ಕಾರು ಹತ್ತಿಸಿ ಇಬ್ಬರ ಸಾಯಿಸಿದ್ದ ಉದ್ಯಮಿ ಪುತ್ರನಿಗೆ ಪ್ರಬಂಧ ಬರೆಯುವ ಷರತ್ತುಬದ್ಧ ಜಾಮೀನು!

ಪೊರ್ಶೆ ಕಾರು ಹತ್ತಿಸಿ ಇಬ್ಬರು ಅಮಾಯಕರ ಸಾವಿಗೆ ಕಾರಣನಾಗಿದ್ದ ಶ್ರೀಮಂತ ಉದ್ಯಮಿಯ ಪುತ್ರನಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಆದರೆ ಅಪಘಾತದ ಕುರಿತು ಪ್ರಬಂಧ, ಟ್ರಾಫಿಕ್ ಪೊಲೀಸರ ಜೊತೆ ಕೆಲಸ ಸೇರಿದಂತೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.
 

Porsche Accident Death Case Write Essay on Accident Juvenile Justice grant conditional Bail to Minor ckm

ಮುಂಬೈ(ಮೇ.20)  ಶ್ರೀಮಂತ ಬಿಲ್ಡರ್ ಪುತ್ರ ಲಕ್ಷುರಿ ಪೊರ್ಶೆ ಕಾರು ಚಲಾಯಿಸಿ, ಇಬ್ಬರು ಮೃತಪಟ್ಟ ಘಟನೆ ಇತ್ತೀಚೆಗೆ ಮುಂಬೈನಲ್ಲಿ ನಡೆದಿತ್ತು. ಅಪ್ರಾಪ್ತ ಚಾಲನೆಯಿಂದ ಬೈಕ್‌ನಲ್ಲಿ ತೆರಳುತ್ತಿದ್ದ ಅಮಾಯಕರು ಬಲಿಯಾಗಿದ್ದರು. ಅಪ್ರಾಪ್ತ ಚಾಲಕನಿಗೆ ಇದೀಗ ಬಾಲ ನ್ಯಾಯ ಮಂಡಳಿ ಷರತ್ತುಬದ್ಧ ಜಾಮೀನು ನೀಡಿದೆ. ಜಾಮೀನು ಷರತ್ತು ಭಾರಿ ಸಂಚಲನ ಸೃಷ್ಟಿಸಿದೆ. ಅಪಘಾತದ ಕುರಿತು ಪ್ರಬಂಧ, 15 ದಿನ ಟ್ರಾಫಿಕ್ ಪೊಲೀಸರ ಜೊತೆ ಕೆಲಸ ಮಾಡಲು ಜಾಮೀನು ಷರತ್ತಿನಲ್ಲಿ ಹೇಳಲಾಗಿದೆ.

17 ವರ್ಷದ ವೇದಾಂತ್ ಅಗರ್ವಾಲ್ ಅಜಾಗರೂಕತೆಗೆ ಇಬ್ಬರು ಬಲಿಯಾಗಿದ್ದರು. ಘಟನೆ ಬಳಿಕ ಅಪ್ರಾಪ್ತ ವೇದಾಂತ್ ಅಗರ್ವಾಲ್ ವಶಕ್ಕೆ ಪಡೆದು ಬಾಲಾಪರಾಧಿ ಕಾನೂನಿನ ಅನ್ವಯ ನಡೆದುಕೊಂಡಿತ್ತು. ಇಂದು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಘಟನೆ ಕುರಿತು ವಿಚಾರಣೆ ನಡೆಸಿದ ಬಾಲ ನ್ಯಾಯ ಮಂಡಳಿ, ಷರತ್ತುಬದ್ಧ ಜಾಮೀನು ನೀಡಿದೆ. 

