ನವದೆಹಲಿ(ಜ.25):  ಕೊರೋನಾ ವೈರಸ್ ನಡುವೆ ಭಾರತ 72ನೇ ಗಣರಾಜ್ಯೋತ್ಸವ ಆಚರಿಸುತ್ತಿದೆ. ಇದೇ ಮೊದಲ ಬಾರಿಗೆ ವಿದೇಶಿ ಅತಿಥಿಗಳಿಲ್ಲದೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ನೆರೆ ರಾಷ್ಟ್ರಗಳಿಂದ ಗಡಿ ವಿಸ್ತರಣೆ, ಘರ್ಷಣೆ, ಉಗ್ರರ ನುಸುಳುವಿಕೆ, ಅಪ್ರಚೋದಿತ ದಾಳಿ ಸೇರಿದಂತೆ ಹಲವು ಸವಾಲುಗಳನ್ನು ಭಾರತ ವೀರ ಯೋಧರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು 72ನೇ ಗಣತಂತ್ರ ದಿನದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ಗಣರಾಜ್ಯೋತ್ಸವಕ್ಕೆ ಕರಾಚಿ ಬಂದರು ದಾಳಿ ಸ್ಥಬ್ಧಚಿತ್ರ; ಇಂಡೋ-ಪಾಕ್ ಯುದ್ಧ ಮೆಲುಕು ಹಾಕಲಿದೆ ನೌಕಾಪಡೆ!.

ದೇಶದ ಗಡಿ ರಕ್ಷಣೆಯಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಧೈರ್ಯಶಾಲಿ ಯೋಧರಿಗೆ ದೇಶ ಕೃತಜ್ಞರಾಗಿರಬೇಕು ಎಂದು ರಾಮನಾಥ್ ಕೋವಿಂದ್ ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಇನ್ನು ದೇಶ ಎದುರಿಸುತ್ತಿರುವ ಕೊರೋನಾ ವೈರಸ್ ಕರಿತು ಮುನ್ನಚ್ಚೆರಿಕೆ ಪಾಲಿಸಲು ಮನವಿ ಮಾಡಿದ್ದಾರೆ.

 

ಕೊರೋನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಕೋವಿಂದ್, ಕೊರೋನಾ ವಾರಿಯರ್ಸ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಎಲ್ಲಾ ಕ್ಷೇತ್ರಗಳು ಕೊರೋನಾದಿಂದ ಸಮಸ್ಯೆ ಎದುರಿಸಿದೆ. ಇದರಲ್ಲಿ ಶಿಕ್ಷಣ ಕೂಡ ಪ್ರಮುಖವಾಗಿದೆ. ಕೊರೋನಾ ಮುಕ್ತ ಮಾಡಲು ಲಸಿಕೆ ಪಡೆಯುವಂತೆ ಸೂಚಿಸಿದ್ದಾರೆ.

ರೈತರ ಕುರಿತು ಕೋವಿಂದ್ ಹಲವು ಪ್ರಮುಖ ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ರೈತರ ದೇಶಕ್ಕೆ ನೀಡುತ್ತಿರುವ ಕೊಡುಗೆ ಸ್ಮರಿಸಿದ ಕೋವಿಂದ್, ಕೊರೋನಾ ಸಂಕಷ್ಟದ ಸಮಯದಲ್ಲೂ ರೈತರ ಬೆಳೆ ಬೆಳೆದಿದ್ದಾರೆ. ಈ ರೈತರ ಅಭಿವೃದ್ಧಿಗೆ ಭಾರತ ಬದ್ಧವಾಗಿದೆ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.