ನವದೆಹಲಿ(ಫೆ.11): ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಆಡಳಿತಾರೂಢ ಆಪ್ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಮುನ್ನಡೆ ಆಟದಲ್ಲಿ ಮುಂದಡಿ ಇಟ್ಟಿದ್ದ ಬಿಜೆಪಿ ಮತ್ತೆ ಕುಸಿತದ ಹಾದಿ ಹಿಡಿದಿದೆ.

ಇದುವರೆಗೂ ಬಂದ ಅಂಕಿ ಅಂಶಗಳ ಪ್ರಕಾರ ಆಪ್ 58, ಬಿಜೆಪಿ 12, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ಆಪ್ ಮುನ್ನಡೆ ಕ್ಷಣಕ್ಷಣಕ್ಕೆ  ಏರುತ್ತಿದ್ದು, ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಮುನ್ನಡೆ ಅಂಕಿ ಅಂಶ ಕುಸಿಯುತ್ತಿದೆ. 

ಮುನ್ನಡೆ ಅಂಕಿ ಅಂಶಗಳಿಂದ ಆಪ್ ಪಾಳೆಯದಲ್ಲಿ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿದ್ದು, ದೆಹಲಿಯ ಆಪ್ ಕೇಂದ್ರ ಕಚೇರಿಯಲ್ಲಿ ಭಾರೀ ಸಂಭ್ರಮಾಚರಣೆ ನಡೆಯುತ್ತಿದೆ.

ಬದಲಾಗುತ್ತಿರುವ ಸಮೀಕರಣ: ಮುನ್ನಡೆ ಜಿದ್ದಾಜಿದ್ದಿಯಲ್ಲಿ ಬಿಜೆಪಿ ಸಂಖ್ಯೆ ಏರಿಕೆ!

ಅತ್ತ ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸೋಲಿನ ಕಾರ್ಮೋಡ ಆವರಿಸಿದ್ದು, ಸೋಲನ್ನು ಸ್ವೀಕರಿಸುವ ಸಿದ್ಧತೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.