ದೆಹಲಿ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ| ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮುನ್ನಡೆ ಅಂಕಿ ಅಂಶ| ಆಪ್ 58, ಬಿಜೆಪಿ 12, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ| ಕೇಜ್ರಿವಾಲ್ ಅಭಿನಂದಿಸಿದ ಪ್ರಶಾಂತ್ ಕಿಶೋರ್| ಆಪ್ ಗೆಲ್ಲಿಸಿದ್ದಕ್ಕೆ ದೆಹಲಿ ಮತದಾರರಿಗೆ ಪ್ರಶಾಂತ್ ಕಿಶೋರ್ ಅಭಿನಂದನೆ|
ನವದೆಹಲಿ(ಫೆ.11): ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಆಡಳಿತಾರೂಢ ಆಪ್ ಮುನ್ನಡೆ ಕಾಯ್ದುಕೊಂಡಿದೆ. ಇದುವರೆಗೂ ಬಂದ ಅಂಕಿ ಅಂಶಗಳ ಪ್ರಕಾರ ಆಪ್ 58, ಬಿಜೆಪಿ 12, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ.
ಇನ್ನು ಆಪ್ ಪಕ್ಷದ ಕೈ ಹಿಡಿದಿರುವ ದೆಹಲಿ ಮತದಾರರನ್ನು ಅಭಿನಂದಿಸಿರುವ ಜೆಡಿಯು ಉಚ್ಛಾಟಿತ ನಾಯಕ ಪ್ರಶಾಂತ್ ಕಿಶೋರ್, ಥ್ಯಾಂಕ್ಯೂ ದೆಹಲಿ ಎಂದು ಟ್ವೀಟ್ ಮಾಡಿದ್ದಾರೆ.
ಅಭೂತಪೂರ್ವ ಗೆಲುವಿನೊಂದಿಗೆ ಮತ್ತೆ ದೆಹಲಿ ಗದ್ದುಗೆ ಏರಲಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಅಭಿನಂದನೆಗಳು ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.
ಮತ್ತೆ ಸಮೀಕರಣ ಬದಲು: ಆಪ್ ಪಾಳೆಯದಲ್ಲಿ ಸಂತಸ, ಬಿಜೆಪಿ ಪಾಳೆಯದಲ್ಲಿ ಆತಂಕ!
ಭಾರತದ ಆತ್ಮವನ್ನು(ಆಪ್ ಸಿದ್ಧಾಂತ) ಬೆಂಬಲಿಸಿದ್ದಕ್ಕೆ ನಾನು ದೆಹಲಿ ಮತದಾರರನ್ನು ಅಭಿನಂದಿಸುತ್ತೇನೆ ಎಂದು ಪ್ರ ಶಾಂತ್ ಕಿಶೋರ್ ತಮ್ಮ ಟ್ವೀಟ್’ನಲ್ಲಿ ತಿಳಿಸಿದ್ದಾರೆ.
