ಇತ್ತೀಚೆಗೆ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ 7 ತಿಂಗಳ ಮಗು ಜಾರಿ ಬಿದ್ದಿತ್ತು. ಮೆಲ್ಛಾವಣಿಯಲ್ಲಿ ಸಿಲುಕಿಕೊಂಡ ಮಗುವನ್ನು ಭಾರಿ ಸಾಹಸದಿಂದ ರಕ್ಷಿಸಲಾಗಿತ್ತು. ಆದರೆ ಈ ಘಟನೆಯಿಂದ ತೀವ್ರ ಟೀಕೆಗೆ ಗುರಿಯಾದ ತಾಯಿ ಇದೀಗ ಬದುಕು ಅಂತ್ಯಗೊಳಿಸಿದ್ದಾಳೆ.

ಚೆನ್ನೈ(ಮೇ.20) ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ನಿಂತಿದ್ದ ತಾಯಿಯ ಕೈಯಿಂದ 7 ತಿಂಗಳ ಮಗು ಅಚಾನಕ್ಕಾಗಿ ಜಾರಿ ಬಿದ್ದಿತ್ತು. ನೀರು 4ನೇ ಮಹಡಿಯ ಬದಿಯಲ್ಲಿರುವ ಮೆಲ್ಛಾವಣಿಯಲ್ಲಿ ಅದೃಷ್ಠವಶಾತ್ ಮಗು ಸಿಲುಕಿತ್ತು. ಅಪಾರ್ಟ್‌ಮೆಂಟ್ ನಿವಾಸಿಗಳ ಸಾಹಸದಿಂದ ಮಗುವನ್ನು ರಕ್ಷಿಸಲಾಗಿತ್ತು. ಈ ಘಟನೆ ಬಳಿಕ ತಾಯಿ ರಮ್ಯಾ ನಿರ್ಲಕ್ಷ್ಯ ಎಂದು ಭಾರಿ ಟೀಕೆಗಳು ಕೇಳಿಬಂದಿತ್ತು. ಈ ಘಟನೆ ನಡೆದ ಒಂದೇ ತಿಂಗಳಲ್ಲೇ ಇದೀಗ ಮಗುವಿನ ತಾಯಿ ರಮ್ಯ ಮೃತಪಟ್ಟಿದ್ದಾರೆ. ಕೊಯಂಬತ್ತೂರಿನತಾಯಿ ಮನೆಯಲ್ಲಿ ರಮ್ಯಾ ಮೃತಪಟ್ಟಿದ್ದಾರೆ.

ಮಗು ಕೈಯಿಂದ ಜಾರಿ ಅತೀ ದೊಡ್ಡ ಅನಾಹುತ ಸಂಭವಿಸಿತ್ತು. ಆದರೆ ಅದೃಷ್ಠದ ಬಲ, ಸ್ಥಳೀಯರ ಕಾರ್ಯಾಚರಣೆ ನೆರವಿನಿಂದ ಮಗುವನ್ನು ರಕ್ಷಿಸಲಾಗಿತ್ತು. ಈ ಘಟನೆ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆಗಳು ಕೇಳಿಬಂದಿತ್ತು. ತಾಯಿ ನಿರ್ಲಕ್ಷ್ಯ ಎಂದೇ ಹೇಳಲಾಗಿತ್ತು. ಕುಟುಂಬಸ್ಥರು, ಆಪ್ತರು ಕೂಡ ರಮ್ಯಾ ವಿರುದ್ಧ ಕೆಂಡ ಕಾರಿದ್ದರು. ಅಸಲಿಗೆ ಅತ್ಯಂತ ಆರೈಕೆಯಿಂದ ಮಗುವನ್ನು ನೋಡಿಕೊಂಡಿದ್ದಾರೆ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಹೇಳಿದ್ದರು. ಮಗು ಆಕಸ್ಮಿಕವಾಗಿ ಜಾರಿದೆ. ಇದರಲ್ಲಿ ರಮ್ಯಾಳನ್ನು ದೂಷಿಸುವುದು ಸರಿಯಲ್ಲ, ಆಕೆಯ ಆರೈಕೆ, ಪಾಲನೆಯಲ್ಲಿ ಎಳ್ಳಷ್ಟು ದೋಷವಿಲ್ಲ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಹೇಳಿದ್ದರು. ಆದರೆ ಟೀಕೆಗಳು ಮಾತ್ರ ನಿಂತಿರಲಿಲ್ಲ.

