Asianet Suvarna News Asianet Suvarna News

G20 summit: ಆರ್ಥಿಕತೆ ಮೇಲೆತ್ತುವ ಭಾರತದ ಪ್ರಸ್ತಾವಕ್ಕೆ ಜಿ20 ಬೆಂಬಲ

  • ಆರ್ಥಿಕತೆ ಮೇಲೆತ್ತುವ ಭಾರತದ ಪ್ರಸ್ತಾವಕ್ಕೆ ಜಿ20 ಬೆಂಬಲ
  •  ಕುಸಿದ ಆರ್ಥಿಕತೆ ಪುನಶ್ಚೇತನಕ್ಕೆ ಭಾರತದಿಂದ ಮಾರ್ಗೋಪಾಯ
  • ಬೆಂಗಳೂರಲ್ಲಿ ನಡೆದ ಜಿ20 ವಿತ್ತ ಸಚಿವರ ಸಭೆಯಲ್ಲಿ ಸಹಮತ
G20 supports Indias proposal to boost economy india rav
Author
First Published Dec 15, 2022, 1:13 AM IST

ಬೆಂಗಳೂರು (ಡಿ.15) : ಕೋವಿಡ್‌ ಬಳಿಕ ಜಾಗತಿಕವಾಗಿ ತಲೆದೋರಿರುವ ಆರ್ಥಿಕ ಹಿಂಜರಿತ, ಹಣದುಬ್ಬರ, ಬೆಲೆ ಏರಿಕೆ, ಸಾಲದ ಸಂಕಷ್ಟಸೇರಿದಂತೆ ಎಲ್ಲ ರೀತಿಯ ಜ್ವಲಂತ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ ಮತ್ತೆ ಸ್ಥಿರತೆಗೆ ಮರಳಲು ಕೈಗೊಳ್ಳಬೇಕಾದ ಆರ್ಥಿಕ ನೀತಿ ನಿರೂಪಣಾ ಕ್ರಮಗಳ ಬಗ್ಗೆ ಭಾರತ ಮಂಡಿಸಿರುವ ಪ್ರಸ್ತಾವನೆಗಳಿಗೆ ಜಿ-20 ಶೃಂಗದ ಮೊದಲ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್‌ ಉಪ ಮುಖ್ಯಸ್ಥರ ಸಭೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಚ್‌ನಲ್ಲಿ ಬುಧವಾರ ನಡೆದ ಶೃಂಗದ 2ನೇ ದಿನದ ಮಹತ್ವದ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಅಜಯ್‌ ಸೇಠ್‌ ಈ ಮಾಹಿತಿ ನೀಡಿದರು.

G20 Summit: ಜಿ20 ಅಧ್ಯಕ್ಷತೆ ಅವಧಿ ಭಾರತಕ್ಕೆ ನಿರ್ಣಾಯಕ

ಜಿ-20 ಅಧ್ಯಕ್ಷತೆ ವಹಿಸಿರುವ ಭಾರತವು ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಎಲ್ಲ ದೇಶಗಳೂ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಆಧಾರವಾಗಿಟ್ಟುಕೊಂಡು ‘ವಸುಧೈವ ಕುಟುಂಬಕಂ’ ಎಂಬ ಪರಿಕಲ್ಪನೆಯಲ್ಲಿ ಹಲವು ಪ್ರಸ್ತಾವನೆಗಳ್ನು ಮಂಡಿಸಿತ್ತು. ಇದಕ್ಕೆ ಸಭೆಯಲ್ಲಿ ಭಾಗಿಯಾಗಿರುವ ಎಲ್ಲ ರಾಷ್ಟ್ರಗಳಿಂದ ಬೆಂಬಲ, ಸಹಕಾರ ವ್ಯಕ್ತವಾಗಿದೆ. ಭಾರತವು ಈ ಬಗ್ಗೆ ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಮುಂದಿನ ಫೆಬ್ರವರಿ 23ರಿಂದ 25ರವರೆಗೆ ನಡೆಯಲಿರುವ ಜಿ-20 ಕಾರ್ಯ ಯೋಜನೆ ಸಭೆಯ ಮುಂದೆ ಮಂಡಿಸುವುದು ಎಂದು ವಿವರಿಸಿದರು.