ಪೋರ್ಶೆ ಕಾರು ಹತ್ತಿಸಿ ಇಬ್ಬರ ಕೊಂದ ಬಿಲ್ಡರ್‌ ಪುತ್ರ: ಹಿಗ್ಗಾಮುಗ್ಗಾ ಥಳಿಸಿದ ಜನ

ಅಪ್ರಾಪ್ತನಾಗಿರುವ ಕಾರಣ ಪೊರ್ಶೆ ಕಾರು ಅಪಘಾತದ ಕುರಿತು ಸುದೀರ್ಘ ಪ್ರಬಂಧ ಬರೆಯುವಂತೆ ಸೂಚಿಸಲಾಗಿದೆ. ಕಾರು ಡ್ರೈವಿಂಗ್, ಅತೀ ವೇಗ, ಘಟನೆ ಕುರಿತು ಪ್ರಬಂಧ ಬರೆಯಲು ಸೂಚಿಸಲಾಗಿದೆ. ಇದರ ಜೊತೆಗೆ ಟ್ರಾಫಿಕ್ ಪೊಲೀಸರ ಜೊತೆ 15 ದಿನ ಕೆಲಸ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ. ಈ ಷರತ್ತಿಗೆ ಒಪ್ಪಿಕೊಂಡಿರುವ ವೇದಾಂತ್ ಅಗರ್ವಾಲ್ ಇದೀಗ ಜಾಮೀನನ ಮೇಲೆ ಬಿಡುಗಡೆಯಾಗಿದ್ದಾರೆ.ಬಾಲ ನ್ಯಾಯ ಮಂಡಳಿ ಷರತ್ತುಗಳು ಇದೀಗ ಚರ್ಚೆಯಾಗುತ್ತಿದೆ. 

ಪುಣೆಯ ಬ್ರಹ್ಮ ರಿಲಿಯಾಲ್ಟಿ ಬಿಲ್ಡರ್ ಮಾಲೀಕ ವಿಶಾಲ್ ಅರ್ವಾಲ್ ಪುತ್ರ ವೇದಾಂತ್ ಅಗರ್ವಾಲ್ ಐಷಾರಾಮಿ ಪೊರ್ಶೆ ಕಾರನ್ನು ಅತೀವೇಗವಾಗಿ ಚಲಾಯಸಿದ್ದರು. ಅತೀ ವೇಗದ ಕಾರಣ ಕಾರು ನಿಯಂತ್ರಣ ಕಳೆದುಕೊಂಡು ಬೈಕ್ ಹಾಗೂ ಇತರ ವಾಹನಗಳಿಗೆ ಡಿಕ್ಕೆಯಾಗಿತ್ತು. ಅಪಘಾತದ ತೀವ್ರತೆಗೆ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. 

ಘಟನೆ ನಡೆದ ಬೆನ್ನಲ್ಲೇ ಸ್ಥಳೀಯರು ಆಗಮಿಸಿ ವೇದಾಂತ್ ಅಗರ್ವಾಲ್ ಕಾರಿನಿಂದ ಹಿಡಿದೆಳು ಥಳಿಸಿದ್ದರು. ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಉದ್ಯಮಿ ಪುತ್ರ ವೇದಾಂತ್ ಮುಂಬೈನ ಪ್ರಖ್ಯಾತ ಪಬ್‌ಗೆ ತೆರಳಿ ಮದ್ಯಪಾನ ಮಾಡಿದ್ದಾನೆ. ಬಳಿಕ ಕಾರು ಚಲಾಯಿಸಿ ಅಪಘಾತ ಮಾಡಿದ್ದಾನೆ. ಇತ್ತ ಪಬ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅಪ್ರಾಪ್ತನಿಗೆ ಮದ್ಯ ನೀಡಿದ ಕಾರಣಕ್ಕೆ ಪಬ್ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆಘಾತ, ಟೀಕೆ, ನೋವು; 4ನೇ ಮಹಡಿ ರೂಫ್‌ನಿಂದ ರಕ್ಷಿಸಲ್ಪಟ್ಟ ಮಗುವಿನ ತಾಯಿ ಸಾವು!

Latest Videos
Follow Us:
Download App:
  • android
  • ios