- Home
- News
- India News
- ಗಣರಾಜ್ಯೋತ್ಸವಕ್ಕೆ ಕರಾಚಿ ಬಂದರು ದಾಳಿ ಸ್ಥಬ್ಧಚಿತ್ರ; ಇಂಡೋ-ಪಾಕ್ ಯುದ್ಧ ಮೆಲುಕು ಹಾಕಲಿದೆ ನೌಕಾಪಡೆ!
ಗಣರಾಜ್ಯೋತ್ಸವಕ್ಕೆ ಕರಾಚಿ ಬಂದರು ದಾಳಿ ಸ್ಥಬ್ಧಚಿತ್ರ; ಇಂಡೋ-ಪಾಕ್ ಯುದ್ಧ ಮೆಲುಕು ಹಾಕಲಿದೆ ನೌಕಾಪಡೆ!
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಹಲವು ವಿಶೇಷತೆಗಳಿವೆ. ಅದರಲ್ಲೂ ಭಾರತೀಯ ನೌಕಾಪಡೆ ವಿಶೇಷ ಕ್ಷಣವನ್ನು ಮೆಲುಕು ಹಾಕುತ್ತಿದೆ. 1971ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿನ ಭಾರತೀಯ ನೌಕಾಪಡೆಯ ದಿಗ್ವಿಜಯವನ್ನು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕಾಣಸಿಗಲಿದೆ.

ಸದಾ ಭಾರತದೊಂದಿದೆ ಜಗಳಕ್ಕೆ ನಿಲ್ಲುವ, ಭಯೋತ್ಪಾದಕರನ್ನು ಮುಂದಿಟ್ಟು ಕಾಲು ಕೆರೆದು ನಿಲ್ಲುವ ಪಾಕಿಸ್ತಾನ ಪುಂಡಾಟಕ್ಕೆ ಭಾರತ ಪ್ರತಿ ಭಾರಿ ಉತ್ತರ ನೀಡಿದೆ. ಇನ್ನು ಗಡಿಯೊಳಕ್ಕೆ ಪ್ರವೇಶಿಸಿದರೆ ಸುಮ್ಮನೆ ಬಿಡುವ ಜಾಯಮಾನ ಭಾರತದಲ್ಲ. ಹೀಗೆ 1971ರಲ್ಲಿ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಇದೇ ಇಂಡೋ ಪಾಕ್ ಪಾರ್

1971ರ ಇಂಡೋ-ಪಾಕ್ ವಾರ್ ಸಮಯದಲ್ಲಿ ನೌಕಾ ಪಡೆಯ ಕಾರ್ಯಾಚರಣೆಯ ನಿರ್ಣಾಯಕ ಕ್ಷಣಗಳನ್ನು ಮತ್ತೆ ತೋರಿಸುವ ಪ್ರಯತ್ನವನ್ನು ಭಾರತೀಯ ನೌಕಾಪಡೆ ಮಾಡುತ್ತಿದೆ. ಈ ಬಾರಿಯ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾರತೀಯ ನೌಕಾಪಡೆಯ ಯಶಸ್ವಿ ಕರಾಚಿ ಬಂದರು ದಾಳಿ ಸ್ಥಬ್ಧ ಚಿತ್ರ ಪ್ರದರ್ಶಿಸಲಿದೆ.

ಕ್ಷಿಪಣಿ ಹಾರಿಸುವ ನೌಕೆಯ ಸ್ಥಬ್ಧ ಚಿತ್ರವನ್ನು ಭಾರತೀಯ ನೌಕಾಪಡೆ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲಿದೆ. ಇದೇ ಸ್ಥಬ್ಧ ಚಿತ್ರ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ನಡೆಸಿದ ಯಶಸ್ವಿ ದಾಳಿ ಕತೆ ಹೇಳಲಿದೆ.

ಕ್ಷಿಪಣಿ ತುಂಬಿದ ಬೋಟ್ ಹೊತ್ತು ಐಎನ್ಎಸ್ ವಿಕ್ರಾಂತ್ ಕರಾಚಿ ಬಂದಿನ ಮೇಲೆ ದಾಳಿ ಮಾಡಿ ಭಾರತಕ್ಕೆ ಬಹುದೊಡ್ಡ ಗೆಲುವು ತಂದುಕೊಟ್ಟಿತು. ಈ ದಾಳಿಯನ್ನು ಪಾಕಿಸ್ತಾನ ಊಹಿಸಲು ಸಾಧ್ಯವಿಲ್ಲದಂತೆ ಮಾಡಿಮುಗಿಸಿತ್ತು.

ಡಿಸೆಂಬರ್ 3 ಮತ್ತು 4 ರಂದು ಭಾರತದ ಐಎನ್ಎಸ್ ವಿಕ್ರಾಂತ್ ಕ್ಷಿಣಪಣಿ ಬೋಟ್‌ಗಳನ್ನು ಹೊತ್ತು ಕರಾಚಿಯತ್ತ ಸಾಗಿತ್ತು. ಡಿಸೆಂಬರ್ 8 ಮತ್ತು 9 ರಂದು ಆಪರೇಶನ್ ಟ್ರೈಡೆಂಟ್ ಹಾಗೂ ಆಪರೇಶನ್ ಪೈಥಾನ್ ಹೆಸರಿನಲ್ಲಿ ಭಾರತ ದಾಳಿ ಸಂಘಟಿಸಿತ್ತು.

INS ವಿಕ್ರಾಂತ್‌ನಿಂದ ಮೂಲಕ ವಾಯು ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಪೂರ್ವ ಪಾಕಿಸ್ತಾನ ಧ್ವಂಸವಾಗಿತ್ತು. ಇಷ್ಟೇ ಅಲ್ಲ ಈ ದಾಳಿ ಬಾಂಗ್ಲಾದೇಶ ಉದಯಕ್ಕೂ ಕಾರಣವಾಯಿತು ಎಂದು ಭಾರತೀಯ ನೌಕಾಪಡೆ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ಹೇಳಿದ್ದಾರೆ

ಈ ದಾಳಿ ಭಾರತದ ಗೆಲವಿನ ಜೊತೆಗೆ ನೌಕಾಪಡೆಯ ಧೀರ, ವೀರ ಯೋಧರ ತ್ಯಾಗ ಬಲಿದಾನಗಳನ್ನು ವಿವರಿಸುತ್ತಿದೆ. ಭಾರತೀಯ ನೌಕಾಪಡೆ ಇತಿಹಾಸದಲ್ಲಿ ದಾಖಲಾಗಿರುವ ಅತ್ಯಂತ ಸವಾಲಿನ ಯುದ್ದ ಇದಾಗಿತ್ತು. ಈ ಯುದ್ಧದಲ್ಲಿ ವೀರಮರಣನ್ನಪ್ಪಿದ 8 ನೌಕಾಪಡೆ ಯೋಧರಿಗೆ ಮಹಾವೀರ ಚಕ್ರ ನೀಡಲಾಗಿರುವ ಮಾಹಿತಿಯನ್ನು ಸ್ಥಬ್ಧಚಿತ್ರ ನೀಡಲಿದೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