Asianet Suvarna News Asianet Suvarna News

ಪೋರ್ಶೆ ಕಾರು ಹತ್ತಿಸಿ ಇಬ್ಬರ ಕೊಂದ ಬಿಲ್ಡರ್‌ ಪುತ್ರ: ಹಿಗ್ಗಾಮುಗ್ಗಾ ಥಳಿಸಿದ ಜನ

ವೇಗವಾಗಿ ಬರುತ್ತಿದ್ದ ಪೋರ್ಶೆ ಕಾರೊಂದು ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುಂಬೈನ ಕಲ್ಯಾಣಿ ನಗರದಲ್ಲಿ ಈ ಘಟನೆ ನಡೆದಿದೆ. 

Mumbai Bramha Realty Founder son vedaanth agarwal kills two By hitting speedy Porsche car People beat him up akb
Author
First Published May 19, 2024, 2:42 PM IST

ಮುಂಬೈ: ವೇಗವಾಗಿ ಬರುತ್ತಿದ್ದ ಪೋರ್ಶೆ ಕಾರೊಂದು ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಬಿಲ್ಡರ್‌ ಒರ್ವರ ಪುತ್ರನೋರ್ವ ವೇಗವಾಗಿ ಐಷಾರಾಮಿ ಪೋರ್ಶೆ ಕಾರು ಓಡಿಸಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಬೈಕ್ ಸೇರಿದಂತೆ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಇದರಿಂದ ಸಿಟ್ಟಿಗೆದ್ದ ಜನ, ಕಾರು ಚಾಲನೆ ಮಾಡುತ್ತಿದ್ದ ವೇದಾಂತ್ ಅಗರ್ವಾಲ್‌ ಎಂಬಾತನನ್ನು ಕಾರಿನಿಂದ ಹೊರಗೆ ಎಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮುಂಬೈನ ಕಲ್ಯಾಣಿ ನಗರದಲ್ಲಿ ಈ ಘಟನೆ ನಡೆದಿದೆ. 

ವೇದಾಂತ್ ಅಗರ್ವಾಲ್ ಪುಣೆಯಲ್ಲಿ ಪುಣೆಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಬ್ರಹ್ಮ ರಿಯಾಲ್ಟಿಯ ಮಾಲೀಕ  ವಿಶಾಲ್ ಅಗರ್ವಾಲ್ ಎಂಬುವವರ ಪುತ್ರನಾಗಿದ್ದಾನೆ. ಮಿತಿ ಮೀರಿದ ಐಷಾರಾಮಿ ಪೋರ್ಶೆ ಕಾರಿನಲ್ಲಿ ವೇಗವಾಗಿ ಆಗಮಿಸಿದ ಈತ ನಿಯಂತ್ರಣ ತಪ್ಪಿ ಬೈಕ್ ಹಾಗೂ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬೈಕ್‌ನಲ್ಲಿದ್ದ ಅನಿಸ್ ಅವ್ಲಿಯ ಹಾಗೂ ಅಶ್ವಿನಿ ಕೋಸ್ಟಾ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯರವಾಡ ಪೊಲೀಸ್‌ ಠಾಣೆಯಲ್ಲಿ ಮೃತರ ಸ್ನೇಹಿತರಾದ ಇಕೀಬ್ ರಂಜಾನ್ ಮುಲ್ಲಾ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಪೋರ್ಶೆ ಕಾರು ಚಲಾಯಿಸುತ್ತಿದ್ದ ಅಗರ್ವಾಲ್ ಕಲ್ಯಾಣಿ ನಗರದ ಪಬ್‌ವೊಂದರಿಂದ ಆಗಮಿಸುತ್ತಿದ್ದ ಎಂದು ತಿಳಿದು ಬಂದಿದೆ. ಆದರೆ ಆತ ಪಾನಮತ್ತನಾಗಿದ್ದನೋ ಇಲ್ಲವೋ ಎಂಬ ಬಗ್ಗೆ ಪೊಲೀಸರು ಇನ್ನಷ್ಟೇ ತನಿಖೆ ನಡೆಸಬೇಕಿದೆ. ಘಟನೆಯಿಂದ ರೊಚ್ಚಿಗೆದ್ದ ಜನ ಮಾತ್ರ ಆತನನ್ನು ಕಾರಿನಿಂದ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. 

1.5 ಕೋಟಿ ಮೊತ್ತದ ಐಷಾರಾಮಿ ಪೋರ್ಶೆ ಕಾರಲ್ಲಿ ಹುಲ್ಲು ಸಾಗಿಸಿದ ರೈತ ಮಹಿಳೆ: ವೀಡಿಯೋ ಸಖತ್ ವೈರಲ್  

ದುಬೈನಲ್ಲಿ ಪೊರ್ಶೆ ಡ್ರೈವಿಂಗ್, UAE ಡ್ರೈವಿಂಗ್ ಪರೀಕ್ಷೆ ಪಾಸ್ ಮಾಡಿದ ಮಾಧವನ್ ಪುತ್ರ!

 

Latest Videos
Follow Us:
Download App:
  • android
  • ios