ಈ ಹುಡುಗಿ ಕೊರಳಲ್ಲಿ ತರತರದ ಹೂಮಾಲೆಗಳಿವೆ. ಕೈಯಲ್ಲೂ ಮಾಲೆಗಳಿವೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾಳೆ.
ಪ್ರಯಾಗ್‌ರಾಜ್: ಸೋಶಿಯಲ್ ಮೀಡಿಯಾದಿಂದಾಗಿ ಎಷ್ಟೋ ಜನರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ. ಈ ಹಿಂದೆ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಬಾಲಿವುಡ್ ಗಾಯಕಿಯಾಗಿರೋ ವಿಷಯ ಎಲ್ಲರಿಗೂ ಗೊತ್ತಿದೆ. ಅದೇ ರೀತಿ ರಸ್ತೆ ಬದಿ ಕಡಲೆ ಬೀಜ ಮಾರಾಟ ಮಾಡುತ್ತಿದ್ದ ಹೇಳಿದ ಕಚ್ಚಾ ಬದಾಮ್ ಹಾಡಿಗೆ ಇಡೀ ಭಾರತವೇ ಹೆಜ್ಜೆ ಹಾಕಿತ್ತು. ಉಪೇಂದ್ರ ಅವರ ಏನಿಲ್ಲ ಏನಿಲ್ಲ ಎಂಬ ಹಾಡು ಮತ್ತೊಮ್ಮೆ ಟ್ರೆಂಡ್ ಸೃಷ್ಟಿ ಮಾಡಿದ್ದಕ್ಕೆ ಇಡೀ ಕರ್ನಾಟಕವೇ ಸಾಕ್ಷಿಯಾಗಿತ್ತು. ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳೆದಲ್ಲಿನ ಅನೇಕ ಸನ್ಯಾಸಿ, ಸಾಧ್ವಿಯರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಮಹಾಕುಂಭದಲ್ಲಿ ಮಾಲೆ, ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಯುವತಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಯುವತಿಯನ್ನು ರಂಬೆ, ಮೇನಕೆಯರಿಗೆ ಹೋಲಿಕೆ ಮಾಡುತ್ತಿದ್ದಾರೆ.
ಮಹಾಕುಂಭಮೇಳದ ವೇಳೆ ಮಾಲೆಗಳನ್ನು ಮಾರಲು ಬಂದ ಯುವತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾಳೆ. ಅನೇಕರು ಈ ಹುಡುಗಿಯನ್ನು ಮೋನಾಲಿಸಾಗೆ ಹೋಲಿಸುತ್ತಾರೆ. ಈ ಹುಡುಗಿಯ ಚಿತ್ರಗಳು ಮತ್ತು ವೀಡಿಯೊವನ್ನು ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳು, ವೀಡಿಯೊಗಳು ಮತ್ತು ಸೆಲ್ಫಿ ತೆಗೆದುಕೊಳ್ಳಲು ಅನೇಕ ಜನರು ಅವಳ ಬಳಿಗೆ ಬರುವುದನ್ನು ಕಾಣಬಹುದು.
ಯುವತಿಯ ಸುಂದರವಾದ ಕೂದಲು ಹೆಣೆಯಲ್ಪಟ್ಟಿದೆ. ಆಕೆಯ ಪ್ರಕಾಶಮಾನವಾದ ಮರಳಿನ ಮೈಬಣ್ಣ ಎಲ್ಲರನ್ನು ಆಕರ್ಷಿಸುತ್ತಿದೆ. ಅಕೆಯ ಬೂದು ಬಣ್ಣದ ಕಣ್ಣುಗಳು ನೋಡಗರನ್ನು ಸಮ್ಮೋಹನಗೊಳಸಿ ಆಕೆಯ ಹಿಂದೆ ಬರುವಂತೆ ಮಾಡಿವೆ. ಹೀಗೆ ಅನೇಕ ರೀತಿಯಲ್ಲಿ ನೆಟ್ಟಿಗರು ಮಾಲೆ ಮಾರುವ ಯುವತಿಯ ಅಂದವನ್ನು ವರ್ಣನೆ ಮಾಡುತ್ತಿದ್ದಾರೆ. ಆದ್ರೆ ಈ ಯುವತಿ ತಾನು ಇಂದೋರ್ ಮೂಲದವಳೆಂದು ವಿಡಿಯೋದಲ್ಲಿ ಹೇಳಿದ್ದಾಳೆ.
ಇದನ್ನೂ ಓದಿ: ನೀವೂ ಹೀಗೆ ಮಾಡಿದ್ದೀರಾ? ನಕ್ಕು ನಕ್ಕು ಸುಸ್ತಾದ ಏರ್‌ಪೋರ್ಟ್ ಸಿಬ್ಬಂದಿ, ಇದುವೇ ಫ್ರೆಂಡ್‌ಶಿಪ್ ಎಂದ್ರು ಜನ
ಬೇರೆ ಬೇರೆ ಫೋಟೋ ಮತ್ತು ವೀಡಿಯೊಗಳಲ್ಲಿ ಜನರು ಅವಳ ಸುತ್ತಲೂ ಜಮಾಯಿಸಿರುವುದನ್ನು ಕಾಣಬಹುದು. ಆಕೆ ಎಲ್ಲಿಂದ ಬಂದಿದ್ದಾಳೆ ಎಂದು ಕೆಲವರು ಕೇಳುತ್ತಾರೆ. ಅವಳ ಕೊರಳು ವಿವಿಧ ಬಗೆಯ ಹಾರಗಳಿಂದ ತುಂಬಿದೆ. ಮತ್ತು ಮಾರಾಟಕ್ಕೆ ತಂದಿರುವ ಮಾಲೆಗಳು ಅವಳ ಕೈಗಳಲ್ಲಿ ನೇತಾಡುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು.
ಈ ಹುಡುಗಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಬೇಗ ವೈರಲ್ ಆದಳು. ಎಷ್ಟೊಂದು ಸುಂದರ ಕಣ್ಣುಗಳು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಎಷ್ಟು ಸುಂದರಿ ಎಂದು ಕಾಮೆಂಟ್ ಮಾಡಿದವರೂ ಇದ್ದಾರೆ. ಏತನ್ಮಧ್ಯೆ, ಮಹಾಕುಂಭ ಮೇಳದಿಂದ ಅನೇಕ ರೀತಿಯ ವೀಡಿಯೊಗಳು ಮತ್ತು ಸುದ್ದಿಗಳು ಬರುತ್ತಿವೆ. ಐಐಟಿ ಬಾಬಾ ಕೂಡ ವೈರಲ್ ಆಗಿದೆ. ಐಐಟಿಯಲ್ಲಿ ಶಿಕ್ಷಣ ಪಡೆದಿರುವ ಅಭಯ್ ಸಿಂಗ್ ಕುಂಭಮೇಳದ ಸಮಯದಲ್ಲಿ ತಾರೆಯಾಗಿದ್ದರು. ಸಿಂಗ್ ತಮ್ಮ ಏರೋಸ್ಪೇಸ್ ಇಂಜಿನಿಯರಿಂಗ್ ಅನ್ನು ಐಐಟಿ ಬಾಂಬೆಯಿಂದ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ವಧು ಕಣ್ಣೀರಿಟ್ಟು ಹೇಳಿದ್ದನ್ನು ನೋಡಿ ವರ ಶಾಕ್; ಇಲ್ಲೇ ಹಿಂಗೆ, ಮುಂದೆ ಹೆಂಗೆ ಎಂದ ನೆಟ್ಟಿಗರು
