರಬಾರದು. ಲೋಗೋದಲ್ಲಿ ಕಮಲದ ಚಿಹ್ನೆ ಬದಲು ರಾಷ್ಟ್ರಲಾಂಛನ ಇರಬೇಕಿತ್ತು ಎಂದರು. ಉಳಿದಂತೆ ಸಭೆಯಲ್ಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಿಕ್‌(Naveen Patnaik), ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde), ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ (M.K. Stalin) ಸೇರಿ ಹಲವು ರಾಜ್ಯದ ಮುಖ್ಯಮಂತ್ರಿಗಳು ಹಾಜರಿದ್ದರು. ಸರ್ಕಾರದ ಪರವಾಗಿ ಗೃಹ ಸಚಿವ ಅಮಿತ್‌ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹಾಗೂ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಕೂಡಾ ಉಪಸ್ಥಿತರಿದ್ದರು. 2023 ಸೆ. 9 ಹಾಗೂ 10 ರಂದು ನವದೆಹಲಿಯಲ್ಲಿ ಜಿ20 ಸಮ್ಮೇಳನ ನಡೆಯಲಿದ್ದು, 20 ರಾಷ್ಟ್ರಗಳ ನಾಯಕರು ಇದರಲ್ಲಿ ಭಾಗಿಯಾಗಲಿದ್ದಾರೆ.

ಭಾರತದ ಜಿ20 ಅಧ್ಯಕ್ಷ ಸ್ಥಾನ ಆರಂಭ, ಸರ್ವ ಸದ್ಯಸ್ಯರಿಗೆ ಟ್ಯಾಗ್‌ ಮಾಡಿ ಮೋದಿ ಟ್ವೀಟ್‌!

Mann Ki Baat: ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಬಹುದೊಡ್ಡ ಅವಕಾಶ: ಪ್ರಧಾನಿ ಮೋದಿ


 

Latest Videos
Follow Us:
Download App:
  • android
  • ios