ಜಾಗತಿಕ ಆರ್ಥಿಕ ಜಾಗತೀಕರಣದ ಲಾಭ ನಷ್ಟಗಳು, ಸಮಸ್ಯೆ, ಸವಾಲುಗಳನ್ನು ಎದುರಿಸಲು ಪ್ರಸಕ್ತ ಸಾಲಿನಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳು ಮತ್ತು ಕೇಂದ್ರ ಬ್ಯಾಂಕುಗಳು ಪರಸ್ಪರ ಸಮನ್ವಯದಿಂದ ಯಾವ ರೀತಿಯ ನೀತಿಗಳನ್ನು ನಿರೂಪಿಸಿ ಪರಿಣಾಮಕಾರಿಯಾಗಿ ಹೇಗೆ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಜಾಗತಿಕವಾಗಿ ಆರ್ಥಿಕ ನೆರವು ಹೇಗೆ ಹೊಂದಿಸಬೇಕು ಎಂಬುದು ಸೇರಿ ಅನೇಕ ವಿಚಾರಗಳ ಬಗ್ಗೆ ಮಹತ್ವದ ಚರ್ಚೆಗಳು ಸಭೆಯಲ್ಲಿ ನಡೆಯಿತು ಎಂದು ಅವರು ತಿಳಿಸಿದರು.

ಶೇ. 60ರಷ್ಟುರಾಷ್ಟ್ರಗಳು ಸಾಲದ ಸುಳಿಯಲ್ಲಿ!:

ಸಭೆಯಲ್ಲಿ ಚರ್ಚೆಯಾದ ಮತ್ತೊಂದು ಮಹತ್ವದ ವಿಚಾರವೆಂದರೆ ಜಾಗತಿಕ ಬಿಕ್ಕಟ್ಟು ಕೋವಿಡ್‌ ಸಾಂಕ್ರಾಮಿಕದ ಬಳಿಕ ಜಗತ್ತಿನ ಶೇ.60 ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಸರ್ಕಾರ ಮಾತ್ರವಲ್ಲ ಕಾರ್ಪೊರೇಟ್‌ ಸಂಸ್ಥೆಗಳೂ ಈ ಸಂಕಷ್ಟಕ್ಕೆ ತುತ್ತಾಗಿವೆ. ಅದರಲ್ಲೂ ಹಿಂದುಳಿದ ಹಾಗೂ ಮಧ್ಯಮ ಆರ್ಥಿಕ ವ್ಯವಸ್ಥೆಯ ರಾಷ್ಟ್ರಗಳು ತೀವ್ರ ಸಂಕಷ್ಟಎದುರಿಸುತ್ತಿವೆ. ಶ್ರೀಲಂಕಾ ಇದಕ್ಕೆ ಉದಾಹರಣೆ. ಹಾಗಾಗಿ ಇದರಿಂದ ಹೊರಬರಲು ಇರುವ ಮಾರ್ಗೋಪಾಯಗಳ ಬಗ್ಗೆಯೂ ಜಿ-20 ಸಭೆ ಸಭೆ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

ಜಿ20 ಯಶಸ್ಸಿಗೆ ಸಹಕರಿಸಿ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಕೋರಿಕೆ

ಒಟ್ಟಾರೆಯಾಗಿ ಹಣಕಾಸು ಹಾದಿಯ ಮೊದಲ ಸಭೆ ಮುಕ್ತಾಯವಾಗಿದ್ದು, ಸಭೆಯಲ್ಲಿ ಜಿ 20 ಸದಸ್ಯತ್ವದ ಯುರೋಪಿಯನ್‌ ಒಕ್ಕೂಟ ಸೇರಿದಂತೆ 20 ದೇಶಗಳ ಹಣಕಾಸು ಸಚಿವರು, ಕೇಂದ್ರೀಯ ಬ್ಯಾಂಕುಗಳ ಗೌರ್ನರ್‌ಗಳು, ಜತೆಗೆ 13 ಅತಿಥಿ ದೇಶಗಳ ಪ್ರತಿನಿಧಿಗಳು, 17 ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಸೇರಿ ಒಟ್ಟು 184 ಪ್ರತಿನಿಧಿಗಳು ಭಾಗವಹಿಸಿದ್ದರು. ಜಾಗತಿಕ ಸಮಸ್ಯೆ, ಸವಾಲುಗಳಿಗೆ ಪರಿಹಾರ ನೀತಿ ರೂಪಿಸುವುದು ಮತ್ತು ಆರ್ಥಿಕ ಸಹಕಾರದ ಬಗ್ಗೆ ಭಾರತದ ಎಲ್ಲ ಪ್ರಸ್ತಾವನೆಗಳಿಗೆ ಜಿ20 ಸಭೆಯಲ್ಲಿ ಬೆಂಬಲ, ಸಹಕಾರ ವ್ಯಕ್ತವಾಗಿದೆ ಎಂದು ಅಜಯ್‌ ಸೇಠ್‌ ಹೇಳಿದರು.

Follow Us:
Download App:
  • android
  • ios