ಚುನಾವಣಾ ತಂತ್ರ ರೂಪಿಸಲು ಪ್ರಶಾಂತ್ ಕಿಶೋರ್ ಫೀಸ್ ಪಡೆದಿದ್ದು ಬಹಿರಂಗ!
ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ತಮ್ಮ ಚುನಾವಣಾ ಕಾರ್ಯತಂತ್ರಕ್ಕೆ 100 ಕೋಟಿ ರೂ.ಗೂ ಹೆಚ್ಚು ಶುಲ್ಕ ವಿಧಿಸುವುದಾಗಿ ಬಹಿರಂಗಪಡಿಸಿದ್ದಾರೆ. ಬಿಹಾರ ಉಪಚುನಾವಣಾ ಪ್ರಚಾರದ ವೇಳೆ ಈ ವಿಚಾರ ಬಹಿರಂಗವಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕಾರಣಿಗಳಿಗೆ ಚುನಾವಣಾ ಕಾರ್ಯತಂತ್ರ ರೂಪಿಸಲು ನಾನು ಬರೋಬ್ಬರಿ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಶುಲ್ಕವನ್ನು ಪಡೆಯುತ್ತೇನೆ ಎಂದು ಚುನಾವಣಾ ಚಾಣಕ್ಯ ಹಾಗೂ ಜನ್ ಸೂರಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಬಹಿರಂಗಪಡಿಸಿದ್ದಾರೆ. ಮುಂಬರುವ ಬಿಹಾರ ಉಪಚುನಾವಣೆಯ ಪ್ರಚಾರದಲ್ಲಿ ಅಕ್ಟೋಬರ್ 31 ರಂದು ಪ್ರಶಾಂತ್ ಕಿಶೋರ್ ಈ ಬಹಿರಂಗಪಡಿಸಿದ್ದಾರೆ.
ಈ ವಿಚಾರ ದೇಶದ ರಾಜಕಾರಣದಲ್ಲಿ ಚರ್ಚೆ ಹುಟ್ಟು ಹಾಕಿದೆ. ಬೆಳಗಂಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಶಾಂತ್ ಈ ವಿಚಾರವನ್ನು ಬಹಿರಂಗಪಡಿಸಿದರು. ನನ್ನ ತಂತ್ರದ ಕಾರಣದಿಂದ ಹತ್ತು ಸರ್ಕಾರಗಳು ಅಧಿಕಾರದಲ್ಲಿವೆ ಎಂದಿದ್ದಾರೆ. ಬೆಳಗಂಜ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್ , ಮುಸ್ಲಿಂ ಸಮುದಾಯದ ಸದಸ್ಯರನ್ನು ಒಳಗೊಂಡ ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ , ಜನರು ತಮ್ಮ ಅಭಿಯಾನಗಳಿಗೆ ಹಣದ ಮೂಲದ ಬಗ್ಗೆ ಆಗಾಗ್ಗೆ ಪ್ರಶ್ನಿಸುತ್ತಾರೆ ಎಂದು ವಿವರಿಸಿದರು.
ಗೂಗಲ್‌ನಲ್ಲಿ PhD ಇಂಟರ್ನ್‌ಶಿಪ್, ಇಂಜಿನಿಯರ್ ಆದವರು ಈಗಲೇ ಅರ್ಜಿ ಸಲ್ಲಿಸಿ!
ತಮ್ಮ ಪ್ರಚಾರಕ್ಕೆ ಹಣವಿಲ್ಲ ಅಂತ ತಿಳ್ಕೊಂಡಿದ್ದೀರಾ? ನಾನು ದುರ್ಬಲ ಅಂತ ತಿಳ್ಕೊಬೇಡಿ. ನನ್ನ ಪ್ರಚಾರಕ್ಕಾಗಿ ಟೆಂಟ್‌ಗಳು ಮತ್ತು ವೇದಿಕೆಗಳನ್ನು ಸ್ಥಾಪಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಅಂದುಕೊಳ್ಳಬೇಡಿ ಎಂದಿದ್ದಾರೆ. ಪ್ರಶಾಂತ್ ಕಿಶೋರ್ ಜನರಿಗೆ ಪ್ರಶ್ನೆ ಕೇಳಿದ್ದು, ಇನ್ನು ಬಿಹಾರದಲ್ಲಿ ನನ್ನಷ್ಟು ಶುಲ್ಕವನ್ನು ಯಾರೂ ಕೇಳಿರಲು ಸಾಧ್ಯವೇ ಇಲ್ಲ. ನಾನು ಕೇವಲ ಒಂದು ಚುನಾವಣೆಯಲ್ಲಿ ಯಾರಿಗಾದರೂ ಪ್ಲ್ಯಾನ್ ಕೊಟ್ಟರೆ ಅದಕ್ಕೆ ನನ್ನ ಶುಲ್ಕ 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು. ಮುಂದಿನ ಎರಡು ವರ್ಷಗಳವರೆಗೆ, ನಾನು ಅಂತಹ ಒಂದು ಚುನಾವಣಾ ಸಲಹೆಯೊಂದಿಗೆ ನನ್ನ ಪ್ರಚಾರವನ್ನು ಮುಂದುವರಿಸಬಹುದು ಎಂದಿದ್ದಾರೆ.
ಕೇರಳ ಎಕ್ಸ್‌ಪ್ರೆಸ್ ರೈಲು ಅಪಘಾತ, ನಾಲ್ವರು ಪೌರ ಕಾರ್ಮಿಕರು ದುರ್ಮರಣ
ಬೆಳಗಂಜ್ ಅಲ್ಲದೆ, ಇಮಾಮ್‌ಗಂಜ್, ರಾಮಗಢ ಮತ್ತು ತರಾರಿ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಈ ವರ್ಷದ ಆರಂಭದಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ ಆಯಾ ಶಾಸಕರು ರಾಜೀನಾಮೆ ನೀಡಿದಾಗ ಎಲ್ಲಾ ಸ್ಥಾನಗಳು ಖಾಲಿ ಬಿದ್ದವು.
ಶುಕ್ರವಾರದ ಪ್ರಚಾರದಲ್ಲಿ ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹೊರತು ಕೇಂದ್ರವು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಕಾನೂನನ್ನು ಪರಿಚಯಿಸುವ ಮೊದಲು ಸರ್ಕಾರವು ಅದರ ಪ್ರಭಾವಕ್ಕೆ ಒಳಗಾಗುವ ಜನರ ವಿಶ್ವಾಸವನ್ನು ಪಡೆಯಬೇಕು ಎಂದು ಅವರು ಹೇಳಿದರು.