8ನೇ ಪ್ಲೋರ್‌ನಲ್ಲಿ ನೇತಾಡ್ತಿದ್ದ ಮಗುವನ್ನು ರಕ್ಷಿಸಿದ ಯುವಕ : ವಿಡಿಯೋ ವೈರಲ್‌

ಮಗು ಕೈಜಾರಿದ ಆಘಾತದಿಂದ ರಮ್ಯಾ ಹೊರಬಂದಿರಲಿಲ್ಲ. ಇತ್ತ ಟೀಕೆಗಳಿಂದ ರಮ್ಯಾ ತೀವ್ರ ಅಸ್ವಸ್ಥಗೊಂಡಿದ್ದರು. ತಾಯಿ ಮನೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ರಮ್ಯಾಳನ್ನು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ವಿಷ ಸೇವಿಸಿರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. 

Scroll to load tweet…

ಏಪ್ರಿಲ್ 28ರಂದು ಚೆನ್ನೈನ ಅಪಾರ್ಟ್‌ಮೆಂಟ್‌ನಲ್ಲಿ ದುರಂತ ಘಟನೆಯಲ್ಲಿ ಅದೃಷ್ಠದಿಂದ 7 ತಿಂಗಳ ಮಗು ಪಾರಾಗಿತ್ತು. ಬಾಲ್ಕನಿಯಲ್ಲಿ ನಿಂತಿದ್ದ ರಮ್ಯಾ ಕೈಯಿಂದ ಮಗು ಜಾರಿ ಬಿದ್ದಿತ್ತು. ಪ್ಯಾಸೇಜ್‌ನಲ್ಲಿ ನೀರು ಒಳಬರದಂತೆ ಹಾಕಿದ್ದ ಮೆಲ್ಚಾವಣಿಯಲ್ಲಿ ಮಗು ಸಿಲುಕಿಕೊಂಡಿತ್ತು. ಮಗು ಮೆಲ್ಛಾವಣಿಯಲ್ಲಿ ಸಿಲುಕಿಕೊಂಡ ಅಳಲು ಆರಂಭಿಸಿತ್ತು. ಇತ್ತ ರಮ್ಯಾ ಸಹಾಯಕ್ಕೂ ಕೂಗಿಕೊಂಡಿದ್ದಾಳೆ. ತಕ್ಷಣೆ ಕುಟುಂಬಸ್ಥರು ಓಡೋಡಿ ಬಂದಿದ್ದಾರೆ. ಒಂದು ಎಲೆ ಅಲುಗಾಡಿದರೂ ಮಗು 4ನೇ ಮಹಡಿಯಿಂದ ಕೆಳಕ್ಕೆ ಬೀಳುವ ಅಪಾಯವಿತ್ತು.

ಇತ್ತ ಸ್ಥಳೀಯರು ಕಿಟಕಿ ಮೂಲಕ ಹತ್ತಿ ಸಾಹಸ ಮಾಡಿದ್ದರೆ. ಹಲವರು ನೆರವು ನೀಡಿದ್ದಾರೆ. ಸಾಹಸ ಹಾಗೂ ಧೈರ್ಯದಿಂದ ಮಗುವನ್ನು ರಕ್ಷಿಸಲಾಗಿತ್ತು. ಈ ಕಾರ್ಯಾಚರಣೆ ವಿಡಿಯೋ ಭಾರಿ ವೈರಲ್ ಆಗಿತ್ತು. ಸ್ಥಳೀಯರ ಸಾಹಸ, ಧೈರ್ಯಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು. 

ಒಂದು ಗಂಟೆಯೊಳಗೆ 6 ಮಕ್ಕಳಿಗೆ ಜನ್ಮ ನೀಡಿದ ಪಾಕಿಸ್ತಾನದ ಮಹಾತಾಯಿ